KL Rahul: ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕ 7 ದಾಖಲೆ ಬರೆದ ಕೆಎಲ್ ರಾಹುಲ್

KL Rahul’s record: ಐಪಿಎಲ್​ ಸೀಸನ್ 2021ರಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿದ ಬ್ಯಾಟರುಗಳ ಪಟ್ಟಿಯಲ್ಲಿ ರಾಹುಲ್ ಅಗ್ರಸ್ಥಾನದಲ್ಲಿದ್ದಾರೆ. 13 ಪಂದ್ಯಗಳನ್ನಾಡಿರುವ ರಾಹುಲ್ 6 ಅರ್ಧಶತಕದೊಂದಿಗೆ ಒಟ್ಟು 626 ರನ್ ಕಲೆಹಾಕಿದ್ದಾರೆ.

KL Rahul: ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕ 7 ದಾಖಲೆ ಬರೆದ ಕೆಎಲ್ ರಾಹುಲ್
ಇನ್ನು ಅತೀ ಹೆಚ್ಚು ಸಿಕ್ಸ್​ ಸಿಡಿಸಿದ ಆಟಗಾರನಿಗೆ ನೀಡಲಾಗುವ ಪ್ರಶಸ್ತಿ, 30 ಸಿಕ್ಸ್ ಬಾರಿಸಿದ ಕೆಎಲ್ ರಾಹುಲ್ ಪಾಲಾಗಿದೆ.
Follow us
TV9 Web
| Updated By: ಝಾಹಿರ್ ಯೂಸುಫ್

Updated on:Oct 08, 2021 | 4:46 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14ನಲ್ಲಿ (IPL 2021) ಪಂಜಾಬ್ ಕಿಂಗ್ಸ್ (PBKS)​ ಅಭಿಯಾನ ಅಂತ್ಯಗೊಂಡಿದೆ. ಆಡಿದ 14 ಪಂದ್ಯಗಳಲ್ಲಿ 8 ಸೋಲು ಹಾಗೂ 6 ಗೆಲುವಿನೊಂದಿಗೆ ಪಂಜಾಬ್ ತಂಡವು ಪಾಯಿಂಟ್ ಟೇಬಲ್​ನಲ್ಲಿ 5ನೇ ಸ್ಥಾನ ಅಲಂಕರಿಸಿದೆ. ಈ ಬಾರಿ ಪಂಜಾಬ್ ಕಿಂಗ್ಸ್​ ತಂಡವು ನೀರಸ ಪ್ರದರ್ಶನ ನೀಡಿದರೂ ತಂಡದ ನಾಯಕ ಕೆಎಲ್ ರಾಹುಲ್ (KL Rahul) ಮಾತ್ರ ಎಂದಿನಂತೆ ಈ ಸಲ ಕೂಡ ಆರ್ಭಟಿಸಿದ್ದಾರೆ. ಅದರಲ್ಲೂ ಲೀಗ್​ ಹಂತದ ಅಂತಿಮ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ದ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಸಿಎಸ್​ಕೆ ನೀಡಿದ 137 ರನ್​ಗಳ ಸಾಧಾರಣ ಸವಾಲು ಬೆನ್ನತ್ತಿದ ಪಂಜಾಬ್​ಗೆ ರಾಹುಲ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ಓವರ್​ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಪಂಜಾಬ್ ನಾಯಕ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು.

