Kareena Kapoor: ಹೊಸ ದಿರಿಸಿನಲ್ಲಿ ಕರೀನಾ; ಹಿಗ್ಗಾಮುಗ್ಗ ಟ್ರೋಲ್ ಮಾಡಿದ ನೆಟ್ಟಿಗರು

ಬಾಲಿವುಡ್ ನಟಿ ಕರೀನಾ ಕಪೂರ್ ಇತ್ತೀಚೆಗೆ ಫ್ಯಾಶನ್ ಶೋ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಆದರೆ ಅಲ್ಲಿನ ಅವರ ಲುಕ್​ಗಳು ನೆಟ್ಟಿಗರಿಗೆ ಪ್ರಿಯವಾಗಿಲ್ಲ. ಈ ಕುರಿತು ವಿಧವಿಧವಾಗಿ ಅವರನ್ನು ಟ್ರೋಲ್ ಮಾಡಲಾಗಿದೆ.

Kareena Kapoor: ಹೊಸ ದಿರಿಸಿನಲ್ಲಿ ಕರೀನಾ; ಹಿಗ್ಗಾಮುಗ್ಗ ಟ್ರೋಲ್ ಮಾಡಿದ ನೆಟ್ಟಿಗರು
ವಿನೂತನ ದಿರಿಸಿನಲ್ಲಿ ಕರೀನಾ ಕಪೂರ್

ಬಾಲಿವುಡ್ ನಟಿಯರು ತಮ್ಮ ಚಿತ್ರಗಳ ಜೊತೆಜೊತೆಗೆ ಮಾಡೆಲಿಂಗ್ ಕ್ಷೇತ್ರಗಳಲ್ಲೂ ಸಕ್ರಿಯರಾಗಿರುತ್ತಾರೆ. ಖ್ಯಾತ ವಿನ್ಯಾಸಕರು ತಯಾರಿಸಿದ ಹೊಸ ಬಗೆಯ, ವಿಶಿಷ್ಟ ಶೈಲಿಗಳ ಉಡುಪುಗಳನ್ನು ಧರಿಸಿ ಬಳಕುತ್ತಾ ಹೆಜ್ಜೆ ಹಾಕಿ ಸಖತ್ ಸುದ್ದಿಯಾಗುತ್ತಾರೆ. ಇತ್ತೀಚೆಗೆ ಖ್ಯಾತ ಬಾಲಿವುಡ್ ನಟಿ ಕರೀನಾ ಕಪೂರ್ ಕೂಡ ಹೊಸ ಬಗೆಯ ಉಡುಪೊಂದನ್ನು ಧರಿಸಿ ವೇದಿಕೆಯಲ್ಲಿ ಬಳುಕುತ್ತಾ ಹೆಜ್ಜೆ ಹಾಕಿದ್ದಾರೆ. ಆದರೆ ಇದಕ್ಕೆ ಅವರ ಅಭಿಮಾನಿ ಬಳಗದಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿಲ್ಲ. ಅದರ ಬದಲಾಗಿ ಹಿಗ್ಗಾಮುಗ್ಗ ಟ್ರೋಲ್ ಮಾಡಿದ್ದಾರೆ. 

ಖ್ಯಾತ ವಸ್ತ್ರ ವಿನ್ಯಾಸಕ ಗೌರವ್ ಗುಪ್ತಾ ಆಯೋಜಿಸಿದ್ದ ‘ಫಿಜಿಟಿಲ್ ಆವೃತ್ತಿಯ ಎಲ್​ಎಫ್​ಡಬ್ಲ್ಯು ಎಫ್​ಡಿಸಿಐ 2021’ (Lakme India Fashion Week 2021) ಕಾರ್ಯಕ್ರಮಕ್ಕೆ ಭಾನುವಾರ ವರ್ಣರಂಜಿತವಾಗಿ ತೆರೆಬಿತ್ತು. ಆ ಕಾರ್ಯಕ್ರಮದಲ್ಲಿ ಬಾಲಿವುಡ್ ಬೆಡಗಿ ಕರೀನಾ ಕಪೂರ್ ಹೊಸ ಮಾದರಿಯ ಗೌನ್ ಧರಿಸಿ ಭಾಗಿಯಾಗಿದ್ದರು. ನೂತನ ಸ್ಟೈಲ್​ನಲ್ಲಿ ಕರೀನಾ ಫೋಟೊಗಳಿಗೂ ಭರ್ಜರಿ ಪೋಸ್ ನೀಡಿದ್ದರು. ಆದರೆ ಅವರ ಮೇಕಪ್, ಕೇಶ ವಿನ್ಯಾಸ, ವಸ್ತ್ರ ವಿನ್ಯಾಸ ಸೇರಿದಂತೆ ಹಲವು ನೆಟ್ಟಿಗರಿಗೆ ಪ್ರಿಯವಾಗಿಲ್ಲ. ಆದ್ದರಿಂದಲೇ ಕರೀನಾರನ್ನು ಟ್ರೋಲ್ ಮಾಡಲು ಆರಂಭಿಸಲಾಗಿದೆ.

