ಫೋರ್ಬ್ಸ್​ ಸೌತ್​ ಸೆಲೆಬ್ರಿಟಿ ಸ್ಪೆಷಲ್​ ಎಡಿಷನ್​ನಲ್ಲಿ ಯಶ್​; ಟ್ವಿಟರ್​ನಲ್ಲಿ ಟ್ರೆಂಡ್​ ಆದ #YashBoss

TV9 Digital Desk

| Edited By: Rajesh Duggumane

Updated on:Oct 11, 2021 | 5:21 PM

Forbes South Celebrity Special Edition: ಫೋರ್ಬ್ಸ್​ ಮ್ಯಾಗಜಿನ್​ ತುಂಬಾನೇ ಫೇಮಸ್​. ಇದರ ಮುಖಪುಟದಲ್ಲಿ ಫೋಟೋ ಬರಬೇಕು ಎಂದರೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರಬೇಕು. ಈ ಮ್ಯಾಗಜಿನ್​ ದೇಶಮಟ್ಟದಲ್ಲಿ ಬಿಡುಗಡೆ ಆಗುತ್ತದೆ.

ಫೋರ್ಬ್ಸ್​ ಸೌತ್​ ಸೆಲೆಬ್ರಿಟಿ ಸ್ಪೆಷಲ್​ ಎಡಿಷನ್​ನಲ್ಲಿ ಯಶ್​; ಟ್ವಿಟರ್​ನಲ್ಲಿ ಟ್ರೆಂಡ್​ ಆದ #YashBoss
ಯಶ್
Follow us

ಕೆಜಿಎಫ್ ಸಿನಿಮಾ​ ತೆರೆಕಂಡ ನಂತರದಲ್ಲಿ ಯಶ್​ ಹೆಸರು ದೇಶಾದ್ಯಂತ ಖ್ಯಾತಿ ಪಡೆದುಕೊಂಡಿದೆ. ಬಾಲಿವುಡ್​ ಮಂದಿ ಕೂಡ ಸ್ಯಾಂಡಲ್​ವುಡ್​ನತ್ತ ಮುಖ ಮಾಡುವಂತೆ ಮಾಡಿದ್ದು ಕೆಜಿಎಫ್​ ಸಿನಿಮಾ. ಈಗ ಯಶ್​ ಖ್ಯಾತಿ ದಿನಕಳೆದಂತೆ ಹೆಚ್ಚುತ್ತಲೇ ಇದೆ. ವಿಶೇಷ ಎಂದರೆ, ಫೋರ್ಬ್ಸ್​​ ರಿಲೀಸ್​ ಮಾಡಿರುವ ಸೌತ್​ ಸೆಲೆಬ್ರಿಟಿ ಸ್ಪೆಷಲ್​​ ಎಡಿಷನ್​ನಲ್ಲಿ ಯಶ್​ ಫೋಟೋ ಕೂಡ ರಾರಾಜಿಸಿದೆ. ಇದು ಫ್ಯಾನ್ಸ್​ಗೆ ಸಖತ್​ ಖುಷಿ ನೀಡಿದೆ.  

ಫೋರ್ಬ್ಸ್​ ಮ್ಯಾಗಜಿನ್​ ತುಂಬಾನೇ ಫೇಮಸ್​. ಇದರ ಮುಖಪುಟದಲ್ಲಿ ಫೋಟೋ ಬರಬೇಕು ಎಂದರೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರಬೇಕು. ಈ ಮ್ಯಾಗಜಿನ್​ ದೇಶಮಟ್ಟದಲ್ಲಿ ಬಿಡುಗಡೆ ಆಗುತ್ತದೆ. ಆದರೆ, ಇದೇ ಮೊದಲಬಾರಿಗೆ ಫೋರ್ಬ್ಸ್​ ದಕ್ಷಿಣ ಭಾರತದ ಸೆಲೆಬ್ರಿಟಿಗಳನ್ನೇ ಇಟ್ಟುಕೊಂಡು ವಿಶೇಷ ಎಡಿಷನ್​ ರಿಲೀಸ್​ ಮಾಡಿದೆ. ಅಂದರೆ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯನ್ನು ಈ ಎಡಿಷನ್​ನಲ್ಲಿ ಸೇರಿಸಲಾಗಿದೆ. ಕನ್ನಡದಿಂದ ಯಶ್​, ತಮಿಳಿನಿಂದ ನಯನತಾರಾ, ಮಲಯಾಳಂನಿಂದ ದುಲ್ಖರ್​ ಸಲ್ಮಾನ್​ ಫೋಟೋ ಮ್ಯಾಗಜಿನ್​ ಮುಖಪುಟದಲ್ಲಿದೆ.

