IPL 2021: ಅಚ್ಚರಿಯಾದರೂ ಇದು ಸತ್ಯ: 1 ವಿಕೆಟ್​ಗೆ 1 ಕೋಟಿ ಪಡೆದ ಕ್ರಿಸ್ ಮೋರಿಸ್..!

TV9 Digital Desk

| Edited By: Zahir Yusuf

Updated on: Oct 08, 2021 | 4:04 PM

Chris Morris: 9 ಸೋಲುಗಳೊಂದಿಗೆ ಪ್ರಸ್ತುತ ಅಂಕಪಟ್ಟಿಯಲ್ಲಿ ಆರ್​ಆರ್ ತಂಡವು 7ನೇ ಸ್ಥಾನದಲ್ಲಿದೆ. ಈ ಹೀನಾಯ ಪ್ರದರ್ಶನದ ಬೆನ್ನಲ್ಲೇ ತಂಡದಲ್ಲಿದ್ದ ಸ್ಟಾರ್ ಆಲ್​ರೌಂಡರ್ ಕ್ರಿಸ್ ಮೊರೀಸ್ ಪ್ರದರ್ಶನದ ಬಗ್ಗೆ ಚರ್ಚೆಗಳು ಶುರುವಾಗಿದೆ.

IPL 2021: ಅಚ್ಚರಿಯಾದರೂ ಇದು ಸತ್ಯ: 1 ವಿಕೆಟ್​ಗೆ 1 ಕೋಟಿ ಪಡೆದ ಕ್ರಿಸ್ ಮೋರಿಸ್..!
Chris Morris

Follow us on

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14ನ ಲೀಗ್ (IPL 2021) ಹಂತಕ್ಕೆ ಇಂದು (ಅಕ್ಟೋಬರ್ 8) ತೆರೆಬೀಳಲಿದೆ. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್​, ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ತಂಡಗಳು ಪ್ಲೇಆಫ್ ಪ್ರವೇಶಿಸಿದೆ. ಅತ್ತ ಕೊಲ್ಕತ್ತಾ ನೈಟ್​ ರೈಡರ್ಸ್ (KKR)​ ವಿರುದ್ದದ ಪಂದ್ಯದಲ್ಲಿ ಹೀನಾಯ ಸೋಲನುಭವಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ (RR)​ ಕೂಡ ಪ್ಲೇಆಫ್​ ರೇಸ್​ನಿಂದ ಹೊರಬಿದ್ದಿದೆ. ಸ್ಟಾರ್ ಆಟಗಾರರ ದಂಡೇ ಹೊಂದಿದ್ದರೂ ರಾಜಸ್ಥಾನ್ ತಂಡವು ಈ ಸಲ ಭರ್ಜರಿ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆಡಿರುವ 14 ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ಗೆದ್ದಿರೋದು ಕೇವಲ 5 ಪಂದ್ಯಗಳಲ್ಲಿ ಮಾತ್ರ. 9 ಸೋಲುಗಳೊಂದಿಗೆ ಪ್ರಸ್ತುತ ಅಂಕಪಟ್ಟಿಯಲ್ಲಿ ಆರ್​ಆರ್ ತಂಡವು 7ನೇ ಸ್ಥಾನದಲ್ಲಿದೆ. ಈ ಹೀನಾಯ ಪ್ರದರ್ಶನದ ಬೆನ್ನಲ್ಲೇ ತಂಡದಲ್ಲಿದ್ದ ಸ್ಟಾರ್ ಆಲ್​ರೌಂಡರ್ ಕ್ರಿಸ್ ಮೊರೀಸ್ (Chris Morris) ಪ್ರದರ್ಶನದ ಬಗ್ಗೆ ಚರ್ಚೆಗಳು ಶುರುವಾಗಿದೆ.

