ಆಲಿಮ್​ ಹಕೀಮ್​ ಸಲೂನ್​ನಲ್ಲಿ ಯಶ್​; ಕೆರಳಿದ ಸಿಂಹದಂತಿರುವ ಹೇರ್​ ಸ್ಟೈಲ್​ ವಿಡಿಯೋ ವೈರಲ್​

TV9 Digital Desk

| Edited By: ಮದನ್​ ಕುಮಾರ್​

Updated on:Oct 11, 2021 | 2:15 PM

ಯಶ್​ಗೆ ಕೇಶ ವಿನ್ಯಾಸ ಮಾಡಿರುವ ವಿಡಿಯೋವನ್ನು ಆಲಿಮ್​ ಹಕೀಮ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅದು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಅಭಿಮಾನಿಗಳು ಕಮೆಂಟ್​ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಆಲಿಮ್​ ಹಕೀಮ್​ ಸಲೂನ್​ನಲ್ಲಿ ಯಶ್​; ಕೆರಳಿದ ಸಿಂಹದಂತಿರುವ ಹೇರ್​ ಸ್ಟೈಲ್​ ವಿಡಿಯೋ ವೈರಲ್​
ಯಶ್​

‘ಕೆಜಿಎಫ್​’ ಸಿನಿಮಾ ಸೆಟ್ಟೇರಿದ ದಿನದಿಂದಲೇ ನಟ ಯಶ್​ ಹೇರ್​ ಸ್ಟೈಲ್​ ತುಂಬ ಫೇಮಸ್​ ಆಯಿತು. ಉದ್ದದ ಗಡ್ಡ, ಕೂದಲು ಬಿಟ್ಟುಕೊಂಡು ಅವರು ಎಲ್ಲರನ್ನೂ ಮೋಡಿ ಮಾಡಿದರು. ಆ ಗೆಟಪ್​ನಲ್ಲಿ ಅವರನ್ನು ಕಂಡ ಉತ್ತರ ಭಾರತದ ಅಭಿಮಾನಿಗಳು ಕೂಡ ಫಿದಾ ಆದರು. ‘ಕೆಜಿಎಫ್​: ಚಾಪ್ಟರ್​ 2’ ಚಿತ್ರಕ್ಕಾಗಿ ಇಂದಿಗೂ ಯಶ್​ ಅದೇ ಹೇರ್​ ಸ್ಟೈಲ್ ನಿಭಾಯಿಸುತ್ತಿದ್ದಾರೆ. ಅದರ ಸಲುವಾಗಿ ಅವರು ಇತ್ತೀಚೆಗೆ ಮುಂಬೈಗೂ ತೆರಳಿದ್ದರು. ಜನಪ್ರಿಯ ಸೆಲೆಬ್ರಿಟಿ ಹೇರ್​ ಸ್ಟೈಲಿಸ್ಟ್​ ಆಲಿಮ್​ ಹಕೀಮ್​ ಸಲೂನ್​ಗೆ ತೆರಳಿ ಕೇಶ ವಿನ್ಯಾಸ ಮಾಡಿಸಿಕೊಂಡಿದ್ದಾರೆ.

ಬಾಲಿವುಡ್​ ವಲಯದಲ್ಲಿ ಆಲಿಮ್​ ಹಕೀಮ್​ ಖ್ಯಾತಿ ದೊಡ್ಡದು. ಘಟಾನುಘಟಿ ಸೆಲೆಬ್ರಿಟಿಗಳಿಗೆಲ್ಲ ಅವರು ಕೇಶ ವಿನ್ಯಾಸ ಮಾಡಿದ್ದಾರೆ. ಅಮಿತಾಭ್​ ಬಚ್ಚನ್, ಸಂಜತ್​ ದತ್​, ಅರ್ಜುನ್​ ರಾಮ್​ಪಾಲ್​, ಹೃತಿಕ್​ ರೋಷನ್​, ಹಾರ್ದಿಕ್​ ಪಾಂಡ್ಯ ಮುಂತಾದ ಸೆಲೆಬ್ರಿಟಿಗಳಿಗೆ​ ಹೇರ್​ ಸ್ಟೈಲ್​ ಮಾಡಿದ ಖ್ಯಾತಿ ಅವರಿಗೆ ಸಲ್ಲುತ್ತಿದೆ. ಈ ಹಿಂದೆ ಕೂಡ ಯಶ್​ ಅವರು ಆಲಿಮ್​ ಹಕೀಮ್​ ಸಲೂನ್​ಗೆ ಭೇಟಿ ನೀಡಿದ್ದರು. ಈ ಬಾರಿ ಅವರಿಗೆ ಕೇಶ ವಿನ್ಯಾಸ ಮಾಡಿರುವ ಒಂದು ವಿಡಿಯೋವನ್ನು ಆಲಿಮ್​ ಹಕೀಮ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ಅದು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಸಾವಿರಾರು ಅಭಿಮಾನಿಗಳು ಕಮೆಂಟ್​ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

