‘ಚಿತ್ರರಂಗದಲ್ಲಿ ನೆಪೋಟಿಸಂಗಿಂತಲೂ ಈ ಸಮಸ್ಯೆ ಬಹಳ ಅಪಾಯಕಾರಿ’; ಮುಕ್ತವಾಗಿ ಹೇಳಿಕೊಂಡ ನವಾಜುದ್ದೀನ್ ಸಿದ್ದಿಕಿ

Nawazuddin Siddiqui: ಬಾಲಿವುಡ್​ನಲ್ಲಿ ನೆಪೋಟಿಸಂಗಿಂತಲೂ ಮತ್ತೊಂದು ಸಮಸ್ಯೆ ಹೆಚ್ಚು ಅಪಾಯಕಾರಿ ಎಂದು ನಟ ನವಾಜುದ್ದೀನ್ ಸಿದ್ದಿಕಿ ಹೇಳಿದ್ದಾರೆ. ಅವರ ಪ್ರಕಾರ ಯಾವುದು ಚಿತ್ರರಂಗಕ್ಕೆ ಕಾಡುತ್ತಿರುವ ಸಮಸ್ಯೆ? ಇಲ್ಲಿದೆ ಮಾಹಿತಿ.

‘ಚಿತ್ರರಂಗದಲ್ಲಿ ನೆಪೋಟಿಸಂಗಿಂತಲೂ ಈ ಸಮಸ್ಯೆ ಬಹಳ ಅಪಾಯಕಾರಿ’; ಮುಕ್ತವಾಗಿ ಹೇಳಿಕೊಂಡ ನವಾಜುದ್ದೀನ್ ಸಿದ್ದಿಕಿ
ನಟ ನವಾಜುದ್ದೀನ್ ಸಿದ್ದಿಕಿ
Follow us
TV9 Web
| Updated By: shivaprasad.hs

Updated on:Oct 12, 2021 | 3:36 PM

ಬಾಲಿವುಡ್‌ನಲ್ಲಿ ತಮ್ಮ ಪ್ರತಿಭೆಯಿಂದಲೇ ನೆಲೆ ಕಂಡುಕೊಂಡ ವಿಶೇಷ ನಟ ನವಾಜುದ್ದೀನ್ ಸಿದ್ದಿಕಿ. ಇತ್ತೀಚೆಗಷ್ಟೇ ಅವರು ‘ಸೀರಿಯಸ್ ಮೆನ್’ ಚಿತ್ರದಲ್ಲಿನ‌ ನಟನೆಗಾಗಿ ಎಮ್ಮಿ‌ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದರು. ಖಾಸಗಿ ಮಾಧ್ಯಮವೊಂದಕ್ಕೆ ಅವರು ನೀಡಿದ ಸಂದರ್ಶನದಲ್ಲಿ ಬಾಲಿವುಡ್‌ನಲ್ಲಿ ನೆಪೋಟಿಸಮ್ ಗಿಂತಲೂ ರೇಸಿಸಂ ಸಮಸ್ಯೆ ಬಹಳ‌ ದೊಡ್ಡದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

47 ವರ್ಷದ ನವಾಜುದ್ದೀನ್ ಮಾತನಾಡುತ್ತಾ, ತಾವು ನೆಪೋಟಿಸಮ್ ಸಮಸ್ಯೆಗಿಂತಲೂ ಹೆಚ್ಚಾಗಿ ರೇಸಿಸಂ ಸಮಸ್ಯೆಯನ್ನು ಅನುಭವಿಸಿದ್ದೆ. ಅದರ ವಿರುದ್ಧ ದೀರ್ಘಕಾಲ‌ ತಾನು ಹೋರಾಡಬೇಕಾಯಿತು ಎಂದು ಹೇಳಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಕಪ್ಪು ವರ್ಣದ ಯುವತಿಯರನ್ನು ನಾಯಕಿಯರನ್ನಾಗಿಸಬೇಕಾದುದು ಬಹಳ‌ ಮುಖ್ಯ ಎಂದು ಇದೇ ವೇಳೆ ಅವರು ಅಭಿಪ್ರಾಯಪಟ್ಟಿದ್ದಾರೆ.