ಏಕೆಂದರೆ ಕ್ರಿಸ್ ಮೊರೀಸ್ (Chris Morris)​ ಅವರನ್ನು ರಾಜಸ್ಥಾನ್ ರಾಯಲ್ಸ್​ ಫ್ರಾಂಚೈಸಿ ಈ ಬಾರಿ 16.25 ಕೋಟಿ ರೂ. ನೀಡಿ ಖರೀದಿಸಿತು. ಈ ಮೂಲಕ ಐಪಿಎಲ್​ ಹರಾಜಿನಲ್ಲಿ ಬಿಕರಿಯಾದ ಅತ್ಯಂತ ದುಬಾರಿ ಆಟಗಾರ ಎಂಬ ಟ್ಯಾಗ್​ ಲೈನ್ ಮೊರೀಸ್ ಹೊಂದಿದ್ದರು. ಇದಾಗ್ಯೂ ಮೋರಿಸ್ ಆಡಿರುವುದು 11 ಪಂದ್ಯಗಳನ್ನು ಮಾತ್ರ. ಉಳಿದ 3 ಪಂದ್ಯಗಳಲ್ಲಿ ಗಾಯದ ಕಾರಣ ಕಣಕ್ಕಿಳಿದಿರಲಿಲ್ಲ. ಇನ್ನು ಈ 11 ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದೆ ಹೆಚ್ಚು. ಏಕೆಂದರೆ ಮೊರೀಸ್ 11 ಪಂದ್ಯಗಳಿಂದ ಪಡೆದಿರುವುದು 15 ವಿಕೆಟ್​ಗಳು ಮಾತ್ರ. ಅದು ಕೂಡ ಪ್ರತಿ ಓವರ್​ಗೆ 9.17 ರನ್ ಬಿಟ್ಟುಕೊಡುವ ಮೂಲಕ ಎಂಬುದು ವಿಶೇಷ. ಇನ್ನು ಆಲ್​ರೌಂಡರ್​ ಆಗಿ ತಂಡದಲ್ಲಿದ್ದ ಮೊರೀಸ್ 11 ಪಂದ್ಯಗಳಿಂದ​ ಬ್ಯಾಟ್ ಮೂಲಕ ಕಲೆಹಾಕಿದ್ದು ಕೇವಲ 67 ರನ್​. ಅಂದರೆ ರಾಜಸ್ಥಾನ್ ರಾಯಲ್ಸ್​ ತಂಡದ ಪ್ರದರ್ಶನದಲ್ಲಿ ಕ್ರಿಸ್ ಮೋರಿಸ್​ ಬ್ಯಾಟ್ ಮೂಲಕ ಯಾವುದೇ ಕೊಡುಗೆ ನೀಡಿಲ್ಲ ಎಂದೇ ಹೇಳಬಹುದು. ಹೀಗಾಗಿಯೇ ಐಪಿಎಲ್​ ಸೀಸನ್ 14ರ ಅಟ್ಟರ್ ಫ್ಲಾಫ್ ಆಟಗಾರನಾಗಿ ಮೊರೀಸ್ ಗುರುತಿಸಿಕೊಂಡಿದ್ದಾರೆ.

ಇನ್ನು 15 ವಿಕೆಟ್ ಪಡೆದಿರುವ ಮೊರೀಸ್​ ಗಳಿಸಿದ್ದು ರಾಜಸ್ಥಾನ್ ರಾಯಲ್ಸ್​ ತಂಡದಿಂದ ಗಳಿಸಿದ್ದು 16.25 ಕೋಟಿ ರೂ., ಅಂದರೆ ಮೊರೀಸ್ ಪಡೆದಿರುವ ಒಂದು ವಿಕೆಟ್​ ಬೆಲೆ 1.08 ಕೋಟಿ ರೂ. ಎಂದರೆ ನಂಬಲೇಬೇಕು. ಇನ್ನು ಒಟ್ಟಾರೆ ಪ್ರದರ್ಶನದ ಆಧಾರದ ಮೇಲೆ ನೋಡಿದರೂ ಪ್ರತಿ ಪಂದ್ಯಕ್ಕೂ ಕ್ರಿಸ್ ಮೊರೀಸ್ 1 ಕೋಟಿಗೂ ಅಧಿಕ ಮೊತ್ತ ಪಡೆದಿದ್ದಾರೆ. ಆದಾಗ್ಯೂ, ಕ್ರಿಸ್​ ಮೋರಿಸ್ ನಿರೀಕ್ಷಿತ ಪ್ರದರ್ಶನ ನೀಡದಿರುವುದು ರಾಜಸ್ಥಾನ್ ರಾಯಲ್ಸ್​ ಫ್ರಾಂಚೈಸಿಯ ದುರಾದೃಷ್ಟ ಎನ್ನದೇ ವಿಧಿಯಿಲ್ಲ.

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಹರ್ಷಲ್ ಪಟೇಲ್

ಇದನ್ನೂ ಓದಿ: Mumbai Indians: ಟಾಸ್ ಮೂಲಕ ನಿರ್ಧಾರವಾಗಲಿದೆ ಮುಂಬೈ ಇಂಡಿಯನ್ಸ್​ ಪ್ಲೇಆಫ್​ ಭವಿಷ್ಯ..!

(IPL 2021: Costliest IPL player Chris Morris flops)

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada