‘ಅಶ್ಲೀಲ ಸಿನಿಮಾ ಜಗತ್ತಿನಿಂದ ಹೊರಬನ್ನಿ, ನಿಮಗೆ ಜನ ನಮಸ್ಕಾರ ಮಾಡ್ತಾರೆ’; ಶಿಲ್ಪಾ ಶೆಟ್ಟಿಗೆ ಕುಟುಕಿದ ಶೆರ್ಲಿನ್​ ಚೋಪ್ರಾ

ನೀಲಿ ಚಿತ್ರ ದಂಧೆಯ ಪ್ರಮುಖ ಆರೋಪಿ ರಾಜ್​ ಕುಂದ್ರಾಗೆ ಜಾಮೀನು ಸಿಕ್ಕಿರುವುದು ನಟಿ ಶೆರ್ಲಿನ್​ ಚೋಪ್ರಾಗೆ ಬೇಸರ ತರಿಸಿದೆ. ಈಗ ಅವರು ಶಿಲ್ಪಾ ಶೆಟ್ಟಿಯನ್ನು ನೇರವಾಗಿ ಕೆಣಕಿದ್ದಾರೆ.

‘ಅಶ್ಲೀಲ ಸಿನಿಮಾ ಜಗತ್ತಿನಿಂದ ಹೊರಬನ್ನಿ, ನಿಮಗೆ ಜನ ನಮಸ್ಕಾರ ಮಾಡ್ತಾರೆ’; ಶಿಲ್ಪಾ ಶೆಟ್ಟಿಗೆ ಕುಟುಕಿದ ಶೆರ್ಲಿನ್​ ಚೋಪ್ರಾ
ಶೆರ್ಲಿನ್ ಚೋಪ್ರಾ, ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ

ನಟಿ ಶಿಲ್ಪಾ ಶೆಟ್ಟಿ ಅವರಿಗೆ ಈಗ ಕೊಂಚ ಸಮಾಧಾನ ಆಗಿದೆ. ಅಶ್ಲೀಲ ಸಿನಿಮಾ ನಿರ್ಮಾಣದ ದಂಧೆಯಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದ ಅವರ ಪತಿ ರಾಜ್​ ಕುಂದ್ರಾ ಬರೋಬ್ಬರಿ ಎರಡು ತಿಂಗಳ ಬಳಿಕ ಜಾಮೀನು ಪಡೆದುಕೊಂಡಿರುವುದು ಶಿಲ್ಪಾ ಶೆಟ್ಟಿ ಖುಷಿಗೆ ಕಾರಣ ಆಗಿದೆ. ಇದರ ಬೆನ್ನಲ್ಲೇ ಅವರನ್ನು ಕಟುವಾಗಿ ಟೀಕಿಸುತ್ತಿದ್ದಾರೆ ನಟಿ ಶೆರ್ಲಿನ್​ ಚೋಪ್ರಾ. ನೀಲಿ ಚಿತ್ರ ದಂಧೆಯಲ್ಲಿ ಶೆರ್ಲಿನ್​ ಹೆಸರು ಕೂಡ ಪ್ರಮುಖವಾಗಿ ಕೇಳಿಬಂದಿದೆ. ತಮ್ಮನ್ನು ರಾಜ್​ ಕುಂದ್ರಾ ಅವರು ಮೋಸದಿಂದ ಅಶ್ಲೀಲ ಸಿನಿಮಾ ದಂಧೆಗೆ ಎಳೆದುತಂದರು ಎಂದು ಶೆರ್ಲಿನ್​ ಚೋಪ್ರಾ ಮೊದಲಿನಿಂದಲೂ ಆರೋಪ ಮಾಡುತ್ತಲೇ ಇದ್ದಾರೆ. ಜೊತೆಗೆ ಅವರು ಶಿಲ್ಪಾ ಶೆಟ್ಟಿಯನ್ನೂ ಕುಟುಕುತ್ತಿದ್ದಾರೆ.

