AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟಾರ್​ ಚಿತ್ರಗಳ ಜೊತೆ ಡಾರ್ಲಿಂಗ್​ ಕೃಷ್ಣ ಪೈಪೋಟಿ: ಅ.15ಕ್ಕೆ ಶ್ರೀಕೃಷ್ಣ ಜಿಮೇಲ್​ ಡಾಟ್​ ಕಾಮ್​ ಬಿಡುಗಡೆ

ಡಾರ್ಲಿಂಗ್ ಕೃಷ್ಣ ಮತ್ತು ಭಾವನಾ ಮೆನನ್​ ಜೋಡಿಯ ‘ಶ್ರೀಕೃಷ್ಣ ಜಿಮೇಲ್​ ಡಾಟ್​ ಕಾಮ್’ ಚಿತ್ರ ವಿಜಯದಶಮಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗುತ್ತಿದೆ. ಈ ಚಿತ್ರಕ್ಕೆ ನಾಗಶೇಖರ್​ ನಿರ್ದೇಶನ ಮಾಡಿದ್ದಾರೆ.

ಸ್ಟಾರ್​ ಚಿತ್ರಗಳ ಜೊತೆ ಡಾರ್ಲಿಂಗ್​ ಕೃಷ್ಣ ಪೈಪೋಟಿ: ಅ.15ಕ್ಕೆ ಶ್ರೀಕೃಷ್ಣ ಜಿಮೇಲ್​ ಡಾಟ್​ ಕಾಮ್​ ಬಿಡುಗಡೆ
ಭಾವನಾ ಮೆನನ್​, ಡಾರ್ಲಿಂಗ್​ ಕೃಷ್ಣ
TV9 Web
| Updated By: ಮದನ್​ ಕುಮಾರ್​|

Updated on: Oct 12, 2021 | 12:01 PM

Share

ಚಿತ್ರಮಂದಿರಗಳಲ್ಲಿ ಶೇ.100 ಆಸನ ಭರ್ತಿಗೆ ಅನುಮತಿ ಸಿಕ್ಕ ಬೆನ್ನಲ್ಲೇ ಅನೇಕ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ರಿಲೀಸ್​ ಆಗುತ್ತಿವೆ. ದುನಿಯಾ ವಿಜಯ್​ ನಟನೆಯ ‘ಸಲಗ’ ಮತ್ತು ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಚಿತ್ರ ಅ.14ರಂದು ಬಿಡುಗಡೆ ಆಗುತ್ತಿವೆ. ಅದರ ಮರುದಿನವೇ, ಅಂದರೆ ಅ.15ರಂದು ಡಾರ್ಲಿಂಗ್​ ಕೃಷ್ಣ ನಟನೆ ‘ಶ್ರೀಕೃಷ್ಣ ಜಿಮೇಲ್​ ಡಾಟ್​ ಕಾಮ್​’ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ಕೃಷ್ಣಗೆ ಜೋಡಿಯಾಗಿ ಭಾವನಾ ಮೆನನ್​ ನಟಿಸಿದ್ದಾರೆ. ಖ್ಯಾತ ನಿರ್ದೇಶನ ನಾಗಶೇಖರ್​ ಆ್ಯಕ್ಷನ್​-ಕಟ್​ ಹೇಳಿದ್ದು, ಸಂದೇಶ್​ ನಾಗರಾಜ್​ ಬಂಡವಾಳ ಹೂಡಿದ್ದಾರೆ.

ಶೇ.50ರಷ್ಟು ಆಸನ ಭರ್ತಿ ಮಿತಿ ಇದ್ದಾಗಲೇ ಈ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕ ಸಂದೇಶ್​ ನಾಗರಾಜ್​ ಸಿದ್ಧರಿದ್ದರು. ಈಗ ಶೇ.100ರಷ್ಟು ಆಕ್ಯುಪೆನ್ಸಿಗೆ ಅವಕಾಶ ಸಿಕ್ಕಿರುವುದು ಅವರಿಗೆ ಖುಷಿ ನೀಡಿದೆ. ‘ದಸರಾಗೆ ಸಾಲುಸಾಲು ರಜೆ ಇದೆ. ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರಲು ಅನುಕೂಲವಾಗುತ್ತದೆ. ಈ ವೇಳೆ ಇನ್ನೂ ಎರಡು ಚಿತ್ರಗಳು ಬಿಡುಗಡೆ ಆಗುತ್ತಿವೆ. ಎಲ್ಲಾ ಚಿತ್ರಗಳಿಗೂ ಒಳ್ಳೆಯದಾಗಲಿ’ ಎನ್ನುತ್ತಾರೆ ಸಂದೇಶ್ ನಾಗರಾಜ್.

