ಹಳ್ಳಿಯ ಜೀವನ ನಡೆಸಲು ಮಕ್ಕಳು ಮಂಗಳೂರಿಗೆ ಬಂದಿದ್ದರು, ಪತ್ತೆಯಾದ ಮಕ್ಕಳ ಬಗ್ಗೆ ಡಿಸಿಪಿ ಹರಿರಾಮ್‌ ಶಂಕರ್‌ ಮಾಹಿತಿ

ಹಳ್ಳಿಯ ಜೀವನ ನಡೆಸಲು ಮಕ್ಕಳು ಮಂಗಳೂರಿಗೆ ಬಂದಿದ್ದರು, ಪತ್ತೆಯಾದ ಮಕ್ಕಳ ಬಗ್ಗೆ ಡಿಸಿಪಿ ಹರಿರಾಮ್‌ ಶಂಕರ್‌ ಮಾಹಿತಿ

TV9 Web
| Updated By: ಆಯೇಷಾ ಬಾನು

Updated on:Oct 12, 2021 | 11:23 AM

ಬ್ಯಾಗ್‌ ಬಿಸಾಡಲು ಸ್ಥಳಕ್ಕೆ ಶೋಧಿಸುತ್ತಿದ್ದರು. ಈ ವೇಳೆ ಅನುಮಾನಗೊಂಡ ಸ್ಥಳೀಯರು ಮಕ್ಕಳನ್ನ ವಿಚಾರಿಸಿದ್ದಾರೆ. ಆಗ ಮಾಧ್ಯಮಗಳಲ್ಲಿ ಸುದ್ದಿ ಗಮನಿಸಿದ್ದ ಸ್ಥಳೀಯರು ಅವರನ್ನು ರಕ್ಷಣೆ ಮಾಡಿ ಮಕ್ಕಳನ್ನು ವಿಚಾರಿಸಿ ನಂತರ ಠಾಣೆಗೆ ಕರೆತಂದಿದ್ದಾರೆ ಎಂದು ಡಿಸಿಪಿ ಹರಿರಾಮ್‌ ಶಂಕರ್‌ ಮಾಹಿತಿ ನೀಡಿದ್ದಾರೆ.

ಮಂಗಳೂರು: ಸೋಲದೇವನಹಳ್ಳಿಯಿಂದ ನಾಪತ್ತೆಯಾಗಿದ್ದ ಮಕ್ಕಳು ಮಂಗಳೂರಿನ ಅತ್ತಾವರ ಕೆಎಂಸಿಯ ಬಳಿ ಪತ್ತೆಯಾಗಿದ್ದು ಸದ್ಯ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿದ್ದಾರೆ. ಪೊಲೀಸರು ಮಕ್ಕಳಿಂದ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಈ ಬಗ್ಗೆ ಡಿಸಿಪಿ ಹರಿರಾಂ ಶಂಕರ್, ಎಸಿಪಿ ಕೂಡ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸದ್ಯ ಪ್ರಕರಣ ಸಂಬಂಧ ಡಿಸಿಪಿ ಹರಿರಾಮ್‌ ಶಂಕರ್‌ ಟಿವಿ9 ಜೊತೆ ಮಾತನಾಡಿದ್ದು ಹಳ್ಳಿಯ ಜೀವನ ನಡೆಸಲು ಮಕ್ಕಳು ಮಂಗಳೂರಿಗೆ ಬಂದಿದ್ದರು. ನಂತರ ಮಂಗಳೂರಿನಿಂದ ಬೆಳಗಾವಿಗೆ ತೆರಳಿದ್ರು. ಮತ್ತೆ ನಾಲ್ವರೂ ಬೆಳಗಾವಿಯಿಂದ ಮೈಸೂರಿಗೆ ತೆರಳಿದ್ರು. ನಿನ್ನೆ ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದಾರೆ. ಬಳಿಕ ಇಂದು ಬೆಂಗಳೂರಿನಿಂದ ಮಂಗಳೂರಿಗೆ ತೆರಳಿದ್ದಾರೆ ಎಂದು ಡಿಸಿಪಿ ಹರಿರಾಮ್‌ ಶಂಕರ್‌ ಮಾಹಿತಿ ನೀಡಿದ್ದಾರೆ.

ಇನ್ನು ಚಿನ್ನಾಭರಣ, ಬ್ಯಾಗ್‌ ಬಿಸಾಡಲು ಸ್ಥಳಕ್ಕೆ ಶೋಧಿಸುತ್ತಿದ್ದರು. ಈ ವೇಳೆ ಅನುಮಾನಗೊಂಡ ಸ್ಥಳೀಯರು ಮಕ್ಕಳನ್ನ ವಿಚಾರಿಸಿದ್ದಾರೆ. ಆಗ ಮಾಧ್ಯಮಗಳಲ್ಲಿ ಸುದ್ದಿ ಗಮನಿಸಿದ್ದ ಸ್ಥಳೀಯರು ಅವರನ್ನು ರಕ್ಷಣೆ ಮಾಡಿ ಮಕ್ಕಳನ್ನು ವಿಚಾರಿಸಿ ನಂತರ ಠಾಣೆಗೆ ಕರೆತಂದಿದ್ದಾರೆ ಎಂದರು.

Published on: Oct 12, 2021 11:22 AM