ಅದರಂತೆ ರಾಹುಲ್ ಬ್ಯಾಟ್​ನಿಂದ ಮೂಡಿಬಂದ ಒಟ್ಟು ಸಿಕ್ಸ್​ಗಳ ಸಂಖ್ಯೆ 8. ಹಾಗೆಯೇ ಫೋರ್​ಗಳ ಸಂಖ್ಯೆ 7. ಹೀಗೆ ಭರ್ಜರಿ ಇನಿಂಗ್ಸ್​ ಆಡಿದ ರಾಹುಲ್ ಅಂತಿಮವಾಗಿ 42 ಎಸೆತಗಳಲ್ಲಿ ಅಜೇಯ 98 ರನ್​ ಬಾರಿಸುವ ಮೂಲಕ 13 ಓವರ್​ನಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಬಲಿಷ್ಠ ಸಿಎಸ್​ಕೆಗೆ 6 ವಿಕೆಟ್​ಗಳಿಂದ ಸೋಲುಣಿಸಿ ವಿರೋಚಿತವಾಗಿ ಐಪಿಎಲ್ ಅಭಿಯಾನಕ್ಕೆ ವಿದಾಯ ಹೇಳಿದರು. ಅಷ್ಟೇ ಅಲ್ಲದೆ ಕೆಎಲ್ಆರ್​ ಅವರ ಈ ಭರ್ಜರಿ ಇನಿಂಗ್ಸ್​ನೊಂದಿಗೆ ಹಲವು ದಾಖಲೆಗಳು ಕೂಡ ನಿರ್ಮಾಣವಾಗಿರುವುದು ವಿಶೇಷ.

ಹೌದು, ಒಂದೆಡೆ ರಾಹುಲ್ ಬ್ಯಾಟ್​ನಿಂದ ಸಿಕ್ಸ್​-ಫೋರ್​ಗಳ ಸುರಿಮಳೆಯಾಗುತ್ತಿದ್ದಂತೆ ಇತ್ತ ದಾಖಲೆಗಳು ಕೂಡ ನಿರ್ಮಾಣವಾಗುತ್ತಿತ್ತು. ಅದರಂತೆ ಒಂದು ಭರ್ಜರಿ ಇನಿಂಗ್ಸ್​ನಿಂದ ಕೆಎಲ್ ರಾಹುಲ್ 6 ದಾಖಲೆಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ಆ ದಾಖಲೆಗಳಾವುವು ಎಂದರೆ…

1000 ರನ್ – ಕೆಎಲ್ ರಾಹುಲ್ ಯುಎಇಯಲ್ಲಿ 1000 ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ. 25 ಐಪಿಎಲ್​ ಪಂದ್ಯಗಳಿಂದ ಕೆಎಲ್​ಆರ್​ 1083 ರನ್​ಗಳನ್ನು ಕಲೆಹಾಕಿದ್ದಾರೆ.

2548 ರನ್​ – ಪಂಜಾಬ್ ಫ್ರಾಂಚೈಸಿ ಪರ ಅತೀ ಹೆಚ್ಚು ರನ್​ಗಳಿಸಿದ ಬ್ಯಾಟರ್ ಎಂಬ ದಾಖಲೆ ಕೂಡ ಕೆಎಲ್ ರಾಹುಲ್ ಪಾಲಾಗಿದೆ. ಈ ಹಿಂದೆ ಆಸ್ಟ್ರೇಲಿಯಾದ ಶಾನ್ ಮಾರ್ಷ್ ಪಂಜಾಬ್ ಪರ 2477 ರನ್ ಬಾರಿಸಿ ಅಗ್ರಸ್ಥಾನದಲ್ಲಿದ್ದರು. ಸಿಎಸ್​ಕೆ ವಿರುದ್ದ 98 ರನ್ ಬಾರಿಸುವುದರೊಂದಿಗೆ ರಾಹುಲ್​ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಅಲ್ಲದೆ 2548 ರನ್ ಗಳೊಂದಿಗೆ ಪಂಜಾಬ್ ಫ್ರಾಂಚೈಸ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

600 ರನ್​– ಐಪಿಎಲ್ 2021 ರಲ್ಲಿ 600 ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಕೂಡ ರಾಹುಲ್ ಪಾತ್ರರಾಗಿದ್ದಾರೆ.

