RCB vs KKR, Head to Head: ಕಿಂಗ್ ಕೊಹ್ಲಿಗೆ ಕೋಲ್ಕತ್ತಾ ನೈಟ್ ಚಾಲೆಂಜ್; ಉಭಯ ತಂಡಗಳ ಮುಖಾಮುಖಿ ವರದಿ

RCB vs KKR, Head to Head: ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಮತ್ತು ಕೆಕೆಆರ್ 28 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ, ಕೆಕೆಆರ್‌ 15 ಬಾರಿ ಗೆದ್ದಿದ್ದಾರೆ. ಆರ್‌ಸಿಬಿ ತಂಡ ಕೇವಲ 13 ಬಾರಿ ಗೆದ್ದಿದೆ.

RCB vs KKR, Head to Head: ಕಿಂಗ್ ಕೊಹ್ಲಿಗೆ ಕೋಲ್ಕತ್ತಾ ನೈಟ್ ಚಾಲೆಂಜ್; ಉಭಯ ತಂಡಗಳ ಮುಖಾಮುಖಿ ವರದಿ
ವಿರಾಟ್ ಕೊಹ್ಲಿ, ಇಯೋನ್ ಮಾರ್ಗನ್

ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಆವೃತ್ತಿಯ ಕೊನೆಯ ಮೂರು ಪಂದ್ಯಗಳು ಈಗ ಉಳಿದಿವೆ. ಚೆನ್ನೈ ಸೂಪರ್ ಕಿಂಗ್ಸ್ (CSK) ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ (DC) ಯನ್ನು ಸೋಲಿಸಿ ಫೈನಲ್ ತಲುಪಿದೆ. ಈಗ ದೆಹಲಿ, ಕೆಕೆಆರ್ ಮತ್ತು ಆರ್ಸಿಬಿ ಎರಡನೇ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿವೆ. ಡೆಲ್ಲಿಗೆ ಫೈನಲ್‌ಗೆ ಮುನ್ನಡೆಯಲು ಮತ್ತೊಂದು ಅವಕಾಶವಿದ್ದು, ಇಂದು ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದೆ.

ವಿರಾಟ್ ಕೊಹ್ಲಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಇಯೋನ್ ಮಾರ್ಗನ್‌ರ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಡುವಿನ ಇಂದಿನ ಪಂದ್ಯವು ಉಭಯ ತಂಡಗಳಿಗೆ ಬುದ್ಧಿವಂತಿಕೆಯ ಯುದ್ಧವಾಗಿದೆ. ಗೆದ್ದ ತಂಡವು ಫೈನಲ್ ತಲುಪಲು ದೆಹಲಿ ವಿರುದ್ಧ ಪಂದ್ಯ ಆಡಿದರೆ, ಸೋತ ತಂಡ ನೇರವಾಗಿ ಸ್ಪರ್ಧೆಯಿಂದ ಹೊರಬರುತ್ತದೆ. ಆದ್ದರಿಂದ ಇಂದಿನ ಹೋರಾಟವು ಬಹಳ ಮುಖ್ಯವಾಗಿದೆ ಮತ್ತು ಇದು ಖಂಡಿತವಾಗಿಯೂ ಕಠಿಣವಾಗಿರುತ್ತದೆ!

ಉಭಯ ತಂಡಗಳ ಮುಖಾಮುಖಿ
ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಮತ್ತು ಕೆಕೆಆರ್ 28 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ, ಕೆಕೆಆರ್‌ 15 ಬಾರಿ ಗೆದ್ದಿದ್ದಾರೆ. ಆರ್‌ಸಿಬಿ ತಂಡ ಕೇವಲ 13 ಬಾರಿ ಗೆದ್ದಿದೆ. ಇಂದಿನ ಪಂದ್ಯವು ಪ್ರಸಿದ್ಧ ಐತಿಹಾಸಿಕ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇಂದಿನ ಪಂದ್ಯದಲ್ಲಿ ಎರಡೂ ತಂಡಗಳಿಗೆ ಸಂಭಾವ್ಯ 11
ರಾಯಲ್ ಚಾಲೆಂಜರ್ಸ್ ಬೆಂಗಳೂರು- ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಕೆಎಸ್ ಭರತ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಶಹಬಾಜ್ ಅಹ್ಮದ್, ಜಾರ್ಜಿ ಗಾರ್ಟನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್.

ಕೆಕೆಆರ್- ಇಯಾನ್ ಮಾರ್ಗನ್ (ನಾಯಕ), ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ದಿನೇಶ್ ಕಾರ್ತಿಕ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಆಂಡ್ರೆ ರಸೆಲ್ / ಶಕೀಬ್ ಅಲ್ ಹಸನ್, ಸುನೀಲ್ ನಾರಾಯಣ್, ಲಕ್ಕಿ ಫರ್ಗ್ಯೂಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ.

Read Full Article

Click on your DTH Provider to Add TV9 Kannada