‘ಹೃದಯದಿಂದ ನಾವು ಯಾವಾಗಲೂ ಉತ್ತಮ ಗೆಳೆಯರಾಗಿರುತ್ತೇವೆ’; ಇದು ಶಿಲ್ಪಾ ಶೆಟ್ಟಿಯ ಮಾತು

ಶಿಲ್ಪಾ ಶೆಟ್ಟಿ ಕುಟುಂಬಕ್ಕೆ ಎದುರಾಗಿದ್ದ ಸಂಕಷ್ಟ ತಾತ್ಕಾಲಿಕವಾಗಿ ದೂರವಾಗಿದೆ. ಪತಿ ರಾಜ್​ ಕುಂದ್ರಾ ಎರಡು ತಿಂಗಳು ಜೈಲು ವಾಸ ಮುಗಿಸಿ ಜಾಮೀನು ಪಡೆದು ಹೊರ ಬಂದಿದ್ದಾರೆ. ಈ ಬಗ್ಗೆ ಶಿಲ್ಪಾ ಶೆಟ್ಟಿ ನೇರವಾಗಿ ಏನನ್ನೂ ಮಾತನಾಡಿಲ್ಲ.

‘ಹೃದಯದಿಂದ ನಾವು ಯಾವಾಗಲೂ ಉತ್ತಮ ಗೆಳೆಯರಾಗಿರುತ್ತೇವೆ’; ಇದು ಶಿಲ್ಪಾ ಶೆಟ್ಟಿಯ ಮಾತು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Sep 27, 2021 | 2:33 PM

ಭಾನುವಾರ (ಸೆಪ್ಟೆಂಬರ್​ 26) ವಿಶ್ವ ಮಗಳ ದಿನಾಚರಣೆ. ಈ ದಿನದಂದು ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಮಗಳಿಗೆ ಶುಭಾಶಯ ಕೋರುವ ಕೆಲಸ ಮಾಡಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಕೂಡ ಇದಕ್ಕೆ ಹೊರತಾಗಿಲ್ಲ. ಮಗಳು ಸಮಿಶಾ ಶೆಟ್ಟಿ ಕುಂದ್ರಾ ವಿಶೇಷ ವಿಡಿಯೋ ಪೋಸ್ಟ್​ ಮಾಡಿರುವ ಅವರು ಒಂದು ಪ್ರಾಮಿಸ್​ ಮಾಡಿದ್ದಾರೆ.

ಶಿಲ್ಪಾ ಶೆಟ್ಟಿ ಕುಟುಂಬಕ್ಕೆ ಎದುರಾಗಿದ್ದ ಸಂಕಷ್ಟ ತಾತ್ಕಾಲಿಕವಾಗಿ ದೂರವಾಗಿದೆ. ಪತಿ ರಾಜ್​ ಕುಂದ್ರಾ ಎರಡು ತಿಂಗಳು ಜೈಲು ವಾಸ ಮುಗಿಸಿ ಜಾಮೀನು ಪಡೆದು ಹೊರ ಬಂದಿದ್ದಾರೆ. ಈ ಬಗ್ಗೆ ಶಿಲ್ಪಾ ಶೆಟ್ಟಿ ನೇರವಾಗಿ ಏನನ್ನೂ ಮಾತನಾಡಿಲ್ಲ. ರಾಜ್​ ಕುಂದ್ರಾ ಜೈಲಿಗೆ ತೆರಳಿದ ನಂತರವೂ ಶಿಲ್ಪಾ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿಯೇ ಇದ್ದರು. ಅಭಿಮಾನಿಗಳಿಂದ ಬರುತ್ತಿದ್ದ ಕೆಲ ನೆಗೆಟಿವ್​ ಕಮೆಂಟ್​ಗಳ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಈಗ ಮಗಳ ದಿನಾಚರಣೆಯಂದು ವಿಶೇಷ ಪೋಸ್ಟ್​ ಒಂದನ್ನು ಮಾಡಿದ್ದಾರೆ.

‘ಸಮಿಶಾ ನನ್ನನ್ನು ನೀನು ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದ. ನಮ್ಮಿಬ್ಬರ ನಡುವೆ ಇರುವುದು ಅಮ್ಮ-ಮಗಳ ಸಂಬಂಧ. ಆದರೆ, ಹೃದಯದಿಂದ ನಾವು ಯಾವಾಗಲೂ ಉತ್ತಮ ಗೆಳೆಯರಾಗಿರುತ್ತೇವೆ. ಇದು ನನ್ನ ಪ್ರಾಮಿಸ್. ಲವ್​ ಯು ಮೈ ಬೇಬಿ’ ಎಂದು ಶಿಲ್ಪಾ ಶೆಟ್ಟಿ ಕ್ಯಾಪ್ಶನ್​ ನೀಡಿದ್ದಾರೆ.

ಪತಿ ರಾಜ್​ ಕುಂದ್ರಾ ಜೈಲಿನಿಂದ ಆಚೆ ಬರುತ್ತಿದ್ದಂತೆಯೇ ಶಿಲ್ಪಾ ಶೆಟ್ಟಿ ಅವರು ಪ್ರಸ್ತುತ ಸನ್ನಿವೇಶಕ್ಕೆ ಸೂಕ್ತ ಆಗುವಂತಹ ಕೆಲವು ಸಾಲುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ‘ನಿಮ್ಮನ್ನು ಕೆಳಗೆ ಬೀಳಿಸುವಂತಹ ಪರಿಸ್ಥಿತಿ ಸದಾ ಎದುರಾಗುತ್ತದೆ. ಇಂಥ ಸಂದರ್ಭದಲ್ಲಿ 7 ಸಲ ಬಿದ್ದರೂ ಕೂಡ, 8ನೇ ಸಲ ಎದ್ದು ನಿಲ್ಲುವಷ್ಟು ಶಕ್ತಿಯನ್ನು ತಂದುಕೊಳ್ಳಿ. ಕಷ್ಟದ ಪರಿಸ್ಥಿತಿಯಲ್ಲಿ ಎದ್ದು ನಿಲ್ಲಲು ಹೆಚ್ಚು ಬಲ, ಇಚ್ಛಾಶಕ್ತಿ ಮತ್ತು ಧೈರ್ಯ ಬೇಕು’ ಎಂದು ಶಿಲ್ಪಾ ಶೆಟ್ಟಿ ಇತ್ತೀಚೆಗೆ ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ: ‘ಅಶ್ಲೀಲ ಸಿನಿಮಾ ಜಗತ್ತಿನಿಂದ ಹೊರಬನ್ನಿ, ನಿಮಗೆ ಜನ ನಮಸ್ಕಾರ ಮಾಡ್ತಾರೆ’; ಶಿಲ್ಪಾ ಶೆಟ್ಟಿಗೆ ಕುಟುಕಿದ ಶೆರ್ಲಿನ್​ ಚೋಪ್ರಾ

ಒಂದೇ ಒಂದು ಫೋಟೋದಿಂದ ಶಮಿತಾ ಶೆಟ್ಟಿ-ರಾಕೇಶ್​ ಬಾಪಟ್​ ಪ್ರೇಮ್​​ ಕಹಾನಿ ಬಯಲು; ಇಬ್ಬರ ಕಥೆ ಮುಂದೇನು?

Published On - 1:59 pm, Mon, 27 September 21

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್