Virat Kohli, RCB vs KKR: ಸದ್ಯದಲ್ಲೇ ಆರ್​ಸಿಬಿ ಹೊಸ ಕ್ಯಾಪ್ಟನ್ ಘೋಷಣೆ: ವಿರಾಟ್ ಕೊಹ್ಲಿ ರಿವೀಲ್ ಮಾಡಿದ್ರು ವಿಶೇಷ ಮಾಹಿತಿ

Virat Kohli retires as RCB captain: ವಿರಾಟ್ ಕೊಹ್ಲಿ ಆರ್​ಸಿಬಿ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಯಲು ಕಾರಣ ಏನು ಎಂಬುದು ಈವರೆಗೆ ಗೊಂದಲವಾಗಿಯೇ ಉಳಿದದಿತ್ತು. ಜೊತೆಗೆ ಆರ್​ಸಿಬಿ ಮುಂದಿನ ನಾಯಕ ಯಾರೆಂದು ಇನ್ನೂ ಪ್ರಶ್ನೆಯಾಗೇ ಉಳಿದಿದೆ.

Virat Kohli, RCB vs KKR: ಸದ್ಯದಲ್ಲೇ ಆರ್​ಸಿಬಿ ಹೊಸ ಕ್ಯಾಪ್ಟನ್ ಘೋಷಣೆ: ವಿರಾಟ್ ಕೊಹ್ಲಿ ರಿವೀಲ್ ಮಾಡಿದ್ರು ವಿಶೇಷ ಮಾಹಿತಿ
RCB Captain Virat Kohli
Follow us
TV9 Web
| Updated By: Vinay Bhat

Updated on: Oct 12, 2021 | 11:27 AM

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಐಪಿಎಲ್ 2021ರ ಎಲಿಮಿನೇಟರ್ (IPL 2021 Eliminator) ಪಂದ್ಯದಲ್ಲಿ ಸೋಲುವ ಮೂಲಕ ಟೂರ್ನಿಯಿಂದ (RCB out of IPL 2021) ಹೊರಬಿದ್ದಿದೆ. ಈ ಮೂಲಕ ಆರ್​ಸಿಬಿ (RCB) ನಾಯಕನಾಗಿ ವಿರಾಟ್ ಕೊಹ್ಲಿ (Virat Kohli) ಅವರ ಜವಾಬ್ದಾರಿ ಕೂಡ ಕೊನೆಗೊಂಡಿದೆ. ಬೆಂಗಳೂರು ಟ್ರೋಫಿ ಗೆಎಲ್ಲುವ ಕನಸು ಕೊಹ್ಲಿ ನಾಯಕತ್ವದಲ್ಲಿ ಈಡೇರಲೇಯಿಲ್ಲ ಎಂಬುದು ಬೇಸರದ ಸಂಗತಿ. ಆರ್‌ಸಿಬಿ ತಂಡದ ಪೂರ್ಣ ಪ್ರಮಾಣದ ನಾಯಕನಾಗಿ ವಿರಾಟ್ ಕೊಹ್ಲಿ ಜವಾಬ್ಧಾರಿ ವಹಿಸಿಕೊಂಡಿದ್ದು 2013ರಲ್ಲಿ. ಅದಾದ ಬಳಿಕ ಸತತವಾಗಿ ತಂಡವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಕೊಹ್ಲಿ, ಎಬಿ ಡಿವಿಲಿಯರ್ಸ್ (AB de Villiers), ಚಹಾಲ್​​ರಂತಹ ಶ್ರೇಷ್ಠ ಆಟಗಾರರು ತಂಡದಲ್ಲಿದ್ದರೂ, ಇನ್ನೂ ಕೆಲ ಆಟಗಾರರು ಬಂದು ಹೋಗಿದ್ದರೂ ಈವರೆಗೆ ಟ್ರೋಫಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇವೆಲ್ಲದರ ನಡುವೆ ಕೊಹ್ಲಿ ಆರ್​ಸಿಬಿ ನಾಯಕತ್ವ ತ್ಯಜಿಸಿದ್ದಾರೆ. ಹೀಗಾಗಿ ಮುಂದಿನ ಆರ್​ಸಿಬಿ ನಾಯಕ (RCB New Captain) ಎಂಬ ಪ್ರಶ್ನೆಯೂ ಎದ್ದಿದೆ.

