IPL 2021: RCB ಪರ ಟಾಪ್ ಪರ್ಫಾಮರ್ ಯಾರು ಗೊತ್ತಾ?
Glenn Maxwell: ಇದೇ ಮೊದಲ ಬಾರಿ ಆರ್ಸಿಬಿ ಪರ ಆಡಿರುವ ಗ್ಲೆನ್ ಮ್ಯಾಕ್ಸ್ವೆಲ್ ಭರ್ಜರಿ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14ನಿಂದ (IPL 2021) ಆರ್ಸಿಬಿ (RCB) ಹೊರಬಿದ್ದಿದೆ. ಕೆಕೆಆರ್ (KKR) ವಿರುದ್ದದ ಎಲಿಮಿನೇಟರ್ ಪಂದ್ಯದಲ್ಲಿ 4 ವಿಕೆಟ್ಗಳಿಂದ ಸೋತು ಆರ್ಸಿಬಿ ಐಪಿಎಲ್ ಅಭಿಯಾನವನ್ನು ಅಂತ್ಯಗೊಳಿಸಿದೆ. ಆದರೆ ಈ ಬಾರಿಯ ಆರ್ಸಿಬಿ ಪ್ರದರ್ಶನ ಈ ಹಿಂದಿಗಿಂತಲೂ ಅತ್ಯುತ್ತವಾಗಿತ್ತು ಎಂಬುದೇ ವಿಶೇಷ. ಅದರಲ್ಲೂ ಮೊದಲಾರ್ಧದಲ್ಲೇ ಭರ್ಜರಿ ಪ್ರದರ್ಶನ ನೀಡುವ ಮೂಲಕ ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರೇಟ್ ತಂಡಗಳಲ್ಲಿ ಗುರುತಿಸಿಕೊಂಡಿತು. ಅಷ್ಟೇ ಅಲ್ಲದೆ ಲೀಗ್ ಹಂತದ 2 ಪಂದ್ಯಗಳು ಬಾಕಿ ಇರುವಂತೆಯೇ ಪ್ಲೇಆಫ್ ಪ್ರವೇಶಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಹೀಗೆ ಆಡಿದ 15 ಪಂದ್ಯಗಳಲ್ಲಿ 9 ಗೆಲುವು ದಾಖಲಿಸುವಲ್ಲಿ ಆರ್ಸಿಬಿ ಪರ ಅತ್ಯುತ್ತಮ ಕೊಡುಗೆ ನೀಡಿದ್ದು ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell).
ಹೌದು, ಈ ಬಾರಿ ಆರ್ಸಿಬಿ ಪರ ಅತೀ ಹೆಚ್ಚು ರನ್ ಕಲೆಹಾಕಿದ್ದು ಗ್ಲೆನ್ ಮ್ಯಾಕ್ಸ್ವೆಲ್. ಮ್ಯಾಕ್ಸಿ ಬ್ಯಾಟ್ನಿಂದ ಈ ಬಾರಿ ಹರಿದು ಬಂದಿದ್ದು ಬರೋಬ್ಬರಿ 513 ರನ್ಗಳು.
ಇನ್ನು ಆರ್ಸಿಬಿ ಪರ ಈ ಸಲ ಅತೀ ಹೆಚ್ಚು ಅರ್ಧಶತಕ ಬಾರಿಸಿದ್ದು ಕೂಡ ಮ್ಯಾಕ್ಸ್ವೆಲ್. 15 ಪಂದ್ಯಗಳನ್ನಾಡಿರುವ ಮ್ಯಾಕ್ಸಿ 6 ಅರ್ಧಶತಕ ಸಿಡಿಸಿದ್ದರು.
ಹಾಗೆಯೇ ಈ ಸಲ ಆರ್ಸಿಬಿ ಪರ 21 ಸಿಕ್ಸ್ ಸಿಡಿಸುವ ಮೂಲಕ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟರ್ ಎನಿಸಿಕೊಂಡರು.
ಇದರ ಜೊತೆ ಅತೀ ಹೆಚ್ಚು ಫೋರ್ ಬಾರಿಸಿದ ಆರ್ಸಿಬಿ ಆಟಗಾರನಾಗಿ ಕೂಡ ಮ್ಯಾಕ್ಸ್ವೆಲ್ ಹೊರಹೊಮ್ಮಿದ್ದಾರೆ. ಈ ಸಲ ಮ್ಯಾಕ್ಸಿಯ ಬ್ಯಾಟ್ನಿಂದ ಮೂಡಿಬಂದಿದ್ದು 48 ಫೋರ್.
ಇನ್ನು 5 ಕ್ಯಾಚ್ ಹಾಗೂ 3 ವಿಕೆಟ್ ಪಡೆಯುವ ಮೂಲಕ ತಂಡದ ಪರ ಸಂಪೂರ್ಣ ಆಲ್ರೌಂಡರ್ ಪ್ರದರ್ಶನ ನೀಡಿದ್ದರು.
ಇದೇ ಮೊದಲ ಬಾರಿ ಆರ್ಸಿಬಿ ಪರ ಆಡಿರುವ ಗ್ಲೆನ್ ಮ್ಯಾಕ್ಸ್ವೆಲ್ ಭರ್ಜರಿ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದಾಗ್ಯೂ ಎಲಿಮಿನೇಟರ್ನಲ್ಲಿ ಹೊರಬೀಳುವ ಮೂಲಕ ಆರ್ಸಿಬಿ ಪ್ರಶಸ್ತಿ ರೇಸ್ನಿಂದ ಹೊರಬಿದ್ದಿದ್ದು ಮಾತ್ರ ವಿಪರ್ಯಾಸ.
ಇದನ್ನೂ ಓದಿ: KL Rahul: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ 7 ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ:ಟಿ20 ವಿಶ್ವಕಪ್ ಪಾಕ್ ತಂಡದಲ್ಲಿ ಪ್ರಮುಖ ಬದಲಾವಣೆ: 39 ವರ್ಷದ ಆಲ್ರೌಂಡರ್ ಆಯ್ಕೆ
ಇದನ್ನೂ ಓದಿ: IPL 2021: ಅಚ್ಚರಿಯಾದರೂ ಇದು ಸತ್ಯ: 1 ವಿಕೆಟ್ಗೆ 1 ಕೋಟಿ ಪಡೆದ ಕ್ರಿಸ್ ಮೋರಿಸ್..!
(Glenn Maxwell Top performer in Rcb)