ಸ್ಯಾಂಡಲ್ವುಡ್ ನಂತರ ಬಾಲಿವುಡ್ಗೂ ಸಿಕ್ತು ಗುಡ್ ನ್ಯೂಸ್; ಸಂಭ್ರಮಿಸಿದ ಅಕ್ಷಯ್ ಕುಮಾರ್
ಕರ್ನಾಟಕದಲ್ಲಿ ಇಷ್ಟುದಿನ ಚಿತ್ರಮಂದಿರಗಳಲ್ಲಿ ಶೆ. 50 ಸೀಟುಭರ್ತಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈಗ ಕರ್ನಾಟಕ ಸರ್ಕಾರ ಅಕ್ಟೋಬರ್ 1ರಿಂದ ಹೌಸ್ಫುಲ್ಗೆ ಅವಕಾಶ ನೀಡುತ್ತಿದೆ.
ಕೊವಿಡ್ ಎರಡನೇ ಅಲೆ ಕಾಣಿಸಿಕೊಂಡ ನಂತರ ಮಹಾರಾಷ್ಟ್ರದಲ್ಲಿ ಚಿತ್ರಮಂದಿರ ಮುಚ್ಚಲಾಗಿತ್ತು. ಬಾಲಿವುಡ್ನ ಮುಖ್ಯ ಹಬ್ ಎಂದೇ ಕರೆಯಲ್ಪಡುವ ಮುಂಬೈನಲ್ಲಿ ಥಿಯೇಟರ್ ಮುಚ್ಚಿದ್ದರಿಂದ ಬಾಲಿವುಡ್ ಸ್ಟಾರ್ ಸಿನಿಮಾಗಳು ಅಷ್ಟಾಗಿ ರಿಲೀಸ್ ಆಗಿರಲಿಲ್ಲ. ಈಗ ಅಕ್ಟೋಬರ್ 22ರಿಂದ ಚಿತ್ರಮಂದಿರ ರೀಓಪನ್ಗೆ ಅವಕಾಶ ನೀಡಲಾಗಿದೆ. ಇದರಿಂದ ಬಾಲಿವುಡ್ ಮತ್ತೆ ಕಳೆಗಟ್ಟುತ್ತಿದೆ. ಸ್ಟಾರ್ ನಟರ ಸಿನಿಮಾಗಳು ರಿಲೀಸ್ಗೆ ರೆಡಿ ಆಗುತ್ತಿದೆ.
ಕರ್ನಾಟಕದಲ್ಲಿ ಇಷ್ಟುದಿನ ಚಿತ್ರಮಂದಿರಗಳಲ್ಲಿ ಶೆ. 50 ಸೀಟುಭರ್ತಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈಗ ಕರ್ನಾಟಕ ಸರ್ಕಾರ ಅಕ್ಟೋಬರ್ 1ರಿಂದ ಹೌಸ್ಫುಲ್ಗೆ ಅವಕಾಶ ನೀಡುತ್ತಿದೆ. ಇದಾದ ಬೆನ್ನಲ್ಲೇ ಈಗ ಮಹಾರಾಷ್ಟ್ರದಲ್ಲೂ ಚಿತ್ರಮಂದಿರ ಓಪನ್ ಮಾಡೋಕೆ ಅವಕಾಶ ನೀಡಲಾಗಿದೆ. ಅಕ್ಟೋಬರ್ 22ರಿಂದ ಮಹಾರಾಷ್ಟ್ರದಲ್ಲಿ ಮತ್ತೆ ಸಿನಿಮಾ ರಿಲೀಸ್ ಆಗಲಿದೆ.
ಈ ಬಗ್ಗೆ ಅಕ್ಷಯ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ‘ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಸಾಕಷ್ಟು ಕುಟುಂಬಗಳು ಧನ್ಯವಾದ ಹೇಳುತ್ತವೆ. ಅಕ್ಟೋಬರ್ 22ರಿಂದ ಚಿತ್ರಮಂದಿರ ಓಪನ್ ಮಾಡೋಕೆ ಅವಕಾಶ ನೀಡಿದ್ದು ಉತ್ತಮ ಕೆಲಸ’ ಎಂದಿರುವ ಅಕ್ಷಯ್ ಕುಮಾರ್, ದೀಪಾವಳಿಗೆ ‘ಸೂರ್ಯವಂಶಿ’ ಸಿನಿಮಾ ಬರಲಿದೆ ಎಂಬುದನ್ನು ಘೋಷಿಸಿದ್ದಾರೆ. ಈ ಮಧ್ಯೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ರೋಹಿತ್ ಶೆಟ್ಟಿ ಭೇಟಿ ಮಾಡಿದ್ದಾರೆ. ಈ ಮೂಲಕ ಅವರು ವಿಶೇಷ ಧನ್ಯವಾದ ಹೇಳಿದ್ದಾರೆ.
So many families would be thanking Sh Uddhav Thackeray today! Grateful for allowing the reopening of cinema halls in Maharashtra from Oct 22. Ab kisi ke roke na rukegi – AA RAHI HAI POLICE #Sooryavanshi #Diwali2021 #RohitShetty @ajaydevgn @RanveerOfficial #KatrinaKaif pic.twitter.com/xJqUuh2pMT
— Akshay Kumar (@akshaykumar) September 25, 2021
ಅಕ್ಷಯ್ ಕುಮಾರ್ ನಟನೆಯ ‘ಬೆಲ್ ಬಾಟಮ್’ ಸಿನಿಮಾ ತೆರೆಗೆ ಬಂದಿತ್ತು. ಮಹಾರಾಷ್ಟ್ರದಲ್ಲಿ ಚಿತ್ರಮಂದಿರ ಓಪನ್ ಇಲ್ಲ ಎಂಬುದು ಸಿನಿಮಾಗೆ ದೊಡ್ಡ ಪೆಟ್ಟು ನೀಡಿತ್ತು. ನೂರಾರು ಕೋಟಿ ರೂಪಾಯಿ ಬಾಚುವ ಅಕ್ಷಯ್ ಕುಮಾರ್ ಸಿನಿಮಾ ಕೆಲವೇ ಕೆಲವು ಕೋಟಿ ಗಳಿಸಿ ಥಿಯೇಟರ್ನಿಂದ ಕಾಲ್ಕಿತ್ತಿತ್ತು. ಈಗ ಈ ಸಿನಿಮಾ ಅಮೇಜಾನ್ ಪ್ರೈಮ್ನಲ್ಲಿ ತೆರೆಗೆ ಬಂದು ಹೆಸರು ಮಾಡುತ್ತಿದೆ.
ಇದನ್ನೂ ಓದಿ: ಥಿಯೇಟರ್ ಹೌಸ್ಫುಲ್ಗೆ ಅವಕಾಶ; ಷರತ್ತುಗಳೇನು?
ಅಕ್ಷಯ್ ಕುಮಾರ್ ನಂಬಿಕಸ್ಥ ಬಾಡಿಗಾರ್ಡ್ ಶ್ರೇಯಸ್ಗೆ 1.2 ಕೋಟಿ ರೂ. ಸಂಬಳ; ಈ ವ್ಯಕ್ತಿಯ ಕೆಲಸಗಳೇನು?
Published On - 6:48 pm, Sat, 25 September 21