World Championship: ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದು ಇತಿಹಾಸ ಸೃಷ್ಟಿಸಿದ ಅನ್ಶು ಮಲಿಕ್
Anshu Malik: ಅನ್ಶು ಮಲಿಕ್ ಅವರು ಬುಧವಾರ ನಡೆದ ಫೈನಲ್‌ಗೆ ಪ್ರವೇಶಿಸಿದ ತಕ್ಷಣ ಇತಿಹಾಸ ಸೃಷ್ಟಿಸಿದರು. ಈ ತೂಕ ವಿಭಾಗದಲ್ಲಿ ಫೈನಲ್ ತಲುಪಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನಿಸಿಕೊಂಡರು.
ನಾರ್ವೆಯಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅನ್ಶು ಮಲಿಕ್ ಇತಿಹಾಸ ಸೃಷ್ಟಿಸಿದ್ದಾರೆ. ಅವರು ಈ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅನ್ಶು ಫೈನಲ್‌ನಲ್ಲಿ ಟೋಕಿಯೊ ಒಲಿಂಪಿಕ್ -2020 ಕಂಚಿನ ಪದಕ ವಿಜೇತೆ ಅಮೆರಿಕದ ಹೆಲೆನ್ ಲೂಯಿಸ್ ಮಾರೌಲಿಸ್ ಅವರನ್ನು 4-1ರಿಂದ ಸೋಲಿಸಿದರು. ಇದರೊಂದಿಗೆ ಅವರು 57 ಕೆಜಿ ತೂಕ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಇದರೊಂದಿಗೆ, ಈ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನಿಸಿಕೊಂಡಿದ್ದಾರೆ.
ಅನ್ಶುಗಿಂತ ಮೊದಲು, ಭಾರತದ ನಾಲ್ಕು ಮಹಿಳಾ ಕುಸ್ತಿಪಟುಗಳು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕಗಳನ್ನು ಗೆದ್ದಿದ್ದಾರೆ ಆದರೆ ಎಲ್ಲರೂ ಕಂಚು ಪಡೆದಿದ್ದಾರೆ. 2012 ರಲ್ಲಿ ಗೀತಾ ಫೋಗಟ್, 2012 ರಲ್ಲಿ ಬಬಿತಾ ಫೋಗಟ್, 2018 ರಲ್ಲಿ ಪೂಜಾ ಧಂಡ ಮತ್ತು 2019 ರಲ್ಲಿ ವಿನೇಶ್ ಫೋಗಟ್ ಕಂಚು ಗೆದ್ದರು. ವಿಶ್ವ ಚಾಂಪಿಯನ್‌ಶಿಪ್ ಫೈನಲ್ ತಲುಪಿದ ಮೂರನೇ ಭಾರತೀಯ ಅನ್ಶು. ಅವರಿಗಿಂತ ಮುಂಚೆ, ಸುಶೀಲ್ ಕುಮಾರ್ (2010) ಮತ್ತು ಭಜರಂಗ್ ಪುನಿಯಾ (2018) ಈ ಸಾಧನೆ ಮಾಡಿದ್ದಾರೆ. ಈ ಪೈಕಿ ಸುಶೀಲ್ ಮಾತ್ರ ಚಿನ್ನ ಗೆದಿದ್ದಾರೆ.