ಖ್ಯಾತ ಛಾಯಾಚಿತ್ರಕಾರ ವೈರಲ್ ಭಯಾನಿ ಹಂಚಿಕೊಂಡಿರುವ ಚಿತ್ರಗಳು ಹಾಗೂ ಫೋಟೋಗಳಿಗೆ ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಮುಖ್ಯವಾಗಿ ಕರೀನಾ ಆ ಉಡುಪನ್ನು ಧರಿಸಿರುವಾಗ ಆರಾಮವಾಗಿ ಇರಲಿಲ್ಲ. ಬಹಳ ಅನ್​ಕಂಫರ್ಟ್ ಅನುಭವಿಸುತ್ತಿದ್ದರು ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಕೆಲವು ಅಭಿಮಾನಿಗಳು, ಕರೀನಾ ಮೊದಲಿದ್ದಂತೆ ಇಲ್ಲ. ಅದನ್ನು ಅವರು ಒಪ್ಪಿಕೊಳ್ಳಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದರೊಂದಿಗೆ ಹಲವರು ಕರೀನಾ ವಯಸ್ಸಿನ ಕುರಿತು, ದೇಹದ ಕುರಿತು ಕೀಳಾಗಿ ಕಾಮೆಂಟ್ ಕೂಡ ಮಾಡಿದ್ದಾರೆ.

ಕೆಲವು ಕಾಮೆಂಟ್ಸ್​ಗಳು ಇಲ್ಲಿವೆ:

Kareena Kapoor new look criticism

ಕರೀನಾ ಕಪೂರ್ ಕುರಿತು ವಿಧವಿಧದ ಟೀಕೆ ಮಾಡಿರುವ ನೆಟ್ಟಿಗರು

Kareena Kapoor new look criticism

ಕರೀನಾ ಕಪೂರ್ ಕುರಿತು ವಿಧವಿಧದ ಟೀಕೆ ಮಾಡಿರುವ ನೆಟ್ಟಿಗರು

ಕೆಲವು ದಿನಗಳ ಹಿಂದೆ ಗೌರವ್ ಗುಪ್ತಾ ಮತ್ತೊಂದು ಚಿತ್ರವನ್ನು ಹಂಚಿಕೊಂಡಿದ್ದರು. ಆಗ ಕೂಡ ಕರೀನಾರ ಕೈ ಫೋಟೋಶಾಪ್ ಮಾಡಲಾಗಿದೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದರು. ಪ್ರಸ್ತುತ ಅದೇ ದಿರಿಸಿನಲ್ಲಿ ಕರೀನಾ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದರು.

Kareena Kapoor new look criticism

ಕರೀನಾ ಕೈಗಳನ್ನು ಫೋಟೋಶಾಪ್ ಮಾಡಲಾಗಿದೆ ಎಂಬುದರ ಕುರಿತು ವ್ಯಕ್ತವಾಗಿದ್ದ ಅಭಿಪ್ರಾಯಗಳು

ಅಂತರ್ಜಾಲದಲ್ಲಿ ವ್ಯಕ್ತವಾಗುವ ಇಂತಹ ಟೀಕೆಗಳ ಕುರಿತಂತೆ ಕರೀನಾ ಹೆಚ್ಚು ಗಮನಹರಿಸುವುದಿಲ್ಲ ಎಂದು ಅವರು ಈ ಹಿಂದೆ ಸಂದರ್ಶನದಲ್ಲಿ ತಿಳಿಸಿದ್ದರು. ಅವರ ಪತಿ ಸೈಫ್ ಅಲಿ ಖಾನ್ ಕೂಡ ಇತ್ತೀಚೆಗೆ ಮಾತನಬಾಡುತ್ತಾ, ತನಗೆ ಜಾಲತಾಣಗಳ ಟೀಕೆಯನ್ನು ನಿರ್ವಹಿಸುವುದು ಕಷ್ಟ. ಆದ್ದರಿಂದ ಅವುಗಳಿಂದ ದೂರ ಉಳಿದಿದ್ದೇನೆ. ಆದರೆ ಕರೀನಾ ಬಹಳ ಗಟ್ಟಿಗಿತ್ತಿ. ಇವುಗಳನ್ನೆಲ್ಲವನ್ನೂ ಬಹಳ ಚೆನ್ನಾಗಿ ನಿಭಾಯಿಸುತ್ತಾರೆ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ:

‘ರಾಣ’ ಚಿತ್ರದಲ್ಲಿ ರಾಗಿಣಿ ಸಖತ್​ ಡ್ಯಾನ್ಸ್​; ಕಮಾಲ್​ ಮಾಡಲು ಸಜ್ಜಾದ ‘ತುಪ್ಪದ ಬೆಡಗಿ’

‘ನಾನು ಕರ್ನಾಟಕ ಬಿಟ್ಟು ಹೋಗಲ್ಲ; ಇಲ್ಲಿನ ಜನರಿಗೆ ನನ್ನ ಕೃತಜ್ಞತೆ’: ನಟಿ ವಿಜಯಲಕ್ಷ್ಮೀ  

Virat Kohli, RCB vs KKR: ಸದ್ಯದಲ್ಲೇ ಆರ್​ಸಿಬಿ ಹೊಸ ಕ್ಯಾಪ್ಟನ್ ಘೋಷಣೆ: ವಿರಾಟ್ ಕೊಹ್ಲಿ ರಿವೀಲ್ ಮಾಡಿದ್ರು ವಿಶೇಷ ಮಾಹಿತಿ

Read Full Article

Click on your DTH Provider to Add TV9 Kannada