ವರ್ಷದ ಹಿಂದೆ ​ ವ್ಹೀಲ್​ಚೇರ್​ ಮೇಲೆ ಸತ್ಯಜಿತ್ ನಮ್ಮನೆಗೆ ಬಂದಿದ್ದರು; ಪುನೀತ್​ ರಾಜ್​ಕುಮಾರ್​

TV9 Digital Desk

| Edited By: Rajesh Duggumane

Updated on: Oct 10, 2021 | 3:18 PM

ಸತ್ಯಜಿತ್​ ಅವರಿಗೆ ಈ ಮೊದಲು ಗ್ಯಾಂಗ್ರಿನ್​ ಆಗಿತ್ತು. ಹೀಗಾಗಿ, ಅವರ ಕಾಲನ್ನು ಕತ್ತರಿಸಲಾಗಿತ್ತು. ಹೀಗಾಗಿ, ವ್ಹೀಲ್​ಚೇರ್​ ಮೇಲೆಯೇ ಅವರು ಕುಳಿತಿರುತ್ತಿದ್ದರು.

ಕನ್ನಡ ಚಿತ್ರರಂಗದ ಬಹುಬೇಡಿಕೆಯ ಪೋಷಕ ನಟನಾಗಿದ್ದ ಸತ್ಯಜಿತ್​ ಅವರು ಇಂದು (ಅ.10) ಕೊನೆಯುಸಿಳೆದಿದ್ದಾರೆ. 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಪುನೀತ್​ ರಾಜ್​ಕುಮಾರ್​ ನಟನೆಯ ಕೆಲ ಸಿನಿಮಾಗಳಲ್ಲೂ ಸತ್ಯಜಿತ್​ ಅವರು ಕಾಣಿಸಿಕೊಂಡಿದ್ದರು. ಹೀಗಾಗಿ, ಪುನೀತ್​ ಮತ್ತು ಸತ್ಯಜಿತ್​ ನಡುವೆ ಒಳ್ಳೆಯ ಪರಿಚಯವಿತ್ತು. ಈಗ ಸತ್ಯಜಿತ್​ ಅವರು ಮೃತಪಟ್ಟ ವಿಚಾರದ ಬಗ್ಗೆ ಪುನೀತ್​ ಪ್ರತಿಕ್ರಿಯೆ ನೀಡಿದ್ದಾರೆ.

ಸತ್ಯಜಿತ್​ ಅವರಿಗೆ ಈ ಮೊದಲು ಗ್ಯಾಂಗ್ರಿನ್​ ಆಗಿತ್ತು. ಹೀಗಾಗಿ, ಅವರ ಕಾಲನ್ನು ಕತ್ತರಿಸಲಾಗಿತ್ತು. ಹೀಗಾಗಿ, ವ್ಹೀಲ್​ಚೇರ್​ ಮೇಲೆಯೇ ಅವರು ಕುಳಿತಿರುತ್ತಿದ್ದರು. ಒಂದು ವರ್ಷದ ಹಿಂದೆ ಸತ್ಯಜಿತ್​ ಅವರು ಪುನೀತ್​ ಮನೆಗೂ ಆಗಮಿಸಿದ್ದರು. ಆ ದಿನವನ್ನು ಅಪ್ಪು ನೆನೆದಿದ್ದಾರೆ.

ಇದನ್ನೂ ಓದಿ: Sathyajith Death: ‘ಆಸ್ಪತ್ರೆಗೆ ಬಾರದ ಮಗಳು ಸ್ಮಶಾನಕ್ಕೆ ಬಂದಳು’: ಸತ್ಯಜಿತ್​ ಪುತ್ರ ಆಕಾಶ್​

Related Video

Follow us on

Click on your DTH Provider to Add TV9 Kannada