ಫೈನಲ್ವರೆಗಿನ ಪಯಣ ಹೀಗಿತ್ತು ಅನ್ಶು ಮಲಿಕ್ ಅವರು ಬುಧವಾರ ನಡೆದ ಫೈನಲ್‌ಗೆ ಪ್ರವೇಶಿಸಿದ ತಕ್ಷಣ ಇತಿಹಾಸ ಸೃಷ್ಟಿಸಿದರು. ಈ ತೂಕ ವಿಭಾಗದಲ್ಲಿ ಫೈನಲ್ ತಲುಪಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನಿಸಿಕೊಂಡರು. ಸೆಮಿಫೈನಲ್‌ನಲ್ಲಿ ಅವರು ಕಿರಿಯ ಯುರೋಪಿಯನ್ ಚಾಂಪಿಯನ್ ಉಕ್ರೇನ್‌ನ ಸೊಲೊಮಿಯಾ ವಿಂಕ್ ಅವರನ್ನು ಸೋಲಿಸಿದರು. ಅವರು ಏಕಪಕ್ಷೀಯ ಪಂದ್ಯದಲ್ಲಿ ತಮ್ಮ ಎದುರಾಳಿಯನ್ನು 11-0ಯಿಂದ ಸೋಲಿಸಿದರು. ಹತ್ತೊಂಬತ್ತು ವರ್ಷದ ಅನ್ಶು ಮೊದಲಿನಿಂದಲೂ ಸೆಮಿಫೈನಲ್‌ನಲ್ಲಿ ಪ್ರಾಬಲ್ಯ ಸಾಧಿಸಿದರು ಮತ್ತು ತಾಂತ್ರಿಕ ಶ್ರೇಷ್ಠತೆಯ ಆಧಾರದ ಮೇಲೆ ಗೆದ್ದು 57 ಕೆಜಿ ವಿಭಾಗದ ಫೈನಲ್ ತಲುಪಿದರು. ಫೈನಲ್ ತಲುಪುವ ಮುನ್ನ ಭಾರತದ ಯುವ ಅನ್ಶು ಮಲಿಕ್ ಅವರು ಕಜಕಿಸ್ತಾನದ ನಿಲುಫರ್ ರೆಮೋವಾ ಅವರನ್ನು ಏಕಪಕ್ಷೀಯ ಪಂದ್ಯದಲ್ಲಿ ಸೋಲಿಸಿದರು ಮತ್ತು ನಂತರ ಕ್ವಾರ್ಟರ್ ಫೈನಲ್‌ನಲ್ಲಿ ಮಂಗೋಲಿಯಾದ ದೇವಚಿಮೆಗ್ ಎರ್ಖೆಂಬಾಯರ್ ಅವರನ್ನು 5-1 ಅಂತರದಲ್ಲಿ ಸೋಲಿಸಿದರು.
ANSHU creates history by becoming 1st ?? woman wrestler to win a SILVER ? at prestigious World C'ships @OLyAnshu goes down against Tokyo 2020 Bronze medalist Helen Marlouis of USA ?? at #WrestleOslo in 57 kg event
Anshu displayed a commendable spirit, many congratulations! pic.twitter.com/VA2AsVLoii
— SAI Media (@Media_SAI) October 7, 2021
ದಿವ್ಯಾ, ಗ್ರೀಕೋ-ರೋಮನ್ ಕುಸ್ತಿಪಟುಗಳು ನಿರಾಶೆಗೊಂಡರು ದಿವ್ಯಾ ಕಕ್ರನ್ 72 ಕೆಜಿ ವಿಭಾಗದಲ್ಲಿ ಸೋಲುಂಡರು. ಮಂಗೋಲಿಯಾದ ದವನಸನ್ ಅಂಕ್ ಅಮರ್ ಅವರನ್ನು ಸೋಲಿಸಿದರು. ಗ್ರೀಕೋ-ರೋಮನ್ ಕುಸ್ತಿಪಟುಗಳು ಮತ್ತೊಮ್ಮೆ ನಿರಾಶಾದಾಯಕ ಪ್ರದರ್ಶನ ನೀಡಿದರು. ಸಂದೀಪ್ (55 ಕೆಜಿ), ವಿಕಾಸ್ (72 ಕೆಜಿ), ಸಾಜನ್ (77 ಕೆಜಿ) ಮತ್ತು ಹರಪ್ರೀತ್ ಸಿಂಗ್ (82 ಕೆಜಿ) ಸ್ಪರ್ಧೆಯಿಂದ ಹೊರಬಂದರು. ಸಾಜನ್ ಮಾತ್ರ ಒಂದು ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ ಉಳಿದ ಮೂವರು ಕುಸ್ತಿಪಟುಗಳು ತಮ್ಮ ಮೊದಲ ಪಂದ್ಯದಲ್ಲಿ ಸೋತರು.