3 ಬಾರಿ 600 ರನ್​ – ಡೇವಿಡ್ ವಾರ್ನರ್ ಮತ್ತು ಕ್ರಿಸ್ ಗೇಲ್ ನಂತರ ಐಪಿಎಲ್ ಸೀಸನ್​ನಲ್ಲಿ 3 ಬಾರಿ 600 ರನ್ ಪೂರೈಸಿದ ಮೂರನೇ ಆಟಗಾರ ಎಂಬ ದಾಖಲೆ ಕೂಡ ಕೆಎಲ್ ರಾಹುಲ್ ಪಾಲಾಗಿದೆ.

2ನೇ ಆಟಗಾರ – ಐಪಿಎಲ್​ ಚೇಸಿಂಗ್​ನಲ್ಲಿ ಅತೀ ಹೆಚ್ಚು ರನ್​ ಬಾರಿಸಿದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೂ ರಾಹುಲ್ ಪಾತ್ರರಾಗಿದ್ದಾರೆ. ಸಿಎಸ್​ಕೆ ವಿರುದ್ದ ರಾಹುಲ್ 98 ರನ್ ಬಾರಿಸಿ ಈ ಸಾಧನೆ ಮಾಡಿದ್ದಾರೆ. ಇನ್ನು ಅಗ್ರಸ್ಥಾನದಲ್ಲಿ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಇದ್ದು, ಕೊಹ್ಲಿ 2016 ರಲ್ಲಿ ಚೇಸಿಂಗ್​ನಲ್ಲಿ 106 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.

30 ಸಿಕ್ಸ್– ಒಂದು ಸೀಸನ್​ನಲ್ಲಿ ಅತೀ ಹೆಚ್ಚು ಸಿಕ್ಸ್​ ಸಿಡಿಸಿದ ನಾಯಕರ ಪಟ್ಟಿಯಲ್ಲಿ ರಾಹುಲ್ ಮೂರನೇ ಸ್ಥಾನ ಅಲಂಕರಿಸಿದ್ದಾರೆ. ಈ ಬಾರಿ ರಾಹುಲ್ ಬ್ಯಾಟ್​ನಿಂದ 30 ಸಿಕ್ಸ್​ಗಳು ಮೂಡಿಬಂದಿದೆ. ಈ ಮೂಲಕ ಸಿಎಸ್​ಕೆ ನಾಯಕ ಮಹೇಂದ್ರ ಸಿಂಗ್ ಧೋನಿಯೊಂದಿಗೆ 3ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ 31 ಸಿಕ್ಸ್ ಸಿಡಿಸಿದ ಡೇವಿಡ್ ವಾರ್ನರ್ 2ನೇ ಸ್ಥಾನದಲ್ಲಿದ್ದರೆ, ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ 38 ಸಿಕ್ಸ್​ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

6 ಅರ್ಧಶತಕ – ಐಪಿಎಲ್​ ಸೀಸನ್ 2021ರಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿದ ಬ್ಯಾಟರುಗಳ ಪಟ್ಟಿಯಲ್ಲಿ ರಾಹುಲ್ ಅಗ್ರಸ್ಥಾನದಲ್ಲಿದ್ದಾರೆ. 13 ಪಂದ್ಯಗಳನ್ನಾಡಿರುವ ರಾಹುಲ್ 6 ಅರ್ಧಶತಕದೊಂದಿಗೆ ಒಟ್ಟು 626 ರನ್ ಕಲೆಹಾಕಿದ್ದಾರೆ.

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಹರ್ಷಲ್ ಪಟೇಲ್

ಇದನ್ನೂ ಓದಿ: IPL 2021: ಅಚ್ಚರಿಯಾದರೂ ಇದು ಸತ್ಯ: 1 ವಿಕೆಟ್​ಗೆ 1 ಕೋಟಿ ಪಡೆದ ಕ್ರಿಸ್ ಮೋರಿಸ್..!

(IPL 2021: KL Rahul’s record-breaking Innings)

Published On - 4:45 pm, Fri, 8 October 21

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು