ರಾಜ್​ ಕುಂದ್ರಾ ಜಾಮೀನು ಸುದ್ದಿ ಕೇಳಿ ಶಿಲ್ಪಾ ಶೆಟ್ಟಿಗೆ ಖುಷಿಯೋ ದುಃಖವೋ? ಹೀಗಿತ್ತು ನೋಡಿ ಮೊದಲ ಪ್ರತಿಕ್ರಿಯೆ

‘ಕೆಟ್ಟ ಚಂಡಮಾರುತದ ನಂತರ ಒಳ್ಳೆಯ ಸಂಗತಿಗಳು ನಡೆಯುತ್ತವೆ ಎಂಬುದನ್ನು ಸಾಬೀತು ಪಡಿಸುವುದಕ್ಕಾಗಿಯೇ ಕಾಮನಬಿಲ್ಲು ಇರುವುದು’ ಎಂಬ ಸಾಲನ್ನು ಶಿಲ್ಪಾ ಶೆಟ್ಟಿ ಶೇರ್​ ಮಾಡಿಕೊಂಡಿದ್ದಾರೆ. ಅವರ ಬಗ್ಗೆ ಹಲವು ಗಾಸಿಪ್​ಗಳು ಹರಿದಾಡುತ್ತಿವೆ.

ರಾಜ್​ ಕುಂದ್ರಾ ಜಾಮೀನು ಸುದ್ದಿ ಕೇಳಿ ಶಿಲ್ಪಾ ಶೆಟ್ಟಿಗೆ ಖುಷಿಯೋ ದುಃಖವೋ? ಹೀಗಿತ್ತು ನೋಡಿ ಮೊದಲ ಪ್ರತಿಕ್ರಿಯೆ
ರಾಜ್​ ಕುಂದ್ರಾ, ಶಿಲ್ಪಾ ಶೆಟ್ಟಿ

ಅಂತೂ ಇಂತೂ ರಾಜ್​ ಕುಂದ್ರಾಗೆ ಜಾಮೀನು ಸಿಕ್ಕಿದೆ. ಅಶ್ಲೀಲ ಸಿನಿಮಾ ನಿರ್ಮಾಣ ದಂಧೆಯಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದ ಅವರಿಗೆ ಎರಡು ತಿಂಗಳ ಬಳಿಕ ಹೊರ ಜಗತ್ತನ್ನು ನೋಡುವ ಅವಕಾಶ ಒದಗಿಬಂದಿದೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಪತ್ನಿ ಶಿಲ್ಪಾ ಶೆಟ್ಟಿ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ತಮ್ಮ ಸದ್ಯದ ಪರಿಸ್ಥಿತಿ ಬಗ್ಗೆ ಸೂಚನೆ ನೀಡಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಈ ಬಗ್ಗೆ ಅವರು ಸೂಚ್ಯವಾಗಿ ಒಂದು ಸಾಲನ್ನು ಬರೆದುಕೊಂಡಿದ್ದಾರೆ.

‘ಕೆಟ್ಟ ಚಂಡಮಾರುತದ ನಂತರ ಒಳ್ಳೆಯ ಸಂಗತಿಗಳು ನಡೆಯುತ್ತವೆ ಎಂಬುದನ್ನು ಸಾಬೀತುಪಡಿಸುವುದಕ್ಕಾಗಿಯೇ ಕಾಮನಬಿಲ್ಲು ಇರುವುದು’ ಎಂಬ ಸಾಲನ್ನು ಶಿಲ್ಪಾ ಶೆಟ್ಟಿ ಶೇರ್​ ಮಾಡಿಕೊಂಡಿದ್ದಾರೆ. ನಿಜಕ್ಕೂ ಅವರು ಯಾವ ಅರ್ಥದಲ್ಲಿ ಈ ಮಾತನ್ನು ಹಂಚಿಕೊಂಡಿದ್ದಾರೆ ಎಂಬುದು ಅಭಿಮಾನಿಗಳ ಊಹೆಗೆ ಬಿಟ್ಟಿದ್ದು. ಸದ್ಯಕ್ಕಂತೂ ಶಿಲ್ಪಾ ಶೆಟ್ಟಿ ಬಗ್ಗೆ ಹಲವು ಬಗೆಯ ಅಂತೆ-ಕಂತೆಗಳು ಹರಿದಾಡುತ್ತಿವೆ.

