‘ರಾಣ’ ಚಿತ್ರದಲ್ಲಿ ರಾಗಿಣಿ ಸಖತ್​ ಡ್ಯಾನ್ಸ್​; ಕಮಾಲ್​ ಮಾಡಲು ಸಜ್ಜಾದ ‘ತುಪ್ಪದ ಬೆಡಗಿ’

ನಟಿ ರಾಗಿಣಿ ದ್ವಿವೇದಿ ಅವರು ‘ರಾಣ’ ಚಿತ್ರಕ್ಕೆ ಸಾಥ್​ ನೀಡಿದ್ದಾರೆ. ಈ ಚಿತ್ರದ ಒಂದು ಸ್ಪೆಷಲ್​ ಹಾಡಿನಲ್ಲಿ ಅವರು ಬಿಂದಾಸ್​ ಆಗಿ ಸ್ಟೆಪ್​​ ಹಾಕಲಿದ್ದು, ಇಮ್ರಾನ್​ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಲಿದ್ದಾರೆ.

‘ರಾಣ’ ಚಿತ್ರದಲ್ಲಿ ರಾಗಿಣಿ ಸಖತ್​ ಡ್ಯಾನ್ಸ್​; ಕಮಾಲ್​ ಮಾಡಲು ಸಜ್ಜಾದ ‘ತುಪ್ಪದ ಬೆಡಗಿ’
ರಾಗಿಣಿ ದ್ವಿವೇದಿ

ಖ್ಯಾತ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್​ ನಟಿಸುತ್ತಿರುವ ‘ರಾಣ’ ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಚಿತ್ರತಂಡದಿಂದ ಈಗೊಂದು ಹೊಸ ನ್ಯೂಸ್​ ಹೊರಬಿದ್ದಿದೆ. ‘ರಾಣ’ ಸಿನಿಮಾತಂಡಕ್ಕೆ ನಟಿ ರಾಗಿಣಿ ದ್ವಿವೇದಿ ಸೇರ್ಪಡೆ ಆಗಿದ್ದಾರೆ. ಹಾಗಂತ ಅವರು ಹೀರೋಯಿನ್​ ಅಲ್ಲ. ಒಂದು ಸ್ಪೆಷಲ್​ ಹಾಡಿನಲ್ಲಿ ‘ತುಪ್ಪದ ಬೆಡಗಿ’ ಹೆಜ್ಜೆ ಹಾಕಲಿದ್ದಾರೆ. ಆ ಮೂಲಕ ಅವರು ‘ರಾಣ’ ತಂಡದ ಭಾಗವಾಗಿದ್ದಾರೆ.

ಈ ವಿಶೇಷ ಹಾಡಿಗೆ ಸಾಹಿತ್ಯ ಬರೆದಿರುವುದು ಶಿವು ಬೇರಗಿ. ಈ ಹಿಂದೆ ‘ಚುಟು ಚುಟು ಅಂತೈತಿ..’, ‘ಯಕ್ಕಾ ನಿನ್​ ಮಗಳು ನಂಗೆ ಚಿಕ್ಕೋಳಾಗಲ್ವಾ..’ ಮುಂತಾದ ಹಾಡುಗಳನ್ನು ಬರೆದು ಅವರು ಜನಮನ ಗೆದ್ದಿದ್ದಾರೆ. ಈಗ ಅವರು ‘ರಾಣ’ ಚಿತ್ರಕ್ಕಾಗಿ ಆಕರ್ಷಕ ಸಾಹಿತ್ಯ ಬರೆದಿದ್ದು, ಆ ಹಾಡಿಗೆ ಡ್ಯಾನ್ಸ್​ ಮಾಡುವ ಅವಕಾಶ ರಾಗಿಣಿ ಪಾಲಿಗೆ ಒಲಿದು ಬಂದಿದೆ.

