AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

KGF Chapter 2: ‘ಕೆಜಿಎಫ್​​ 2’ ಚಿತ್ರೀಕರಣದ​ ಫೋಟೋ ವೈರಲ್; ಅಪ್​ಡೇಟ್​ಗಾಗಿ ಕಾದು ಕುಳಿತ ಯಶ್​ ಫ್ಯಾನ್ಸ್​

Yash: ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ಕಥಾನಾಯಕ ರಾಕಿ ಭಾಯ್​ ಮತ್ತು ಖಳನಾಯಕ ಅಧೀರನ ನಡುವೆ ಭರ್ಜರಿ ಚೇಸಿಂಗ್​ ಸೀನ್​ ಇರಬಹುದೇ ಎಂದು ಫ್ಯಾನ್ಸ್​ ಊಹಿಸುತ್ತಿದ್ದಾರೆ. ಆ ಬಗ್ಗೆ ಏನಾದರೂ ಅಪ್​ಡೇಟ್​ ಸಿಗಲಿ ಅಂತ ಸಿನಿಪ್ರಿಯರು ಕಾಯುತ್ತಿದ್ದಾರೆ.

KGF Chapter 2: ‘ಕೆಜಿಎಫ್​​ 2’ ಚಿತ್ರೀಕರಣದ​ ಫೋಟೋ ವೈರಲ್; ಅಪ್​ಡೇಟ್​ಗಾಗಿ ಕಾದು ಕುಳಿತ ಯಶ್​ ಫ್ಯಾನ್ಸ್​
‘ಕೆಜಿಎಫ್: ಚಾಪ್ಟರ್ 2’
TV9 Web
| Edited By: |

Updated on:Oct 08, 2021 | 3:30 PM

Share

ಇಡೀ ಭಾರತೀಯ ಚಿತ್ರರಂಗವೇ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಬಿಡುಗಡೆಗಾಗಿ ಕಾದು ಕುಳಿತಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟುಹೊತ್ತಿಗಾಗಲೇ ಈ ಸಿನಿಮಾ ತೆರೆಕಂಡಿರಬೇಕಿತ್ತು. ಆದರೆ ಕೊರೊನಾ ಕಾಟದಿಂದಾಗಿ ಚಿತ್ರದ ಕೆಲಸಗಳು ವಿಳಂಬವಾದವು. ಕೆಲವೇ ದಿನಗಳ ‘ಕೆಜಿಎಫ್​ 2’ ತಂಡ ಹೊಸ ಬಿಡುಗಡೆ ದಿನಾಂಕ ಘೋಷಿಸಿತು. ಮುಂದಿನ ವರ್ಷ ಏಪ್ರಿಲ್​ 14ರಂದು ಸಿನಿಮಾ ರಿಲೀಸ್​ ಆಗಲಿದೆ. ಅಲ್ಲಿಯವರೆಗೂ ಕಾಯಲು ಫ್ಯಾನ್ಸ್​ ಸಿದ್ಧರಿಲ್ಲ. ಆದಷ್ಟು ಬೇಗ ಈ ಚಿತ್ರದ ಬಗ್ಗೆ ಏನಾದರೂ ಅಪ್​ಡೇಟ್​ ಸಿಗಬಹುದೇ ಎಂದು ಯಶ್​ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

ಈಗಾಗಲೇ ‘ಕೆಜಿಎಫ್​: ಚಾಪ್ಟರ್​ 2’ ತಂಡ ಶೂಟಿಂಗ್​ ಮುಗಿಸಿಕೊಂಡಿದೆ. ಆದರೆ ಕೆಲವು ದೃಶ್ಯಗಳ ಪ್ಯಾಚ್​ ವರ್ಕ್​ ನಡೆಯುತ್ತಿರುವ ಸಾಧ್ಯತೆ ಇದೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದೆರಡು ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ‘ಕೆಜಿಎಫ್​ 2’ ಚಿತ್ರೀಕರಣದ ಸೆಟ್​ನಲ್ಲಿ ಕ್ಲಿಕ್ಕಿಸಲಾಗಿದ್ದು ಎಂಬಂತಿರುವ ಈ ಫೋಟೋಗಳನ್ನು ಅಭಿಮಾನಿಗಳು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಬೆಂಗಳೂರಿನ ನೈಸ್​ ರಸ್ತೆಯಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಚೇಸಿಂಗ್​ ದೃಶ್ಯಗಳ ಶೂಟಿಂಗ್​ ನಡೆದಿದೆ ಎಂದು ಈ ಫೋಟೋಗಳಿಗೆ ಕ್ಯಾಪ್ಷನ್​ ನೀಡಲಾಗಿದೆ. ಈ ಸಿನಿಮಾದಲ್ಲಿ ಕಥಾನಾಯಕ ರಾಕಿ ಭಾಯ್​ ಮತ್ತು ಖಳನಾಯಕ ಅಧೀರನ ನಡುವೆ ಭರ್ಜರಿ ಚೇಸಿಂಗ್​ ಸೀನ್​ ಇರಬಹುದೇ ಎಂದು ಫ್ಯಾನ್ಸ್​ ಊಹಿಸುತ್ತಿದ್ದಾರೆ. ಆ ಬಗ್ಗೆ ಏನಾದರೂ ಮಾಹಿತಿ​ ಹೊರಬರಲಿ ಅಂತ ಕಾಯುತ್ತಿರುವ ಅಭಿಮಾನಿಗಳಿಗೆ ನಿರ್ದೇಶಕ ಪ್ರಶಾಂತ್​ ನೀಲ್​ ಅವರೇ ಪ್ರತಿಕ್ರಿಯೆ ನೀಡಬೇಕಿದೆ.