ಕುಳ್ಳಗಿದ್ದುದರಿಂದ ಹಾಗೂ ವಿಭಿನ್ನವಾಗಿ ಇದ್ದುದರಿಂದ ಚಿತ್ರರಂಗದಲ್ಲಿ ಬಹಳ ಕಾಲದವರೆಗೆ ಅವಕಾಶ ವಂಚಿತನಾಗಿರಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.‌ ಆದರೆ ತಾನೀಗ ಈ ಕುರಿತು ಆರೋಪ ಮಾಡುವುದಿಲ್ಲ. ಸಮಸ್ಯೆಯೆಂದರೆ ಇಂತಹ ಕೆಟ್ಟ ಮನಸ್ಥಿತಿಗಳಿಂದ ಹಲವು ಜನ ಅವಕಾಶ ವಂಚಿತರಾಗಿಯೇ ಉಳಿದಿದ್ದಾರೆ ಎಂದಿದ್ದಾರೆ ನವಾಜುದ್ದೀನ್. ಚಿತ್ರರಂಗದಲ್ಲಿ ಉತ್ತಮ ಚಿತ್ರಗಳು ನಿರ್ಮಾಣವಾಗಬೇಕಾದರೆ ಇಂತಹ ಸಮಸ್ಯೆಗಳು ಕಡಿಮೆಯಾಗಬೇಕು ಎಂದು ಅವರು ನುಡಿದಿದ್ದಾರೆ.

ಚಿತ್ರಮಂದಿರಗಳ ಏಕಸ್ವಾಮ್ಯದ ಕುರಿತು‌ ಕಿಡಿಕಾರಿದ ನವಾಜುದ್ದೀನ್: ಸಂದರ್ಶನವೊಂದರಲ್ಲಿ ನಾತನಾಡಿರುವ ನವಾಜುದ್ದೀನ್ ಸಿದ್ದಿಕಿ, ದೊಟ್ಡ ಚಿತ್ರಗಳು ಚಿತ್ರಂಮದಿರಗಳನ್ನು ಏಕಸ್ವಾಮ್ಯವಾಗಿ ಪಡೆಯುವದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘4,500 ಚಿತ್ರಮಂದಿರಗಳಲ್ಲಿ ಬೆಕ್ಕು ಮತ್ತು ನಾಯಿಯ‌ ಚಿತ್ರಗಳು ಬಿಡುಗಡೆಯಾದರೂ ಕೂಡ ಅವು 20-30 ಕೋಟಿ ಹಣ ಗಳಿಸಬಲ್ಲವು’ ಎಂದು ಅವರು ವ್ಯಂಗ್ಯವಾಗಿ ಹೇಳಿದ್ದಾರೆ. ಸಣ್ಣ ಚಿತ್ರಗಳಿಗೆ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನೇ ನೀಡದೇ ಅವುಗಳ ಗುಣಮಟ್ಟ ಅಳೆಯುವುದು ತಪ್ಪು ಎಂದು ಅವರು ನುಡಿದಿದ್ದಾರೆ.

ದಕ್ಷಿಣ ಕೊರಿಯಾ ಹಾಗೂ ಸ್ಪೇನ್ ದೇಶದ ಚಿತ್ರಗಳನ್ನು ಎಲ್ಲರೂ ಶ್ಲಾಘಿಸುತ್ತಾರೆ. ಅಂಥದ್ದೇ ಚಿತ್ರಗಳು ಇಲ್ಲಿ‌ ಮೊದಲಿನಿಂದಲೂ ತಯಾರಾಗುತ್ತಿವೆ. ಆದರೆ ಪ್ರದರ್ಶಿಸಲು ಅವಕಾಶವೇ ಇರಲಿಲ್ಲ. ಈಗ ಒಟಿಟಿಗಳಿಂದಾಗಿ ಇಲ್ಲಿನ ಚಿತ್ರಗಳು ಜಗತ್ತಿನಾದ್ಯಂತ ಗುರುತಿಸಿಕೊಳ್ಳುತ್ತಿವೆ ಎಂದು ಅವರು ಹೇಳಿದ್ದಾರೆ. ನವಾಜುದ್ದೀನ್ ಪ್ರಸ್ತುತ ಬಾಲಿವುಡ್‌ನಲ್ಲಿ ಬ್ಯುಸಿ ಇರುವ ನಟರಲ್ಲಿ ಒಬ್ಬರಾಗಿದ್ದಾರೆ. ‘ಬೋಲೆ ಚುಡಿಯಾನ್’, ‘ಹೀರೋಪಂತಿ 2’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

ಡಿವೋರ್ಸ್​ ಬಳಿಕ ನಾಗ ಚೈತನ್ಯ ಅಭಿಮಾನಿಗಳಿಗೆ ಗುಡ್ ನ್ಯೂಸ್​: ಅ.22ಕ್ಕಾಗಿ ಎಲ್ಲರ ನಿರೀಕ್ಷೆ

Dharmendra: ನಟ ಧರ್ಮೇಂದ್ರ 1960ರಲ್ಲಿ ತಮ್ಮ ಮೊದಲ ಕಾರನ್ನು ಕೇವಲ ಇಷ್ಟು ಹಣ ನೀಡಿ ಖರೀದಿಸಿದ್ದರು; ಅಚ್ಚರಿಯ ಮಾಹಿತಿ ಇಲ್ಲಿದೆ

Published On - 3:28 pm, Tue, 12 October 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