ರಾಗಿಣಿಗೆ ಸ್ಪೆಷಲ್ ಸಾಂಗ್​ಗಳು ಹೊಸದೇನೂ ಅಲ್ಲ. ‘ವಿಕ್ಟರಿ’ ಚಿತ್ರದ ‘ಯಕ್ಕಾ ನಿನ್​ ಮಗಳು ನಂಗೆ ಚಿಕ್ಕೋಳಾಗಲ್ವಾ..’ ಹಾಡಿನಲ್ಲಿ ಅವರು ನಟ ಶರಣ್​ ಜೊತೆ ಬಿಂದಾಸ್​ ಆಗಿ ಸ್ಟೆಪ್​ ಹಾಕಿದ್ದರು. ಈಗ ‘ರಾಣ’ ಸಿನಿಮಾದಲ್ಲಿ ಯಾವ ರೀತಿ ಮೋಡಿ ಮಾಡಲಿದ್ದಾರೆ ಎಂದು ತಿಳಿಯಲು ಅವರ ಫ್ಯಾನ್ಸ್​ ಕಾದಿದ್ದಾರೆ. ಈ ಹಾಡಿಗೆ ಖ್ಯಾತ ಕೊರಿಯೋಗ್ರಾಫರ್​ ಇಮ್ರಾನ್​ ಸರ್ದಾರಿಯಾ ಅವರು ನೃತ್ಯ ನಿರ್ದೇಶನ ಮಾಡಲಿದ್ದಾರೆ. ಆ ಕಾರಣದಿಂದಲೂ ನಿರೀಕ್ಷೆ ಹೆಚ್ಚಿದೆ.

‘ರಾಣ’ ಚಿತ್ರಕ್ಕೆ ನಂದಕಿಶೋರ್ ನಿರ್ದೇಶನ ಮಾಡುತ್ತಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನೀರ್ದೇಶನದಲ್ಲಿ ಹಾಡುಗಳು ಮೂಡಿಬರುತ್ತಿವೆ. ಶ್ರೇಯಸ್​ ಮಂಜುಗೆ ನಾಯಕಿಯರಾಗಿ‌ ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ. ಕೆ. ಮಂಜು ಅರ್ಪಿಸುವ ಈ ಚಿತ್ರವನ್ನು ಗುಜ್ಜಲ್ ಪುರುಷೋತ್ತಮ್ ನಿರ್ಮಿಸುತ್ತಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ವಿಶ್ವ ಕಲಾ ನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಪ್ರಶಾಂತ್ ರಾಜಪ್ಪ ಸಂಭಾಷಣೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.

ಕೆಲವೇ ದಿನಗಳ ಹಿಂದೆ ಈ ಸಿನಿಮಾದ ಫಸ್ಟ್​ಲುಕ್​ ಟೀಸರ್​ ಬಿಡುಗಡೆ ಆಗಿತ್ತು. ಆ ಕಾರ್ಯಕ್ರಮಕ್ಕೆ ನಟ ಉಪೇಂದ್ರ ಮುಖ್ಯ ಅತಿಥಿಯಾಗಿ ಬಂದು ಶುಭ ಹಾರೈಸಿದ್ದರು.

ಇದನ್ನೂ ಓದಿ:

ವಯಸ್ಸಿನ ಬಗ್ಗೆ ರಮ್ಯಾ ಆಡಿದ ಮಾತಿಗೆ ಕಿಚ್ಚನ ಪ್ರತಿಕ್ರಿಯೆ; ‘ಕೋಟಿಗೊಬ್ಬ 3’ ಸುದ್ದಿಗೋಷ್ಠಿಯಲ್ಲಿ ಸುದೀಪ್​ ಹೇಳಿದ್ದೇನು?

‘ಚರಂಡಿ ಕ್ಲೀನ್​ ಮಾಡುವವನ ಪಾತ್ರ ಮಾಡ್ತೀನಿ’: ದುನಿಯಾ ವಿಜಯ್​ ನಿರ್ದೇಶನದಲ್ಲಿ ಶಿವಣ್ಣನಿಗೆ ನಟಿಸುವ ಆಸೆ

Read Full Article

Click on your DTH Provider to Add TV9 Kannada