Virat Kohli: ಎರಡೆರಡು ನೋವು ತುಂಬಿಕೊಂಡು ದುಃಖದಿಂದ ಮೈದಾನದಲ್ಲೇ ಕಣ್ಣೀರಿಟ್ಟ ವಿರಾಟ್ ಕೊಹ್ಲಿ

Virat Kohli Crying, RCB vs KKR IPL 2021: ಐಪಿಎಲ್ 2021ರ ಎಲಿಮಿನೇಟರ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಆರ್​ಸಿಬಿ ಸೋಲು ಕಂಡ ಬೆನ್ನಲ್ಲಿ ನಾಯಕ ವಿರಾಟ್ ಕೊಹ್ಲಿ ಈ ನೋವನ್ನು ತಾಳಲಾರದೆ ಮೈದಾನದಲ್ಲೇ ಕಣ್ಣೀರಿಟ್ಟ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

Virat Kohli: ಎರಡೆರಡು ನೋವು ತುಂಬಿಕೊಂಡು ದುಃಖದಿಂದ ಮೈದಾನದಲ್ಲೇ ಕಣ್ಣೀರಿಟ್ಟ ವಿರಾಟ್ ಕೊಹ್ಲಿ
Virat Kohli Crying RCB vs KKR IPL 2021

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಕಪ್ ಗೆಲ್ಲಲಿ ಎಂಬ ಲಕ್ಷಾಂತರ ಅಭಿಮಾನಿಗಳ ಹಾರೈಕೆ ಈ ಬಾರಿಯೂ ಫಲಿಸಲಿಲ್ಲ. ಐಪಿಎಲ್ 2021ರ (IPL 2021) ಲೀಗ್ ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ಲೇ ಆಫ್​ಗೆ ತಲುಪಿದ್ದ ಆರ್​ಸಿಬಿ (RCB) ಒಂದು ಕಳಪೆ ಪ್ರದರ್ಶನದಿಂದ ಟೂರ್ನಿಯಿಂದಲೇ ಹೊರಬಿದ್ದಿದೆ. ಸೋಮವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ (IPL 2021 Eliminator) ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್​ಸಿಬಿ (RCB vs KKR) ಸೋಲುಕಂಡ ನೋವು ಒಂದುಕಡೆಯಾದರೆ ಇತ್ತ ವಿರಾಟ್ ಕೊಹ್ಲಿ (Virat Kohli) ಕಪ್ ಇಲ್ಲದೆ ನಾಯಕತ್ವಕ್ಕೆ ಗುಡ್​ ಬೈ ಹೇಳಿರುವುದು ಮತ್ತೊಂದು ಕಡೆ. ಎರಡೆರಡು ನೋವನ್ನು ತುಂಬಿಕೊಂಡ ಕೊಹ್ಲಿ ಮೈದಾನದಲ್ಲೇ ಭಾವುಕರಾಗಿ ಒಂದು ಕ್ಷಣ ಕಣ್ಣಿನಿಂದ ನೀರು ಜಾರಿದ್ದು ಸುಳ್ಳಲ್ಲ (). ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Video Viral) ಆಗುತ್ತಿದೆ. ಅನೇಕ ಆರ್​ಸಿಬಿ ಅಭಿಮಾನಿಗಳು ಕೂಡ ಕೊಹ್ಲಿಯನ್ನು ಈರೀತಿ ಕಂಡು ಬೇಸರಗೊಂಡಿದ್ದಾರೆ.

ಹೌದು, ಟಾಸ್ ಗೆದ್ದು ಅಚ್ಚರಿ ಎಂಬಂತೆ ಬ್ಯಾಟಿಂಗ್​ ಆಯ್ದುಕೊಂಡ ಆರ್​ಸಿಬಿ ನಿರ್ಧಾರ ಆರಂಭದಲ್ಲಿ ಚೆನ್ನಾಗಿಯೇ ಇತ್ತು. ಓಪನರ್​​ಗಳು ಮೊದಲ ವಿಕಟ್​ಗೆ 49 ರನ್​ಗಳ ಕಾಣಿಕೆ ನೀಡಿದರು. ದೇವದತ್ ಪಡಿಕ್ಕಲ್ 18 ಎಸೆತಗಳಲ್ಲಿ 21 ರನ್ ಕಲೆಹಾಕಿ ಔಟ್ ಆದರು. ಆದರೆ, ನಂತರ ಶುರುವಾಗಿದ್ದು ಸುನಿಲ್ ನರೈನ್ ಸ್ಪಿನ್ ಜಾದು. ಆರ್​ಸಿಬಿಯ ಬೆನ್ನೆಲುಬುಗಳಾಗಿದ್ದ ಸ್ಟಾರ್ ಬ್ಯಾಟ್ಸ್​ಮನ್​ಗಳನ್ನ ತನ್ನ ಸ್ಪಿನ್ ಜಾದು ಮೂಲಕ ನರೈನ್ ಪೆವಿಲಿಯನ್​ಗೆ ಅಟ್ಟಿದರು.

 

 

ವರುಣ್ ಚಕ್ರವರ್ತಿ ಯಾವುದೇ ವಿಕೆಟ್ ಕೀಳಿಲ್ಲವಾದರೂ ಅವರು ನರೈನ್​ಗೆ ನೀಡಿದ ಸಾತ್ ಅದ್ಭುತ. ಶ್ರೀಕರ್ ಭರತ್ 9 ರನ್​ಗೆ ಔಟ್ ಆದರೆ, ಸೆಟ್ ಆಗಿದ್ದ ಕೊಹ್ಲಿ ಅನ್ನು 39 ರನ್​ಗೆ ನರೈಸ್ ಪೆವಿಲಿಯನ್​ಗೆ ಅಟ್ಟಿದರು. ಇನ್ನೆರಡು ಬಿಗ್ ವಿಕೆಟ್​ಗಳಾದ ಎಬಿ ಡಿವಿಲಿಯರ್ಸ್ (11) ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ (15) ಅವರನ್ನೂ ಔಟ್ ಮಾಡುವಲ್ಲಿ ಯಶಸ್ವಿಯಾದರು. ಈ ಮೂಲಕ ಆರ್​ಸಿಬಿ 20 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 138 ರನ್​ಗಳ ಅಲ್ಪ ಮೊತ್ತ ಕಲೆಹಾಕಿತಷ್ಟೆ.

ಕಠಿಣ ಪಿಚ್ ಆದರೂ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಕೆಕೆಆರ್ ಕೂಡ ಪವರ್ ಪ್ಲೇಯ ಕೊನೇಯ ಓವರ್​​ನಲ್ಲಿ ಶುಭ್ಮನ್ ಗಿಲ್ (29) ವಿಕೆಟ್ ಕಳೆದುಕೊಂಡಿತು. ನಂತರ ರಾಹುಲ್ ತ್ರಿಪಾಠಿ ಔಟ್ ಆದರೆ ವೆಂಕಟೇಶ್ ಅಯ್ಯರ್ ಕೂಡ ಬೇಗನೆ ನಿರ್ಗಸಿದರು. ಇಲ್ಲಿಂದ ಪಂದ್ಯ ರೋಚಕತೆ ಸೃಷ್ಟಿಸಿತು.

ಆದರೆ, ಈ ಸಂದರ್ಭ ಬಂದ ಸುನಿಲ್ ನರೈನ್ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಕೇವಲ 15 ಎಸೆತಗಳಲ್ಲಿ 3 ಸಿಕ್ಸರ್ ಸಿಡಿಸಿ 26 ರನ್ ಚಚ್ಚಿ ಪಂದ್ಯವನ್ನು ಕೆಕೆಆರ್ ಕಡೆ ವಾಲಿಸಿದರು. ನಂತರದ ಎರಡು ಓವರ್​ಗಳಲ್ಲಿ ಆರ್​ಸಿಬಿ ಬೌಲರ್​ಗಳು ಗೆಲುವಿಗೆ ಹೋರಾಟ ನಡೆಸಿದರೂ ಅಂತಿಮ ಹಂತದಲ್ಲಿ ಅದು ಸಾಧ್ಯವಾಗಲಿಲ್ಲ. 19.4 ಓವರ್​ನಲ್ಲಿ ಕೆಕೆಆರ್ ಗೆಲುವಿನ ದಡ ಮುಟ್ಟಿತು.

ಆರ್​ಸಿಬಿ ಈ ಬಾರಿಯೂ ಕಪ್ ಗೆಲ್ಲುವಲ್ಲಿ ವಿಫಲವಾಗಿದ್ದರೂ ಹಿಂದಿನ ಸೀಸನ್​ಗೆ ಹೋಲಿಸಿದರೆ ಈ ಸಲ ಅತ್ಯುತ್ತಮ ಪ್ರದರ್ಶನ ನೀಡಿದೆ. ಕೆಲ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ಮುಂದಿನ ಆವೃತ್ತಿಗೆ ಮೆಗಾ ಆಕ್ಷನ್ ಇರುವ ಕಾರಣ ಆರ್​ಸಿಬಿ ಯಾವ ಆಟಗಾರರನ್ನು ತನ್ನಲ್ಲೇ ಉಳಿಸಿಕೊಳ್ಳುತ್ತೆ ಎಂಬುದನ್ನು ಕಾದುನೋಡಬೇಕಿದೆ.

Harshal Patel: ಪಟ್ಟ ಶ್ರಮಕ್ಕೆ ಸಿಗದ ಫಲ: ಹರ್ಷಲ್ ಪಟೇಲ್ ಐತಿಹಾಸಿಕ ದಾಖಲೆ ನಿರ್ಮಿಸಲು ಕೈಕೊಟ್ಟ ಫೀಲ್ಡರ್​ಗಳು

IPL 2021: ಸೋಲಿನೊಂದಿಗೆ ಆರ್​ಸಿಬಿ ನಾಯಕತ್ವ ತೊರೆದ ಕೊಹ್ಲಿ; ಕಪ್ ಗೆಲ್ಲಬೇಕೆಂಬ ಅಭಿಮಾನಿಗಳ ಕನಸು ಈ ವರ್ಷವೂ ನನಸಾಗಲಿಲ್ಲ

(Virat Kohli Crying After Losing RCB vs KKR IPL 2021 Eliminator Match Video goes Viral)

Read Full Article

Click on your DTH Provider to Add TV9 Kannada