ಡಿವೋರ್ಸ್​ ಬಳಿಕ ನಾಗ ಚೈತನ್ಯ ಅಭಿಮಾನಿಗಳಿಗೆ ಗುಡ್ ನ್ಯೂಸ್​: ಅ.22ಕ್ಕಾಗಿ ಎಲ್ಲರ ನಿರೀಕ್ಷೆ

ನಾಗ ಚೈತನ್ಯ ವಿಚ್ಛೇದನದ ಬಳಿಕ ಅವರ ಫ್ಯಾನ್ಸ್​ ಪಾಲಿಗೆ ಸಿಹಿ ಸುದ್ದಿ ಸಿಕ್ಕಿದೆ. ಚಿತ್ರಮಂದಿರಲ್ಲಿ ಉತ್ತಮ ಪ್ರದರ್ಶನ ಕಂಡ ‘ಲವ್​ ಸ್ಟೋರಿ’ ಚಿತ್ರ ಈಗ ಓಟಿಟಿಗೆ ಬರುತ್ತಿದೆ. ತೆಲುಗಿನ ‘ಆಹಾ’ ಓಟಿಟಿಗೆ ‘ಲವ್​ ಸ್ಟೋರಿ’ ಸೇಲ್​ ಆಗಿದೆ.

ಡಿವೋರ್ಸ್​ ಬಳಿಕ ನಾಗ ಚೈತನ್ಯ ಅಭಿಮಾನಿಗಳಿಗೆ ಗುಡ್ ನ್ಯೂಸ್​: ಅ.22ಕ್ಕಾಗಿ ಎಲ್ಲರ ನಿರೀಕ್ಷೆ
ಸಮಂತಾ, ನಾಗ ಚೈತನ್ಯ

ಟಾಲಿವುಡ್​ ನಟ ನಾಗ ಚೈತನ್ಯ ಅವರ ವೈಯಕ್ತಿಕ ಜೀವನ ಈಗ ಚೆನ್ನಾಗಿಲ್ಲ. ಸಮಂತಾಗೆ ವಿಚ್ಛೇದನ ನೀಡಿದ ಬಳಿಕ ಅವರ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ. ಅದರ ನಡುವೆಯೂ ನಾಗ ಚೈತನ್ಯ ಮೊಗದಲ್ಲಿ ನಗು ಮೂಡುವಂತೆ ಮಾಡಿದ್ದು ‘ಲವ್​ ಸ್ಟೋರಿ’ ಸಿನಿಮಾ. ಸಾಯಿ ಪಲ್ಲವಿ ಜೊತೆ ನಟಿಸಿದ ಆ ಚಿತ್ರ ಸೆ.24ರಂದು ತೆರೆಕಂಡು ಗಲ್ಲಾಪಟ್ಟಿಗೆಯಲ್ಲಿ ಒಳ್ಳೆಯ ಕಮಾಯಿ ಮಾಡಿತು. ಸಿನಿಪ್ರಿಯರು ‘ಲವ್​ ಸ್ಟೋರಿ’ ನೋಡಿ ಮೆಚ್ಚಿಕೊಂಡರು. ಈ ಚಿತ್ರಕ್ಕೆ ಸಂಬಂಧಿಸಿದಂತೆ ಇನ್ನೊಂದು ಅಪ್​ಡೇಟ್​ ಕೇಳಿಬಂದಿದೆ. ಚಿತ್ರಮಂದಿರಲ್ಲಿ ಈ ಸಿನಿಮಾವನ್ನು ಮಿಸ್​ ಮಾಡಿಕೊಂಡವರು ಈಗ ಮನೆಯಲ್ಲೇ ಕುಳಿತು ನೋಡಬಹುದು.

ಹೌದು, ನಾಗ ಚೈತನ್ಯ ವಿಚ್ಛೇದನದ ಬಳಿಕ ಅವರ ಫ್ಯಾನ್ಸ್​ ಪಾಲಿಗೆ ಸಿಹಿ ಸುದ್ದಿ ಸಿಕ್ಕಿದೆ. ಚಿತ್ರಮಂದಿರಲ್ಲಿ ಉತ್ತಮ ಪ್ರದರ್ಶನ ಕಂಡ ‘ಲವ್​ ಸ್ಟೋರಿ’ ಚಿತ್ರ ಈಗ ಓಟಿಟಿಗೆ ಬರುತ್ತಿದೆ. ತೆಲುಗು ಮೂಲದ ‘ಆಹಾ’ ಓಟಿಟಿಗೆ ‘ಲವ್​ ಸ್ಟೋರಿ’ ಸೇಲ್​ ಆಗಿದೆ. ಅ.22ರಿಂದ ವೀಕ್ಷಣೆಗೆ ಲಭ್ಯವಾಗಲಿದೆ. ಆ ದಿನಾಂಕಕ್ಕಾಗಿ ಫ್ಯಾನ್ಸ್​ ಕಾಯುತ್ತಿದ್ದಾರೆ. ವೃತ್ತಿಜೀವನದ ವಿಚಾರದಲ್ಲಿ ಸಮಂತಾ ಬಗ್ಗೆ ನಾಗ ಚೈತನ್ಯ ಹೊಟ್ಟೆಕಿಚ್ಚು ಹೊಂದಿದ್ದರು ಎಂಬ ಗಾಸಿಪ್​ ಕೂಡ ಕೇಳಿಬಂದಿತ್ತು. ಈಗ ಅವರ ಸಿನಿಮಾ ಒಳ್ಳೆಯ ಬ್ಯುಸಿನೆಸ್​ ಮಾಡುತ್ತಿದೆ. ಈ ಚಿತ್ರದ ಕಿರುತೆರೆ ಪ್ರಸಾರ ಹಕ್ಕುಗಳನ್ನು ‘ಸ್ಟಾರ್​ ಮಾ’ ವಾಹಿನಿ ಖರೀದಿಸಿದ್ದು, ಶೀಘ್ರದಲ್ಲೇ ಪ್ರಸಾರ ಮಾಡಲಿದೆ.

ಅಲ್ಲು ಅರ್ಜುನ್​ ತಂದೆ ಅಲ್ಲು ಅರವಿಂದ್​ ಒಡೆತನದಲ್ಲಿ ‘ಆಹಾ’ ಓಟಿಟಿ ಆರಂಭ ಆಗಿದೆ. ತೆಲುಗು ಪ್ರೇಕ್ಷಕರನ್ನೇ ಗಮನದಲ್ಲಿ ಇಟ್ಟುಕೊಂಡು ಸ್ಥಳೀಯವಾಗಿ ಇದನ್ನು ಆರಂಭಿಸಲಾಗಿದೆ. ತೆಲುಗು ಚಿತ್ರಗಳಿಗೆ ಮಾರುಕಟ್ಟೆ ಒದಗಿಸಿಕೊಡಲು ‘ಆಹಾ’ ನೆರವಾಗುತ್ತಿದೆ. ಈ ಹಿಂದೆ ರವಿ ತೇಜ ನಟನೆಯ ‘ಕ್ರ್ಯಾಕ್​’ ಚಿತ್ರವನ್ನು ಈ ಸಂಸ್ಥೆ ಖರೀದಿಸಿತ್ತು. ಈಗ ‘ಆಹಾ’ ಸಂಗ್ರಹಕ್ಕೆ ‘ಲವ್​ ಸ್ಟೋರಿ’ ಕೂಡ ಸೇರ್ಪಡೆ ಆಗಿದೆ.

ವಿಚ್ಛೇದನದ ನಂತರ ನಾಗ ಚೈತನ್ಯ ಹೊಸ ಅಪಾರ್ಟ್​ಮೆಂಟ್​ ಖರೀದಿಸಿದ್ದಾರೆ ಎಂಬ ಸುದ್ದಿ ಕೂಡ ಕೇಳಿಬಂದಿದೆ. ಶೀಘ್ರದಲ್ಲೇ ಅವರು ಅಲ್ಲಿಗೆ ಶಿಫ್ಟ್​ ಆಗಲಿದ್ದಾರಂತೆ. ಆದರೆ ಈ ಬಗ್ಗೆ ಅವರು ಎಲ್ಲಿಯೂ ಹೇಳಿಕೊಂಡಿಲ್ಲ. ‘ಲವ್​ ಸ್ಟೋರಿ’ ಯಶಸ್ಸಿನ ಬಳಿಕ ಅವರ ಡಿಮ್ಯಾಂಡ್​ ಹೆಚ್ಚಿದೆ.

ಇದನ್ನೂ ಓದಿ:

‘ತಾಯಿ ಆಗಲು ಬಯಸಿದ್ರು ಸಮಂತಾ, ಆದರೆ..’; ನಾಗ ಚೈತನ್ಯ ಜತೆಗಿನ ಡಿವೋರ್ಸ್​ ಬಳಿಕ ನಿರ್ಮಾಪಕಿ ಅಚ್ಚರಿ ಹೇಳಿಕೆ

ಅಬಾರ್ಷನ್​, ಅಫೇರ್​ ವದಂತಿ ವಿಚಾರದಲ್ಲಿ ಮೌನ ಮುರಿದ ಸಮಂತಾ

Read Full Article

Click on your DTH Provider to Add TV9 Kannada