View this post on Instagram

A post shared by Aalim Hakim (@aalimhakim)

‘ಕೆಜಿಎಫ್​: ಚಾಪ್ಟರ್​ 2’ ಚಿತ್ರಕ್ಕೆ ಇನ್ನೂ ಪ್ಯಾಚ್​ವರ್ಕ್ ಶೂಟಿಂಗ್​​ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಹಾಗಾಗಿ ಅವರು ಹೇರ್​ ಸ್ಟೈಲ್​ಗೆ ಹೆಚ್ಚು ಮಹತ್ವ ನೀಡಿದ್ದಾರೆ. ಮೊದಲಿಗಿಂತಲೂ ಹೆಚ್ಚು ಉದ್ದದ ಕೂದಲಿನೊಂದಿಗೆ ಯಶ್​ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕೆಲಸದ ಸಲುವಾಗಿ ಅವರು ಇತ್ತೀಚೆಗೆ ಮುಂಬೈಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರನ್ನು ಅಭಿಮಾನಿಗಳು ಮುತ್ತಿಗೆ ಹಾಕಿಕೊಂಡರು. ಚಿಕ್ಕ ಮಕ್ಕಳು, ಯುವಕ-ಯುವತಿಯರೆಲ್ಲ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಆ ವಿಡಿಯೋ ಕೂಡ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಎಲ್ಲವೂ ಪ್ಲ್ಯಾನ್​ ಪ್ರಕಾರ ನಡೆದಿದ್ದರೆ ಪ್ರಶಾಂತ್​ ನೀಲ್​ ನಿರ್ದೇಶನದ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರ ಇಷ್ಟು ಹೊತ್ತಿಗಾಗಲೇ ಬಿಡುಗಡೆ ಆಗಿರಬೇಕಿತ್ತು. ಆದರೆ ಕೊವಿಡ್​ ಕಾರಣದಿಂದ ಕೆಲಸಗಳು ವಿಳಂಬ ಆಯಿತು. 2022ರ ಏಪ್ರಿಲ್​ 14ರಂದು ಈ ಸಿನಿಮಾ ತೆರೆಕಾಣಲಿದೆ.  ಇತ್ತೀಚೆಗೆ ಸೋಶಿಯಲ್​ ಮೀಡಿಯಾದಲ್ಲಿ ಶೂಟಿಂಗ್​ ಸೆಟ್​ ಫೋಟೋಗಳು ವೈರಲ್​ ಆಗಿದ್ದವು.

ಇದನ್ನೂ ಓದಿ:

ಯಶ್​ಗೆ ಭೀಮನ ಪಾತ್ರ, ಪ್ರಶಾಂತ್​ ನೀಲ್​ ನಿರ್ದೇಶನ; ಹೀಗೊಂದು ನಕಲಿ ಸಿನಿಮಾದ ಟ್ರೇಲರ್​ಗೆ ಲಕ್ಷಾಂತರ ವೀವ್ಸ್​

KGF Chapter 2: ‘ಕೆಜಿಎಫ್​​ 2’ ಚಿತ್ರೀಕರಣದ​ ಫೋಟೋ ವೈರಲ್; ಅಪ್​ಡೇಟ್​ಗಾಗಿ ಕಾದು ಕುಳಿತ ಯಶ್​ ಫ್ಯಾನ್ಸ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada