Harshal Patel: ಪಟ್ಟ ಶ್ರಮಕ್ಕೆ ಸಿಗದ ಫಲ: ಹರ್ಷಲ್ ಪಟೇಲ್ ಐತಿಹಾಸಿಕ ದಾಖಲೆ ನಿರ್ಮಿಸಲು ಕೈಕೊಟ್ಟ ಫೀಲ್ಡರ್​ಗಳು

IPL 2021 Eliminator, RCB vs KKR: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಆರ್​ಸಿಬಿ ಬೌಲರ್ ಹರ್ಷಲ್ ಪಟೇಲ್​ಗೆ ಐತಿಹಾಸಿಕ ದಾಖಲೆ ನಿರ್ಮಿಸುವ ಅವಕಾಶ ಕೂದಲೆಳೆಯಿಂದ ಕೈತಪ್ಪಿತು. ಕೆಕೆಆರ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಇದು ಸಾಧ್ಯವಾಗಲಿಲ್ಲ.

Harshal Patel: ಪಟ್ಟ ಶ್ರಮಕ್ಕೆ ಸಿಗದ ಫಲ: ಹರ್ಷಲ್ ಪಟೇಲ್ ಐತಿಹಾಸಿಕ ದಾಖಲೆ ನಿರ್ಮಿಸಲು ಕೈಕೊಟ್ಟ ಫೀಲ್ಡರ್​ಗಳು
ಇನ್ನು ಇಡೀ ಸೀಸನ್​ನಲ್ಲಿ ಹಲವು ಬಾರಿ ಪಂದ್ಯದ ಗತಿ ಬದಲಿಸಿದ ಆಟಗಾರನಿಗೆ ನೀಡಲಾಗುವ ಗೇಮ್ ಚೇಂಜರ್ ಆಫ್ ದಿ ಸೀಸನ್​- ಆರ್​ಸಿಬಿಯ ಹರ್ಷಲ್ ಪಟೇಲ್ ಅವರಿಗೆ ಸಿಕ್ಕಿದೆ.
Follow us
TV9 Web
| Updated By: Vinay Bhat

Updated on: Oct 12, 2021 | 7:22 AM

ಈ ಬಾರಿಯಾದರೂ (Royal Challengers Bangalore) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲಲಿ ಎಂಬ ಅಭಿಮಾನಿಗಳ ಆಸೆ ಈಡೇರಲೇಯಿಲ್ಲ. ಐಪಿಎಲ್ 2021ರ ಎಲಿಮಿನೇಟರ್ (IPL 2021 Eliminator) ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ಆರ್​ಸಿಬಿ (RCB vs KKR) ಸೊಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿತ್ತು. ಬೌಲಿಂಗ್​ನಲ್ಲಿ ಸುನಿಲ್ ನರೈನ್ (Sunil Narine) ಕೊಹ್ಲಿ ಪಡೆಗೆ ಕಂಟಕವಾದರೆ ಬ್ಯಾಟಿಂಗ್​ನಲ್ಲೂ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಇದರೊಂದಿಗೆ ವಿರಾಟ್‌ ಕೊಹ್ಲಿ (Virat Kohli) ಅವರ ಆರ್‌ಸಿಬಿ ನಾಯಕತ್ವದ (RCB Captain) ನಂಟು ಬರಿಗೈಯಲ್ಲಿ ಕೊನೆಗೊಂಡಿದೆ. ಬೆಂಗಳೂರು ತಂಡ ಟೂರ್ನಿಯಿಂದ ಹೊರಬಿದ್ದರೂ ಹರ್ಷಲ್ ಪಟೇಲ್ (Harshal Patel) ಕೊಡುಗೆ ಮರೆಯುವಂತಿಲ್ಲ. ತಂಡದ ಗೆಲುವಿಗೆ ಪ್ರತೀ ಪಂದ್ಯದಲ್ಲಿ ಇವರು ಪಟ್ಟ ಶ್ರಮ ಅಷ್ಟಿಟ್ಟಲ್ಲ. ಆದರೆ, ಇವರು ಪಟ್ಟ ಶ್ರಮಕ್ಕೆ ತಕ್ಕಂತೆ ಪ್ರತಿಫಲ ಸಿಗಲಿಲ್ಲ.

ಹೌದು, ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಹರ್ಷಲ್ ಪಟೇಲ್​ಗೆ ಐತಿಹಾಸಿಕ ದಾಖಲೆ ನಿರ್ಮಿಸುವ ಅವಕಾಶ ಕೂದಲೆಳೆಯಿಂದ ಕೈತಪ್ಪಿತು. ಆರ್​ಸಿಬಿಯ ಫೀಲ್ಡರ್ ಆ ಒಂದು ತಪ್ಪು ಮಾಡದಿದ್ದರೆ ಇಂದು ಪಟೇಲ್ ಐಪಿಎಲ್​ನ ಹೀರೋ ಎಂದೆನಿಸಿಕೊಳ್ಳುತ್ತಿದ್ದರು. ಪಟೇಲ್ ತಮ್ಮ ಅದ್ಭುತ ಸ್ಲೋ ಬಾಲ್ ಮೂಲಕ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದವರು. ನಿನ್ನೆಯ ಕೆಕೆಆರ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲೂ 2 ವಿಕೆಟ್ ಪಡೆದರು. ಈ ಮೂಲಕ ಈ ಸೀಸನ್​ನಲ್ಲಿ ಹರ್ಷಲ್ ಪಡೆದ ವಿಕೆಟ್​ಗಳ ಸಂಖ್ಯೆ 32 ಆಯಿತು.

ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಬಹಳಷ್ಟು ಮುಂದಿರುವ ಹರ್ಷಲ್ ಈ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಆದರೆ, ಐಪಿಎಲ್ ಇತಿಹಾಸದಲ್ಲೇ ಒಂದು ಸೀಸನ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನ ಸ್ಥಾಪಿಸುವುದರಿಂದ ಸ್ವಲ್ಪದರಲ್ಲೇ ವಂಚಿತರಾದರು. 2013-14ರ ಐಪಿಎಲ್ ಸೀಸನ್​ನಲ್ಲಿ ಡ್ವೇನ್ ಬ್ರಾವೋ 32 ವಿಕೆಟ್ ಪಡೆದು ಮಿಂಚಿದ್ದರು. ಈ ದಾಖಲೆಯನ್ನು ಮುರಿಯಲು ಹರ್ಷಲ್​​ಗೆ ಉತ್ತಮ ಅವಕಾಶ ಇತ್ತಾದರೂ ಅದು ಸಾಧ್ಯವಾಗಲಿಲ್ಲ. ಬದಲಾಗಿ ಬ್ರಾವೋ ದಾಖಲೆಯನ್ನ ಸರಿಗಟ್ಟಿದ್ದಾರೆ.

17ನೇ ಓವರ್​ನ ಮೊದಲ ಎಸೆತದಲ್ಲೇ ಹರ್ಷಲ್ ಪಟೇಲ್ ಅವರು ಸುನೀಲ್ ನರೈನ್ ವಿಕೆಟ್ ಪಡೆಯಬೇಕಿತ್ತು. ಸುನೀಲ್ ಹೊಡೆದ ಚೆಂಡು ಮಿಡ್ ಆನ್​ನತ್ತ ಮೇಲೆ ಹೋಯಿತು. ಮಿಡ್ ವಿಕೆಟ್​ನಲ್ಲಿದ್ದ ದೇವದತ್ ಪಡಿಕ್ಕಲ್ ಓಡಿ ಬಂದು ಹಿಡಿಯಲು ಪ್ರಯತ್ನಿಸಿದರೂ ಅದರು ಕೈತಪ್ಪಿ ಬಿದ್ದಿತು. ಪಡಿಕ್ಕಲ್ ಆ ವಿಕೆಟ್ ಕಿತ್ತಿದ್ದರೆ ಹರ್ಷಲ್ ಪಟೇಲ್ ಹೊಸ ಇತಿಹಾಸ ಬರೆಯುತ್ತಿದ್ದರು. ಈ ಸೀಸನ್​ನಲ್ಲಿ ಅವರು ಪಟ್ಟ ಶ್ರಮಕ್ಕೆ ತಕ್ಕ ಫಲ ಸಿಗುತ್ತಿತ್ತು ಎಂಬುದು ನಿಜ.

ಕೆಕೆಆರ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಹರ್ಷಲ್ ಪಟೇಲ್ 4 ಓವರ್ ಬೌಲ್ ಮಾಡಿ ಕೇವಲ 19 ರನ್ ನೀಡಿ 2 ಪ್ರಮುಖ ವಿಕೆಟ್ ಕಿತ್ತರು. ಅತ್ಯುತ್ತಮ ಫಾರ್ಮ್​ನಲ್ಲಿದ್ದ ಶುಭ್ಮನ್ ಗಿಲ್ ಮತ್ತು ವೆಂಕಟೇಶ್ ಅಯ್ಯರ್ ಅವರಿಬ್ಬರನ್ನೂ ಪಟೇಲ್ ಔಟ್ ಮಾಡಿದರು. ಆದರೆ, ಸಿರಾಜ್ ಮತ್ತು ಚಹಾಲ್ ಬಿಟ್ಟು ಇತರೆ ಬೌಲರ್​ಗಳು ಸರಿಯಾಗಿ ಸಾತ್ ನೀಡದ ಕಾರಣ ಆರ್​ಸಿಬಿ ಸೋಲು ಕಂಡು ಲೀಗ್​ನಿಂದ ಹೊರಬಿತ್ತು.

IPL 2021: ಸೋಲಿನೊಂದಿಗೆ ಆರ್​ಸಿಬಿ ನಾಯಕತ್ವ ತೊರೆದ ಕೊಹ್ಲಿ; ಕಪ್ ಗೆಲ್ಲಬೇಕೆಂಬ ಅಭಿಮಾನಿಗಳ ಕನಸು ಈ ವರ್ಷವೂ ನನಸಾಗಲಿಲ್ಲ

(Harshal Patel equalled Dwayne Bravo record in RCB vs KKR Eliminator Match but fails to set historical record in IPL History)

ಜಮೀರ್ ಪದಬಳಕೆ ವಿಷಯವನ್ನು ಶಿವಕುಮಾರ್ ನೋಡಿಕೊಳ್ಳುತ್ತಾರೆ: ಪರಮೇಶ್ವರ್
ಜಮೀರ್ ಪದಬಳಕೆ ವಿಷಯವನ್ನು ಶಿವಕುಮಾರ್ ನೋಡಿಕೊಳ್ಳುತ್ತಾರೆ: ಪರಮೇಶ್ವರ್
ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್
ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್
ಧರಣಿನಿರತ ಮಹಿಳೆಯರನ್ನು ಜೊತೆಗೂಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್
ಧರಣಿನಿರತ ಮಹಿಳೆಯರನ್ನು ಜೊತೆಗೂಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್
ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು
ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು
10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?
10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ
ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!
ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್