ವಿರಾಟ್ ಕೊಹ್ಲಿ ಆರ್​ಸಿಬಿ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಯಲು ಕಾರಣ ಏನು ಎಂಬುದು ಈವರೆಗೆ ಗೊಂದಲವಾಗಿಯೇ ಉಳಿದದಿತ್ತು. ಕ್ಯಾಪ್ಟನ್ಸಿಗೆ ಗುಡ್​ ಬೈ ಹೇಳುವ ಮುನ್ನ ಕೊಹ್ಲಿ ಇವೆಲ್ಲದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಆರ್‌ಸಿಬಿ ತಂಡದ ನಾಯಕತ್ವ ತ್ಯಜಿಸಲು ಪ್ರಮುಖ ಕಾರಣ ಕೆಲಸದ ಹೊರೆ ಎಂಬುದಾಗಿ ಕೊಹ್ಲಿ ಹೇಳಿದ್ದಾರೆ.

“ನನಗಿರುವ ವರ್ಕ್‌ಲೋಡ್ ನಾಯಕತ್ವ ತ್ಯಜಿಸಲು ಇರುವ ಪ್ರಮುಖವಾದ ಕಾರಣ. ನೀಡಿದ ಜವಾಬ್ಧಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುವುದಕ್ಕೆ ನಾನು ಬಯಸುತ್ತೇನೆ. ಯುವ ಕ್ರಿಕೆಟಿಗರು ಮುಂದೆ ಬಂದು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವ ವಾತಾವರಣ ನಿರ್ಮಿಸಲು ನನ್ನಿಂದ ಸಾಧ್ಯವಾದಷ್ಟು ಪ್ರಯತ್ನ ನಡೆಸಿದ್ದೇನೆ. ಕೆಲವೊಮ್ಮೆ ಭಾರತ ತಂಡದ ಮಟ್ಟಕ್ಕೂ ಇಲ್ಲಿ ಪ್ರಯತ್ನ ನಡೆಸಿರುವುದುಂಟು. ನನ್ನಿಂದ ಸಾಧ್ಯವಾದಷ್ಟು ಉತ್ತಮವಾದದನ್ನು ಆರ್‌ಸಿಬಿಗೆ ನೀಡಿದ್ದೇನೆ. ಇಲ್ಲಿಯವರೆಗೂ ಬೆಂಗಳೂರು ಫ್ರಾಂಚೈಸಿಗೆ ಶೇ. 120ರಷ್ಟು ಸಹಕಾರ ಹಾಗೂ ಬೆಂಬಲ ನೀಡಿದ್ದೇನೆ” ಎಂದು ಕೊಹ್ಲಿ ಹೇಳಿದ್ದಾರೆ.

“ಆರ್​ಸಿಬಿ ತಂಡಕ್ಕೆ ನನ್ನ ಕೊಡುಗೆ ಸದಾ ಇರುತ್ತದೆ. ಮುಂದೆಯೂ ಆಟಗಾರನಾಗಿ ಮೈದಾನದಲ್ಲಿ ಇದನ್ನು ಮುಂದುವರಿಸುತ್ತೇನೆ. ಮುಂದಿನ ಮೂರು ವರ್ಷಗಳಿಗೆ ತಂಡವನ್ನು ಮತ್ತೆ ಕಟ್ಟಲು ಇದು ಸಕಾಲವಾಗಿದೆ. ನಾನಂತೂ ಖಚಿತವಾಗಿ ಆರ್‌ಸಿಬಿಗೆ ಆಡುತ್ತೇನೆ. ನಿಷ್ಠೆ ಹಾಗೂ ಬದ್ದತೆಯ ವಿಷಯ ಇದಾಗಿದೆ. ಹಾಗಾಗಿ, ಐಪಿಎಲ್‌ ವೃತ್ತಿ ಬದುಕಿನ ಕೊನೆಯ ದಿನದವರೆಗೂ ಆರ್‌ಸಿಬಿ ಪರ ಆಡುತ್ತೇನೆ” ಎಂದು ವಿರಾಟ್‌ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