ರಾಜ್​ ಕುಂದ್ರಾಗೆ ಜಾಮೀನು ಸಿಕ್ಕಿರುವುದು ಶೆರ್ಲಿನ್​ ಚೋಪ್ರಾಗೆ ಬೇಸರ ತರಿಸಿದೆ. ಈಗ ಅವರು ಶಿಲ್ಪಾ ಶೆಟ್ಟಿಯನ್ನು ನೇರವಾಗಿ ಕೆಣಕಿದ್ದಾರೆ. ‘ಟಿವಿ ಕಾರ್ಯಕ್ರಮದಲ್ಲಿ ಕಲಾವಿದರಿಗೆ ನೀವು ಸಾಷ್ಟಾಂಗ ನಮಸ್ಕಾರ ಮಾಡುತ್ತೀರಿ. ರೀಲ್​ ಜಗತ್ತಿನಿಂದ ಹೊರಬಂದು ರಿಯಲ್​ ಜಗತ್ತಿನಲ್ಲಿ ಕಷ್ಟಪಡುತ್ತಿರುವ ಮಹಿಳೆಯರಿಗೂ ಕರುಣೆ ತೋರಿಸಿ. ಟಿವಿ ಕಾರ್ಯಕ್ರಮದಲ್ಲಿ ಕುಳಿತುಕೊಂಡು ಸಾಷ್ಟಾಂಗ ನಮಸ್ಕಾರ ಮಾಡುವುದು, ರಾಣಿ ಲಕ್ಷ್ಮೀಬಾಯಿ ಬಗ್ಗೆ ಮಾತನಾಡುವುದು ಸುಲಭ. ನಿಮ್ಮ ಅಶ್ಲೀಲ ಸಿನಿಮಾ ಜಗತ್ತಿನಿಂದ ಹೊರಬನ್ನಿ. ಆಗ ಇಡೀ ಜಗತ್ತು ನಿಮಗೆ ಸಾಷ್ಟಾಂಗ ನಮಸ್ಕಾರ ಮಾಡುವುದನ್ನು ನೀವು ನೋಡುತ್ತೀರಿ’ ಎಂದು ಶೆರ್ಲಿನ್​ ಚೋಪ್ರಾ ಟೀಕಿಸಿದ್ದಾರೆ.

ಸದ್ಯ ಈ ಬಗ್ಗೆ ಶೆರ್ಲಿನ್​ ಚೋಪ್ರಾ ಮಾಡಿರುವ ಟ್ವೀಟ್​ ಮತ್ತು ಅವರು ನೀಡಿರುವ ಸಂದರ್ಶನದ ವಿಡಿಯೋ ಕ್ಲಿಪ್​ ವೈರಲ್ ಆಗುತ್ತಿದೆ. ಈ ಹಿಂದೆ ಕೂಡ ಅವರು ಶಿಲ್ಪಾ ಶೆಟ್ಟಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ‘ಸೂಪರ್​ ಡ್ಯಾನ್ಸರ್​ 4’ ರಿಯಾಲಿಟಿ ಶೋಗೆ ಜಡ್ಜ್​ ಆಗಿರುವ ಶಿಲ್ಪಾ ಶೆಟ್ಟಿ ಅವರು ರಾಣಿ ಲಕ್ಷ್ಮೀ ಬಾಯಿ ಬಗ್ಗೆ ಮಾತನಾಡಿದ್ದರು. ಸಮಸ್ಯೆಗಳನ್ನು ಎದುರಿಸಿ ಬದುಕುತ್ತಿರುವ ಮಹಿಳೆಯರ ಬಗ್ಗೆ ತಮಗೆ ತುಂಬ ಗೌರವ ಇದೆ ಎಂದು ಅವರು ಹೇಳಿದ್ದರು. ಅದೇ ಮಾತನ್ನು ಇಟ್ಟುಕೊಂಡು ಅವರನ್ನು ಶೆರ್ಲಿನ್​ ಚೋಪ್ರಾ ಟೀಕಿಸಿದ್ದರು.

‘ಅಶ್ಲೀಲ ಸಿನಿಮಾ ದಂಧೆಯ ವಿರುದ್ಧ ಬೇರೆ ಬೇರೆ ಪೊಲೀಸ್​ ಠಾಣೆಗಳಿಗೆ ತೆರಳಿ ಧೈರ್ಯವಾಗಿ ತಮ್ಮ ಹೇಳಿಕೆಗಳನ್ನು ನೀಡುತ್ತಿರುವ ಯುವತಿಯರು ಕೂಡ ನೀವು ಹೇಳುವಂತೆ ಸಮಸ್ಯೆಗಳನ್ನು ಎದುರಿಸಿ ಬದುಕುತ್ತಿರುವ ಮಹಿಳೆಯರ ಸಾಲಿಗೆ ಸೇರುತ್ತಾರಾ?’ ಎಂದು ಶೆರ್ಲಿನ್​ ಪ್ರಶ್ನಿಸಿದ್ದರು.

ಇದನ್ನೂ ಓದಿ:

‘ಶಿಲ್ಪಾ ಶೆಟ್ಟಿಗೂ ನಿಮ್ಮ ವಿಡಿಯೋ ಸಖತ್​ ಇಷ್ಟ’ ಎಂದು ಪತ್ನಿ ಹೆಸರಲ್ಲಿ ಶೆರ್ಲಿನ್​ಗೆ ಯಾಮಾರಿಸಿದ್ದ ರಾಜ್​ ಕುಂದ್ರಾ

ಶಮಿತಾ ಶೆಟ್ಟಿ ಬಿಗ್​ ಬಾಸ್​ ಆಟ ಇನ್ನೂ ನಿಂತಿಲ್ಲ; ದೊಡ್ಮನೆಯಲ್ಲಿ ಮತ್ತೆ ಸೌಂಡು ಮಾಡಲಿರುವ ಶಿಲ್ಪಾ ತಂಗಿ

Read Full Article

Click on your DTH Provider to Add TV9 Kannada