ಈ ಚಿತ್ರದಲ್ಲಿ ಹಿರಿಯ ನಟ ದತ್ತಣ್ಣ ಜೊತೆ ಅನೇಕ ದೃಶ್ಯಗಳಲ್ಲಿ

ನಟಿಸುವ ಅವಕಾಶ ಕೃಷ್ಣ ಅವರಿಗೆ ಸಿಕ್ಕಿತು. ಅದು ಅವರಿಗೆ ಹೆಚ್ಚು ಖುಷಿ ನೀಡಿದೆ. ‘ನಾಗಶೇಖರ್ ಅವರ ನಿರ್ದೇಶನ ಅಂದ ಮೇಲೆ ಕಥೆ, ಹಾಡುಗಳು ಎಲ್ಲಾ ಚೆನ್ನಾಗಿರುತ್ತವೆ. ಈ ಚಿತ್ರ ಕೂಡ ತುಂಬಾ ಚೆನ್ನಾಗಿದೆ. ದತ್ತಣ್ಣ ಅವರಂತಹ ಹಿರಿಯರೊಂದಿಗೆ ನಟಿಸಿದ್ದು ಮರೆಯಲಾಗದ ಅನುಭವ. ನನ್ನೊಂದಿಗೆ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಸೊಗಸಾಗಿದೆ’ ಎಂಬುದು ಡಾರ್ಲಿಂಗ್ ಕೃಷ್ಣ ಮಾತುಗಳು.

ಈ ಚಿತ್ರದಲ್ಲಿ ರಿಷಬ್​​ ಶೆಟ್ಟಿ ಕೂಡ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ತಾವು ಹೀರೋ ಆಗಿದ್ದರೂ ಕೂಡ ಇದರಲ್ಲಿ ಪೋಷಕ ಮಾತ್ರ ನಿಭಾಯಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ನಾಗಶೇಖರ್​, ‘ಈ ಸಿನಿಮಾದಲ್ಲಿ ವಿಭಿನ್ನವಾದ ಕಥೆ ಇದೆ. ನಾನು ಮತ್ತು ಪ್ರೀತಂ ಗುಬ್ಬಿ ಚಿತ್ರಕಥೆ ಬರೆದಿದ್ದೇವೆ. ಸುಮಾರು 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್, ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದಿದ್ದಾರೆ.

ಬೃಂದಾ ಎನ್. ಜಯರಾಂ ಅವರು ಈ ಚಿತ್ರದ ಸಹ ನಿರ್ಮಾಪಕರು. ಚಂದನ್ ಗೌಡ ದ್ವಿತೀಯ ನಾಯಕರಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಸಾಧುಕೋಕಿಲ, ಅಚ್ಯುತ್​ ಕುಮಾರ್​, ಸಾತ್ವಿಕ್ ಮುಂತಾದವರು ನಟಿಸಿದ್ದಾರೆ. ಐದು ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ, ಅರುಣ್ ಸಾಗರ್ ಕಲಾ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ:

ವಯಸ್ಸಿನ ಬಗ್ಗೆ ರಮ್ಯಾ ಆಡಿದ ಮಾತಿಗೆ ಕಿಚ್ಚನ ಪ್ರತಿಕ್ರಿಯೆ; ‘ಕೋಟಿಗೊಬ್ಬ 3’ ಸುದ್ದಿಗೋಷ್ಠಿಯಲ್ಲಿ ಸುದೀಪ್​ ಹೇಳಿದ್ದೇನು?

ಶಿವಣ್ಣನಿಗೆ ಅಪ್ಪು ನಿರ್ದೇಶನ, ಉಪ್ಪಿ ಅಸಿಸ್ಟೆಂಟ್​​ ಡೈರೆಕ್ಟರ್​, ಸಂತೋಷ್​ ಆನಂದ್​ರಾಮ್​ ಡೈಲಾಗ್​ ರೈಟರ್

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!