ಚಿರತೆ ಜತೆ ಫೈಟ್ ಮಾಡ್ತೀನಿ ಅಂದಿದ್ದ ಸತ್ಯಜಿತ್ಗೆ ಅಂಬರೀಷ್ ಬೈದಿದ್ರು
ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಕೈಕೊಟ್ಟಿದ್ದರಿಂದ ಸತ್ಯಜಿತ್ ಅವರು ನಟನೆಯಿಂದ ದೂರ ಉಳಿಯಬೇಕಾಯಿತು. ಇಹಲೋಕ ತ್ಯಜಿಸಿರುವ ಹಿರಿಯ ನಟನಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಕನ್ನಡ ಚಿತ್ರರಂಗದ ಬಹುಬೇಡಿಕೆಯ ಪೋಷಕ ನಟನಾಗಿದ್ದ ಸತ್ಯಜಿತ್ ಅವರು ಭಾನುವಾರ (ಅ.10) ಕೊನೆಯುಸಿರೆಳೆದರು. 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಆ ಮೂಲಕ ಚಿತ್ರರಂಗದಲ್ಲಿ ಅಪಾರ ಅನುಭವ ಪಡೆದುಕೊಂಡಿದ್ದರು. ಚಂದನವನದ ಹಲವಾರು ಸ್ಟಾರ್ ಕಲಾವಿದರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತ್ತು. ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಕೈಕೊಟ್ಟಿದ್ದರಿಂದ ಅವರು ನಟನೆಯಿಂದ ದೂರ ಉಳಿಯಬೇಕಾಯಿತು. ಇಹಲೋಕ ತ್ಯಜಿಸಿರುವ ಹಿರಿಯ ನಟನಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಈಗ ಸತ್ಯಜಿತ್ ಬಗ್ಗೆ ಹಾಸ್ಯನಟ ರಂಗಾಯಣ ರಘು ಮಾತನಾಡಿದ್ದಾರೆ. ‘ಅಂಬರೀಷ್ ಜತೆ ನಟಿಸುವಾಗ ಸತ್ಯಜಿತ್ ಅವರು ಚಿರತೆ ಜತೆ ಫೈಟ್ ಮಾಡೋಕೆ ಹೋಗಿದ್ದರು. ಈ ವೇಳೆ ಅಂಬರೀಷ್ ಬೈದಿದ್ದರು’ ಎಂದು ಹಳೆಯ ಘಟನೆ ನೆನಪಿಸಿಕೊಂಡಿದದ್ದಾರೆ ಅವರು.
ಇದನ್ನೂ ಓದಿ: ವರ್ಷದ ಹಿಂದೆ ವ್ಹೀಲ್ಚೇರ್ ಮೇಲೆ ಸತ್ಯಜಿತ್ ನಮ್ಮನೆಗೆ ಬಂದಿದ್ದರು; ಪುನೀತ್ ರಾಜ್ಕುಮಾರ್

ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ

ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು

ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ

ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