ಈ ಬಗ್ಗೆ ಫೋರ್ಬ್ಸ್​ ಟ್ವಿಟರ್​ನಲ್ಲಿ ವಿಡಿಯೋ ಪೋಸ್ಟ್​ ಮಾಡಿದೆ. ಯಶ್​ ಕಪ್ಪು ಬಣ್ಣದ ಕೋಟ್​ ಹಾಗೂ ಬಿಳಿ ಶರ್ಟ್​​ನಲ್ಲಿ ಮಿಂಚಿದ್ದಾರೆ. ಯಶ್​ ಹೇರ್​ಸ್ಟೈಲ್​ ಅಭಿಮಾನಿಗಳಿಗೆ ಸಖತ್​ ಇಷ್ಟವಾಗಿದೆ. ಇನ್ನು ಯಶ್​ ಫೋಟೋ ವೈರಲ್​ ಆಗುತ್ತಿದ್ದಂತೆ ಕೆಜಿಎಫ್​ ಚಾಪ್ಟರ್​ 2 ಹಾಗೂ ಯಶ್​ ಬಾಸ್ ಹ್ಯಾಶ್​ಟ್ಯಾಗ್​ಗಳು​ ಟ್ರೆಂಡ್​​ ಆಗಿದೆ.

ಬಾಲಿವುಡ್​ ವಲಯದಲ್ಲಿ ಆಲಿಮ್​ ಹಕೀಮ್​ ಖ್ಯಾತಿ ದೊಡ್ಡದು. ಘಟಾನುಘಟಿ ಸೆಲೆಬ್ರಿಟಿಗಳಿಗೆಲ್ಲ ಅವರು ಕೇಶ ವಿನ್ಯಾಸ ಮಾಡಿದ್ದಾರೆ. ಅಮಿತಾಭ್​ ಬಚ್ಚನ್, ಸಂಜತ್​ ದತ್​, ಅರ್ಜುನ್​ ರಾಮ್​ಪಾಲ್​, ಹೃತಿಕ್​ ರೋಷನ್​, ಹಾರ್ದಿಕ್​ ಪಾಂಡ್ಯ ಮುಂತಾದ ಸೆಲೆಬ್ರಿಟಿಗಳಿಗೆ​ ಹೇರ್​ ಸ್ಟೈಲ್​ ಮಾಡಿದ ಖ್ಯಾತಿ ಅವರಿಗೆ ಸಲ್ಲುತ್ತಿದೆ. ಈ ಬಾರಿ ಯಶ್​ಗೆ ಕೇಶ ವಿನ್ಯಾಸ ಮಾಡಿರುವ ಒಂದು ವಿಡಿಯೋವನ್ನು ಆಲಿಮ್​ ಹಕೀಮ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ಅದು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಸಾವಿರಾರು ಅಭಿಮಾನಿಗಳು ಕಮೆಂಟ್​ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಫೋರ್ಬ್ಸ್​​ ಫೋಟೋಶೂಟ್​ಗಾಗಿಯೇ ಅವರು ಆಲಿಮ್​ ಸಲೂನ್​ಗೆ ಭೇಟಿ ನೀಡಿದ್ದರು ಎನ್ನಲಾಗುತ್ತಿದೆ.

ಇದನ್ನೂ ಓದಿ: ಆಲಿಮ್​ ಹಕೀಮ್​ ಸಲೂನ್​ನಲ್ಲಿ ಯಶ್​; ಕೆರಳಿದ ಸಿಂಹದಂತಿರುವ ಹೇರ್​ ಸ್ಟೈಲ್​ ವಿಡಿಯೋ ವೈರಲ್​

ತಾಜಾ ಸುದ್ದಿ

Related Stories

Click on your DTH Provider to Add TV9 Kannada