ಐಪಿಎಲ್‌ ಇತಿಹಾಸದಲ್ಲಿ ಆರ್‌ಸಿಬಿಗೆ ವಿರಾಟ್ ಕೊಹ್ಲಿ ನಾಯಕತ್ವ ವಹಿಸಿ 140 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಇದರಲ್ಲಿ ಆರ್‌ಸಿಬಿ ಗೆದ್ದಿರುವ ಪಂದ್ಯಗಳು 66 ಮಾತ್ರ. 70 ಪಂದ್ಯಗಳಲ್ಲಿ ಸೋಲು ಕಂಡರೆ, 4 ಪಂದ್ಯಗಳು ಫಲಿತಾಂಶವಿಲ್ಲ ಅಂತ್ಯಕಂಡಿವೆ. ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ 2016 ರಲ್ಲಿ ಒಂದು ಬಾರಿ ಮಾತ್ರ ಫೈನಲ್‌ಗೆ ಪ್ರವೇಶ ಪಡೆದಿತ್ತು. 2017 ಮತ್ತು 2019 ರ ಐಪಿಎಲ್ ಸೀಸನ್​ನಲ್ಲಿ ಆರ್​ಸಿಬಿ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು.

ಐಪಿಎಲ್ 2022ಕ್ಕೆ ಮೆಗಾ ಆಕ್ಷನ್ ನಡೆಯಲಿದೆ. ಎಲ್ಲ ತಂಡಗಳಲ್ಲಿ ಹೊಸ ಬದಲಾವಣೆ ಆಗಲಿದೆ. ಆರ್​ಸಿಬಿ ಫ್ರಾಂಚೈಸಿ ವಿರಾಟ್ ಕೊಹ್ಲಿ ಅವರನ್ನು ರಿಟೇನ್ ಮಾಡುವುದು ಖಚಿತ. ಸದ್ಯ ಮುಂದಿನ ಆರ್​ಸಿಬಿ ನಾಯಕ ಯಾರು ಎಂಬುದು ಬಹಿರಂಗವಾಗಬೇಕಷ್ಟೆ. ಇನ್​ಸೈಡ್ ಸ್ಪೋರ್ಟ್ಸ್ ಮಾಡಿರುವ ವರದಿ ಪ್ರಕಾರ, ಫ್ರಾಂಚೈಸಿ ಆರ್​ಸಿಬಿ ಹೊಸ ನಾಯಕನ ಹುಡುಕಾಟದ ಕೆಲಸ ಶುರು ಮಾಡಿದೆಯಂತೆ. ಇದಕ್ಕೆ ಕೆಲ ಸಮಯ ಬೇಕಾಗುತ್ತದೆ. ಆದರೆ, ಶೀಘ್ರದಲ್ಲೇ ನೂತನ ನಾಯಕನ ಹೆಸರನ್ನು ಘೋಷಣೆ ಮಾಡುತ್ತೇವೆ ಎಂದು ಆರ್​ಸಿಬಿ ಮೂಲಗಳು ತಿಳಿಸಿವೆಯಂತೆ.

RCB vs KKR, IPL 2021 Eliminator: ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಆಡಿದ ಬೇಸರದ ಮಾತು ಕೇಳಿ: ಸೋಲಿಗೆ ಇದುವೇ ಕಾರಣವಂತೆ

Virat Kohli: ಎರಡೆರಡು ನೋವು ತುಂಬಿಕೊಂಡು ದುಃಖದಿಂದ ಮೈದಾನದಲ್ಲೇ ಕಣ್ಣೀರಿಟ್ಟ ವಿರಾಟ್ ಕೊಹ್ಲಿ

(Royal Challengers Bangalore franchise to announce its new captain as replacement to Virat Kohli soon for RCB)

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