ಹೃದಯಾಘಾತದಿಂದ ಜ್ಯೂ. ಎನ್ಟಿಆರ್ ಆಪ್ತ ನಿರ್ಮಾಪಕ ಮಹೇಶ್ ಎಸ್. ಕೊನೆರು ನಿಧನ
ಸ್ಟಾರ್ ನಟ ಜ್ಯೂ. ಎನ್ಟಿಆರ್ ಅವರಿಗೆ ಪರ್ಸನಲ್ ಪಿಆರ್ಓ ಆಗಿ ಮಹೇಶ್ ಎಸ್. ಕೊನೆರು ಅವರು ಕಾರ್ಯ ನಿರ್ವಹಿಸುತ್ತಿದ್ದರು. ಮಹೇಶ್ ಸಾವಿನ ಸುದ್ದಿ ಕೇಳಿ ಜ್ಯೂ. ಎನ್ಟಿಆರ್ ತೀವ್ರ ನೋವಿನಲ್ಲಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ಖ್ಯಾತಿ ಪಡೆದಿದ್ದ ನಿರ್ಮಾಪಕ ಮಹೇಶ್ ಎಸ್. ಕೊನೆರು ನಿಧನರಾಗಿದ್ದಾರೆ. ಮಂಗಳವಾರ (ಅ.12) ಅವರು ಹೃದಯಾಘಾತದಿಂದ ಮೃತರಾದರು ಎಂಬ ಕಹಿ ಸುದ್ದಿ ಕೇಳಿಬಂದಿದೆ. ಹಾರ್ಟ್ ಅಟ್ಯಾಕ್ ಆದಾಗ ಅವರು ವಿಶಾಖಪಟ್ಟಣದ ತಮ್ಮ ಮನೆಯಲ್ಲಿ ಇದ್ದರು ಎನ್ನಲಾಗಿದೆ. ಮಹೇಶ್ ಕೊನೆರು ನಿಧನಕ್ಕೆ ಜ್ಯೂ. ಎನ್ಟಿಆರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ. ಇಡೀ ಚಿತ್ರರಂಗ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದೆ.
ಮೊದಲು ಪತ್ರಕರ್ತರಾಗಿದ್ದ ಮಹೇಶ್ ಕೊನೆರು ಅವರು ನಂತರ ಸೆಲೆಬ್ರಿಟಿಗಳಿಗೆ ಪಿಆರ್ಓ ಆಗಿ ಕೆಲಸ ಮಾಡಲು ಆರಂಭಿಸಿದರು. ಬಳಿಕ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿದ್ದರು. ಸ್ಟಾರ್ ನಟ ಜ್ಯೂ. ಎನ್ಟಿಆರ್ ಅವರಿಗೆ ಪರ್ಸನಲ್ ಪಿಆರ್ ಆಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಮಹೇಶ್ ಸಾವಿನ ಸುದ್ದಿ ಕೇಳಿ ಜ್ಯೂ. ಎನ್ಟಿಆರ್ ತೀವ್ರ ನೋವಿನಲ್ಲಿದ್ದಾರೆ.
‘ನನ್ನ ಆತ್ಮೀಯ ಗೆಳೆಯ ಮಹೇಶ್ ಕೊನೆರು ಇನ್ನಿಲ್ಲ. ಇದನ್ನು ನಂಬಲ್ಲಾಗುತ್ತಿಲ್ಲ. ತೀವ್ರ ನೋವಿನೊಂದಿಗೆ ನಿಮಗೆ ಈ ವಿಷಯ ತಿಳಿಸುತ್ತಿದ್ದೇನೆ. ಈ ಸುದ್ದಿ ತಿಳಿದು ನನಗೆ ಶಾಕ್ ಆಗಿದೆ ಮತ್ತು ಮಾತುಗಳೇ ಬರುತ್ತಿಲ್ಲ. ಅವರ ಕುಟುಂಬದವರು ಮತ್ತು ಆಪ್ತರಿಗೆ ನನ್ನ ಸಂತಾಪಗಳು’ ಎಂದು ಜ್ಯೂ. ಎನ್ಟಿಆರ್ ಟ್ವೀಟ್ ಮಾಡಿದ್ದಾರೆ.
With the heaviest of heart and in utter disbelief, I am letting you all know that my dearest friend @SMKoneru is no more. I am shell shocked and utterly speechless.
My sincerest condolences to his family and his near and dear. pic.twitter.com/VhurazUPQk
— Jr NTR (@tarak9999) October 12, 2021
ನಂದಮೂರಿ ಕಲ್ಯಾಣ್ರಾಮ್ ನಟನೆಯ ‘118’ ಸಿನಿಮಾ ಮೂಲಕ ನಿರ್ಮಾಪಕರಾಗಿ ಮಹೇಶ್ ಕೊನೆರು ಬಡ್ತಿ ಪಡೆದುಕೊಂಡಿದ್ದರು. ಅವರು ನಿರ್ಮಿಸಿದ್ದ ‘ತಿಮ್ಮರುಸು’ ಚಿತ್ರ ಜು.30ರಂದು ತೆರೆಕಂಡಿತ್ತು. ‘ಪೊಲೀಸ್ ವಾರಿ ಹೆಚ್ಚರಿಕಾ’ ಮತ್ತು ‘ಸಭಕು ಸಮಸ್ಕಾರಂ’ ಚಿತ್ರಗಳು ನಿರ್ಮಾಣ ಹಂತದಲ್ಲಿ ಇರುವಾಗಲೇ ಅವರು ಕೊನೆಯುಸಿರು ಎಳೆದಿದ್ದಾರೆ.
ಇದನ್ನೂ ಓದಿ:
ಪ್ರೇಯಸಿ ಮಡಿಲಲ್ಲೇ ಪ್ರಾಣ ಬಿಟ್ರಾ ಸಿದ್ದಾರ್ಥ್? ಹೃದಯಾಘಾತ ಆಗೋದಕ್ಕೂ ಮುನ್ನ ನಡೆದಿದ್ದೇನು? ಇಲ್ಲಿದೆ ವಿವರ
ಅನುಮಾನಾಸ್ಪದವಾಗಿ ಮೃತಪಟ್ಟ ‘ಕಾಂಚನ 3’ ನಟಿ; ಇದರ ಹಿಂದಿದೆ ಬಾಯ್ಫ್ರೆಂಡ್ ಕೈವಾಡ?
Published On - 12:55 pm, Tue, 12 October 21