2021ರ ಜನವರಿಯಲ್ಲಿ ಯಶ್​ ಜನ್ಮದಿನದ ಪ್ರಯುಕ್ತ ಬಿಡುಗಡೆಯಾದ ಟೀಸರ್​ನಿಂದ ಈ ಸಿನಿಮಾ ಬಗ್ಗೆ ಇದ್ದ ಕ್ರೇಜ್​ ಹತ್ತು ಪಟ್ಟು ಹೆಚ್ಚಾಯಿತು. ಈವರೆಗೂ 21 ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಂಡಿರುವುದು ಈ ಟೀಸರ್​ನ ಹೆಚ್ಚುಗಾರಿಕೆ. ಟ್ರೇಲರ್​ಗಾಗಿ ಅಭಿಮಾನಿಗಳ ಬಳಗ ತುದಿಗಾಲಿನಲ್ಲಿ ನಿಂತು ಕಾಯುತ್ತಿದೆ. ಆಡಿಯೋ ಬಿಡುಗಡೆಗಾಗಿಯೂ ಕಾತರ ಹೆಚ್ಚಿದೆ. ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ಬಾಚಿಕೊಂಡಿದೆ. ಸಂಜಯ್​ ದತ್​, ರವೀನಾ ಟಂಡನ್​ ಮುಂತಾದ ಕಲಾವಿದರು ಇರುವುದರಿಂದ ಉತ್ತರ ಭಾರತದಲ್ಲೂ ‘ಕೆಜಿಎಫ್​ 2’ ಧೂಳೆಬ್ಬಿಸಲಿದೆ.

ಇದನ್ನೂ ಓದಿ:

ಕೆಜಿಎಫ್​ 2ಗೆ ಬಂತು 255 ಕೋಟಿ ಆಫರ್​?  ದಯವಿಟ್ಟು ಒಪ್ಪಬೇಡಿ ಎಂದ ಫ್ಯಾನ್ಸ್​

ಶೂಟಿಂಗ್​ ಸೆಟ್​ನಲ್ಲಿ ಊಟ ಮಾಡಿ ಬೈಯಿಸಿಕೊಂಡಿದ್ದ ಸಂಜಯ್​ ದತ್​; ‘ಕೆಜಿಎಫ್​’ ಅಧೀರನ ಕಷ್ಟದ ಹಾದಿ

Published On - 3:18 pm, Fri, 8 October 21

Follow Us
ಡಿಕೆಶಿ ಸಿಟಿ ರೌಂಡ್ಸ್: ಫುಟ್​ಪಾತ್ ತೆರವು ವೀಕ್ಷಿಸಿ ಹೇಳಿದ್ದೇನು ನೋಡಿ
ಡಿಕೆಶಿ ಸಿಟಿ ರೌಂಡ್ಸ್: ಫುಟ್​ಪಾತ್ ತೆರವು ವೀಕ್ಷಿಸಿ ಹೇಳಿದ್ದೇನು ನೋಡಿ
ರಸ್ತೆ ಬದಿ ನಿಂತಲ್ಲೇ ನಿಂತ ವಾಹನಗಳಿಗೆ ಎಷ್ಟು ದಂಡ ಗೊತ್ತಾ?
ರಸ್ತೆ ಬದಿ ನಿಂತಲ್ಲೇ ನಿಂತ ವಾಹನಗಳಿಗೆ ಎಷ್ಟು ದಂಡ ಗೊತ್ತಾ?
ಬೆಂಗಳೂರಲ್ಲಿ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಮಿಡ್‌ನೈಟ್ ಆಪರೇಷನ್
ಬೆಂಗಳೂರಲ್ಲಿ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಮಿಡ್‌ನೈಟ್ ಆಪರೇಷನ್
ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!
ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!
ವಯನಾಡು: ಸುರಂಗ ನಿರ್ಮಾಣ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದೇಕೆ?
ವಯನಾಡು: ಸುರಂಗ ನಿರ್ಮಾಣ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದೇಕೆ?
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