Sathyajith Death: ‘ಆಸ್ಪತ್ರೆಗೆ ಬಾರದ ಮಗಳು ಸ್ಮಶಾನಕ್ಕೆ ಬಂದಳು’: ಸತ್ಯಜಿತ್​ ಪುತ್ರ ಆಕಾಶ್​

ಸತ್ಯಜಿತ್​ ಅವರನ್ನು ನೋಡಲು ಮಗಳು ಆಸ್ಪತ್ರೆಗೆ ಬಂದಿರಲಿಲ್ಲ. ಆದರೆ ಈಗ ಅಂತ್ಯಸಂಸ್ಕಾರಕ್ಕೆ ಆಗಮಿಸಿದ್ದಾರೆ. ಈ ಬಗ್ಗೆ ಸತ್ಯಜಿತ್​ ಪುತ್ರ ಆಕಾಶ್​ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅನಾರೋಗ್ಯದಿಂದ ಭಾನುವಾರ (ಅ.10) ಮೃತಪಟ್ಟಿರುವ ಹಿರಿಯ ನಟ ಸತ್ಯಜಿತ್​ ಅವರು ಮಗಳು ಅಖ್ತರ್​ ಸ್ವಲೇಹಾ ಜೊತೆ ಈ ಮೊದಲು ಮನಸ್ತಾಪ ಮಾಡಿಕೊಂಡಿದ್ದರು. ಹಾಗಾಗಿ ತಂದೆಯನ್ನು ನೋಡಲು ಆಸ್ಪತ್ರೆಗೆ ಮಗಳು ಬಂದಿರಲಿಲ್ಲ. ಆದರೆ ಈಗ ಅಂತ್ಯಸಂಸ್ಕಾರಕ್ಕೆ ಆಗಮಿಸಿದ್ದಾರೆ. ಈ ಬಗ್ಗೆ ಸತ್ಯಜಿತ್​ ಪುತ್ರ ಆಕಾಶ್​ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಹೆಗಡೆ ನಗರದ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 1.30ರ ನಂತರ ಸತ್ಯಜಿತ್ ಅಂತ್ಯಕ್ರಿಯೆ ನಡೆಯಲಿದೆ.

‘ನಾವು ಮೂರು ಜನ ಮಕ್ಕಳು. ಮಗ ಮತ್ತು ಮಗಳು ಆಸ್ಪತ್ರೆಗೆ ಬಂದಿರಲಿಲ್ಲ. ಅಂತ್ಯ ಸಂಸ್ಕಾರಕ್ಕೆ ಬಂದಿದ್ದಾರೆ. ಒಳ್ಳೆಯದು, ಅವರು ಚೆನ್ನಾಗಿ ಇರಲಿ. ತಂದೆಗಾಗಿ ಕೊನೇ ಪಕ್ಷ ಈಗಲಾದರೂ ಪ್ರಾರ್ಥನೆ ಮಾಡಲಿ. ತಂದೆ ನಿಧನರಾದ ಬಳಿಕ ನಮಗೆ ತಾಯಿಯೇ ಎಲ್ಲಾ. ಅವರು ನಮ್ಮ ಜೊತೆ ಇದ್ದರೆ ಅಷ್ಟೇ ಸಾಕು’ ಎಂದು ಆಕಾಶ್​ ಹೇಳಿದ್ದಾರೆ.

ಇದನ್ನೂ ಓದಿ:

Sathyajith Obituary: ಬಸ್​ ಡ್ರೈವರ್​ ಆಗಿದ್ದ ಸತ್ಯಜಿತ್​ ನೇರ ಬಾಲಿವುಡ್​ಗೆ ಕಾಲಿಟ್ಟಿದ್ದೇ ಅಚ್ಚರಿ; ಹಿರಿಯ ನಟ ಸಾಗಿ ಬಂದ ಹಾದಿ ಇಲ್ಲಿದೆ

‘ನಾನು ಒಳ್ಳೆಯ ನಟನಾಗಲಿ ಅಂತ ಅಪ್ಪನಿಗೆ ಆಸೆ ಇತ್ತು’; ಸತ್ಯಜಿತ್​ ನಿಧನದ ಬಳಿಕ ಪುತ್ರ ಆಕಾಶ್​ ನೋವಿನ ಮಾತು

Click on your DTH Provider to Add TV9 Kannada