AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿ20 ವಿಶ್ವಕಪ್ ಪಾಕ್ ತಂಡದಲ್ಲಿ ಪ್ರಮುಖ ಬದಲಾವಣೆ: 39 ವರ್ಷದ ಆಲ್​ರೌಂಡರ್ ಆಯ್ಕೆ

ಪಾಕಿಸ್ತಾನ್ ಟಿ20 ವಿಶ್ವಕಪ್​ ಅಭಿಯಾನವನ್ನು ಅಕ್ಟೋಬರ್ 24 ರಂದು ಆರಂಭಿಸಲಿದ್ದು, ಈ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ದ ಆಡಲಿದೆ.

ಟಿ20 ವಿಶ್ವಕಪ್ ಪಾಕ್ ತಂಡದಲ್ಲಿ ಪ್ರಮುಖ ಬದಲಾವಣೆ: 39 ವರ್ಷದ ಆಲ್​ರೌಂಡರ್ ಆಯ್ಕೆ
ಪಾಕಿಸ್ತಾನ್ ತಂಡ: ಬಾಜರ್ ಆಜಂ (ನಾಯಕ), ಮೊಹಮ್ಮದ್ ರಿಜ್ವಾನ್, ಫಖರ್ ಝಮಾನ್, ಮೊಹಮ್ಮದ್ ಹಫೀಪ್, ಶೊಯೇಬ್ ಮಲಿಕ್, ಆಸಿಫ್ ಅಲಿ, ಇಮಾದ್ ವಾಸಿಂ, ಶಾದಾಬ್ ಖಾನ್, ಹಸನ್ ಅಲಿ, ಶಾಹಿನ್ ಅಫ್ರಿದಿ, ಹಾರಿಸ್ ರೌಫ್.
Follow us
TV9 Web
| Updated By: ಝಾಹಿರ್ ಯೂಸುಫ್

Updated on: Oct 11, 2021 | 6:05 PM

ಐಸಿಸಿ ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಮತ್ತೊಂದು ಪ್ರಮುಖ ಬದಲಾವಣೆಯಾಗಿದೆ. ಪಾಕಿಸ್ತಾನ ತಂಡದಲ್ಲಿದ್ದ ಸ್ಪೋಟಕ ಬ್ಯಾಟ್ಸ್​ಮನ್ ಸೊಹೈಬ್ ಮಕ್ಸೂದ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ಅವರ ಬದಲಿಗೆ 39 ವರ್ಷದ ಆಲ್​ರೌಂಡರ್ ಶೋಯೆಬ್ ಮಲಿಕ್ ಅವರನ್ನು ಆಯ್ಕೆ ಮಾಡಲಾಗಿದೆ. 

“ಸೊಹೈಬ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. ಈ ಟೂರ್ನಮೆಂಟ್‌ಗಾಗಿ ತುಂಬಾ ಅಭ್ಯಾಸ ನಡೆಸಿದ್ದರು. ಇದಾಗ್ಯೂ ಬೆನ್ನು ನೋವಿನ ಸಮಸ್ಯೆಯ ಕಾರಣ ಅವರ ಹೆಸರನ್ನು ಹಿಂತೆಗೆದುಕೊಳ್ಳಬೇಕಾಯಿತು. ಹೀಗಾಗಿ ಅವರ ಬದಲಿಗೆ ಶೋಯೆಬ್ ಮಲಿಕ್ ಅವರನ್ನು ತಂಡಕ್ಕೆ ಸೇರಿಸಲು ನಾವು ನಿರ್ಧರಿಸಿದ್ದೇವೆ ಎಂದು ಪಾಕಿಸ್ತಾನದ ಮುಖ್ಯ ಆಯ್ಕೆಗಾರ ಮುಹಮ್ಮದ್ ವಾಸೀಮ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ಕಳಪೆ ತಂಡ ಎಂಬ ಟೀಕೆಗೆ ಒಳಗಾಗಿದ್ದ ಪಾಕಿಸ್ತಾನ್ ತಂಡಕ್ಕೆ ಶೊಯೇಬ್ ಮಲಿಕ್ ಎಂಟ್ರಿಯು ಇದೀಗ ಹೊಸ ಭರವಸೆಯನ್ನು ಹುಟ್ಟುಹಾಕಿದೆ. ಏಕೆಂದರೆ ಪ್ರಸ್ತುತ ತಂಡದಲ್ಲಿರುವ ಆಟಗಾರರಲ್ಲಿ ಮಲಿಕ್ ಅತ್ಯಂತ ಅನುಭವಿ ಆಟಗಾರ. ಕಳೆದ 22 ವರ್ಷಗಳಿಂದ ಶೊಯೇಬ್ ಮಲಿಕ್ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿದ್ದಾರೆ. ಅಲ್ಲದೆ ಟಿ20 ಕ್ರಿಕೆಟ್​ನಲ್ಲಿ 11 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿಗಳಲ್ಲಿ 28 ​​ಪಂದ್ಯಗಳನ್ನು ಆಡಿರುವ ಮಲಿಕ್, 32.11 ರ ಸರಾಸರಿಯಲ್ಲಿ 546 ರನ್ ಗಳಿಸಿದ್ದಾರೆ. ಶೋಯೆಬ್ 2007 ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ್ ತಂಡವನ್ನು ಮುನ್ನಡೆಸಿದರು. ನಂತರ ಅವರು 2009 ರಲ್ಲಿ ಪ್ರಶಸ್ತಿಯನ್ನು ಗೆದ್ದ ತಂಡದ ಭಾಗವಾಗಿದ್ದರು. ಆ ಬಳಿಕ 2012, 2014 ಮತ್ತು 2016 ರಲ್ಲಿ ಪಾಕ್ ತಂಡದ ಪರ ಟಿ20 ವಿಶ್ವಕಪ್ ಆಡಿದ್ದರು. ಇದೀಗ 6ನೇ ಬಾರಿ ಟಿ20 ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳಲು ಮಲಿಕ್ ಸಜ್ಜಾಗಿದ್ದಾರೆ.

