‘ನಾನು ಕರ್ನಾಟಕ ಬಿಟ್ಟು ಹೋಗಲ್ಲ; ಇಲ್ಲಿನ ಜನರಿಗೆ ನನ್ನ ಕೃತಜ್ಞತೆ’: ನಟಿ ವಿಜಯಲಕ್ಷ್ಮೀ  

ಈ ಹಿಂದೆ ಜನರ ಮಾತುಗಳಿಗೆ ಬೇಸರ ಮಾಡಿಕೊಂಡಿದ್ದ ನಟಿ ವಿಜಯಲಕ್ಷ್ಮೀ ಅವರು ಕರ್ನಾಟಕ ಬಿಟ್ಟು ಹೋಗುವುದಾಗಿ ಹೇಳಿದ್ದರು. ಆದರೆ ಈಗ ಮನಸ್ಸು ಬದಲಿಸಿದ್ದಾರೆ. ಈ ಬಗ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿ ಇರುವ ನಟಿ ವಿಜಯಲಕ್ಷ್ಮೀ ಅವರಿಗೆ ಕರ್ನಾಟಕದ ಜನರು ಸಹಾಯ ಮಾಡಿದ್ದಾರೆ. ಹಾಗಾಗಿ ಕರುನಾಡಿನ ಜನತೆಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ತಾವು ಕರ್ನಾಟಕದಲ್ಲೇ ಇರುವುದಾಗಿ ತಿಳಿಸಿದ್ದಾರೆ. ‘ಕರ್ನಾಟಕ ಎಂಬುದು ನನಗೆ ತಾಯಿ ಇದ್ದಂತೆ. ಎಲ್ಲ ವಿಚಾರಗಳಲ್ಲೂ ಇದು ನನ್ನನ್ನು ಕಾಪಾಡುತ್ತಿದೆ. 5-10 ರೂಪಾಯಿ ನೀಡಿದ ಜನರೂ ಇದ್ದಾರೆ. ಅವರಿಗೆಲ್ಲ ನನ್ನ ಕೃತಜ್ಞತೆಗಳು’ ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ.

‘ವಾಣಿಜ್ಯ ಮಂಡಳಿಯವರ ವಿರುದ್ಧ ನಾನು ಎಂದಿಗೂ ಮಾತನಾಡುವುದಿಲ್ಲ. ನನ್ನನ್ನು ಬೇರೆಲ್ಲಿಗೂ ಕಳಿಸಬೇಡಿ. ನಾನು ಕರ್ನಾಟಕದಲ್ಲೇ ಇರುತ್ತೇನೆ. ಅದನ್ನು ನಾನು ಮಂಡಳಿಯವರಿಗೆ ಹೇಳಿದ್ದೇನೆ. ಕರುನಾಡಿನ ಕಲಾವಿದರ ಜೊತೆ ನನ್ನ ಹೆಸರು ಬರಬೇಕು. ನಾನು ಬೇರೆ ರಾಜ್ಯಕ್ಕೆ ಸೇರಿದವಳಲ್ಲ’ ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ.

ಇದನ್ನೂ ಓದಿ:

‘ಕರ್ನಾಟಕ ಬಿಟ್ಟು ಹೋಗುತ್ತೇನೆ, ಯಾರ ಕಣ್ಣಿಗೂ ಕಾಣಿಸಲ್ಲ’; ನಟಿ ವಿಜಯಲಕ್ಷ್ಮೀ ಬಹಿರಂಗ ಹೇಳಿಕೆ

‘ಚರಂಡಿ ಕ್ಲೀನ್​ ಮಾಡುವವನ ಪಾತ್ರ ಮಾಡ್ತೀನಿ’: ದುನಿಯಾ ವಿಜಯ್​ ನಿರ್ದೇಶನದಲ್ಲಿ ಶಿವಣ್ಣನಿಗೆ ನಟಿಸುವ ಆಸೆ

Click on your DTH Provider to Add TV9 Kannada