ಈ ಮೊದಲು ತನಿಖೆಯ ಸಲುವಾಗಿ ರಾಜ್​ ಕುಂದ್ರಾ ಅವರನ್ನು ಪೊಲೀಸರು ಮನೆಗೆ ಕರೆದುಕೊಂಡು ಬಂದಾಗ ಶಿಲ್ಪಾ ಶೆಟ್ಟಿ ಅತ್ತು ರಂಪಾಟ ಮಾಡಿದ್ದರು ಎಂದು ಸುದ್ದಿ ಆಗಿತ್ತು. ಅಲ್ಲದೇ ಅವರು ವಿಚ್ಛೇದನ ಪಡೆಯುವ ಬಗ್ಗೆಯೂ ಆಲೋಚನೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಯಾವ ವಿಚಾರಗಳ ಬಗ್ಗೆಯೂ ಅವರು ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಈ ನಡುವೆ ಕೆಲವೇ ದಿನಗಳ ಹಿಂದೆ ಶಿಲ್ಪಾ ಶೆಟ್ಟಿ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡಿದ್ದ ಕೆಲವು ಸಾಲುಗಳು ಬೇರೆ ಏನನ್ನೋ ಸೂಚಿಸುವಂತಿದ್ದವು.

‘ಯಾರೂ ಸಹ ಹಿಂದಕ್ಕೆ ಹೋಗಿ ಮತ್ತೆ ಹೊಸದಾಗಿ ಏನನ್ನೂ ಶುರುಮಾಡಲು ಸಾಧ್ಯವಿಲ್ಲ. ಆದರೆ ಈಗಿನಿಂದ ಬೇರೆ ಏನನ್ನಾದರೂ ಶುರುಮಾಡಿ ಹೊಸ ಅಂತ್ಯ ಹಾಡಬಹುದು’ ಎಂಬ ಸಾಲನ್ನು ಶಿಲ್ಪಾ ಶೇರ್​ ಮಾಡಿಕೊಂಡಿದ್ದರು. ‘ನಾವು ತೆಗೆದುಕೊಂಡ ಕೆಟ್ಟ ನಿರ್ಧಾರಗಳ ಬಗ್ಗೆ ಹೆಚ್ಚು ವಿಶ್ಲೇಷಣೆ ಮಾಡಬಹುದು. ಆದರೆ ಎಷ್ಟೇ ವಿಶ್ಲೇಷಣೆ ಮಾಡಿದರೂ ಆಗಿ ಹೋಗಿದ್ದನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ. ಮುಂದಕ್ಕೆ ಹೋಗಿ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಹಳೇ ತಪ್ಪುಗಳನ್ನು ಮತ್ತೆ ಮಾಡಬಾರದು. ನಮ್ಮ ಸುತ್ತಮುತ್ತ ಇನ್ನೂ ಸಾಕಷ್ಟು ಅವಕಾಶಗಳಿವೆ’ ಎಂಬ ಮಾತನ್ನು ಶಿಲ್ಪಾ ಹಂಚಿಕೊಂಡಿದ್ದರು.

ಇದನ್ನೂ ಓದಿ:

ಶಮಿತಾ ಶೆಟ್ಟಿ-ರಾಕೇಶ್​ ಬಾಪಟ್​​ ಸಂಬಂಧಕ್ಕೆ ಮನೆಯವರ ಒಪ್ಪಿಗೆ? ಶಿಲ್ಪಾ ಶೆಟ್ಟಿ ತಾಯಿಯಿಂದ ಹೊಗಳಿಕೆ​ 

ಪತಿ ರಾಜ್​ ಕುಂದ್ರಾಗೆ ವಿಚ್ಛೇದನ ನೀಡ್ತಾರಾ ಶಿಲ್ಪಾ ಶೆಟ್ಟಿ? ಮಕ್ಕಳ ಭವಿಷ್ಯಕ್ಕಾಗಿ ದೊಡ್ಡ ನಿರ್ಧಾರ ಸಾಧ್ಯತೆ

Read Full Article

Click on your DTH Provider to Add TV9 Kannada