ಪಾಕಿಸ್ತಾನ್ ಟಿ20 ವಿಶ್ವಕಪ್​ ಅಭಿಯಾನವನ್ನು ಅಕ್ಟೋಬರ್ 24 ರಂದು ಆರಂಭಿಸಲಿದ್ದು, ಈ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ದ ಆಡಲಿದೆ. ಈಗಾಗಲೇ ಈ ಪಂದ್ಯದ ಎಲ್ಲಾ ಟಿಕೆಟ್​ಗಳು ಮಾರಾಟವಾಗಿದ್ದು, ಇಡೀ ವಿಶ್ವವೇ ಭಾರತ-ಪಾಕ್ ನಡುವಣ ಕ್ರಿಕೆಟ್ ಕಾದಾಟವನ್ನು ಎದುರು ನೋಡುತ್ತಿದೆ.

ಟಿ20 ವಿಶ್ವಕಪ್​ ಪಾಕ್​ ತಂಡ: ಬಾಬರ್ ಆಜಂ (ಕ್ಯಾಪ್ಟನ್), ಶಾದಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಹಸನ್ ಅಲಿ, ಇಮಾದ್ ವಾಸಿಂ, ಮೊಹಮ್ಮದ್ ಹಫೀಜ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಂ ಜೂನಿಯರ್, ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್), ಶಾಹೀನ್ ಶಾ ಅಫ್ರಿದಿ ಮತ್ತು ಶೋಯೆಬ್ ಮಲಿಕ್

ಮೀಸಲು ಆಟಗಾರರು: ಖುಷ್ದಿಲ್ ಶಾ, ಶಹನವಾಜ್ ದಹಾನಿ ಮತ್ತು ಉಸ್ಮಾನ್ ಖಾದಿರ್

ಇದನ್ನೂ ಓದಿ:  KL Rahul: ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕ 7 ದಾಖಲೆ ಬರೆದ ಕೆಎಲ್ ರಾಹುಲ್

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಹರ್ಷಲ್ ಪಟೇಲ್

ಇದನ್ನೂ ಓದಿ: IPL 2021: ಅಚ್ಚರಿಯಾದರೂ ಇದು ಸತ್ಯ: 1 ವಿಕೆಟ್​ಗೆ 1 ಕೋಟಿ ಪಡೆದ ಕ್ರಿಸ್ ಮೋರಿಸ್..!

(Shoaib Malik Gets T20 World Cup Place In Pakistan Squad)

ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು
ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ
ಕೇಂದ್ರ ಗೃಹ ಇಲಾಖೆಯಿಂದ ಕರ್ನಾಟಕಕ್ಕೂ ಎಚ್ಚರಿಕೆ ಸೂಚನೆ ಬಂದಿದೆ: ಡಿಕೆಶಿ
ಕೇಂದ್ರ ಗೃಹ ಇಲಾಖೆಯಿಂದ ಕರ್ನಾಟಕಕ್ಕೂ ಎಚ್ಚರಿಕೆ ಸೂಚನೆ ಬಂದಿದೆ: ಡಿಕೆಶಿ
ಇವತ್ತು ಸಾಯಂಕಾಲ ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ: ಪರಮೇಶ್ವರ್
ಇವತ್ತು ಸಾಯಂಕಾಲ ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ: ಪರಮೇಶ್ವರ್
ಮನೆ ಹಾಳಾದರೂ ಪಾಕಿಸ್ತಾನಕ್ಕೆ ಸದ್ಬುದ್ಧಿ ಬರಲಿ ಎನ್ನುವ ಮನೆ ಯಜಮಾನಿ
ಮನೆ ಹಾಳಾದರೂ ಪಾಕಿಸ್ತಾನಕ್ಕೆ ಸದ್ಬುದ್ಧಿ ಬರಲಿ ಎನ್ನುವ ಮನೆ ಯಜಮಾನಿ
Live: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯ ನೇರ ಪ್ರಸಾರ
Live: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯ ನೇರ ಪ್ರಸಾರ
ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?