ಒಂದೇ ಒಂದು ಫೋಟೋದಿಂದ ಶಮಿತಾ ಶೆಟ್ಟಿ-ರಾಕೇಶ್​ ಬಾಪಟ್​ ಪ್ರೇಮ್​​ ಕಹಾನಿ ಬಯಲು; ಇಬ್ಬರ ಕಥೆ ಮುಂದೇನು?

ಬಿಗ್​ ಬಾಸ್​ ಓಟಿಟಿ ಶೋನಲ್ಲಿ ಪರಸ್ಪರ ಕಿಸ್​ ಮಾಡಿಕೊಳ್ಳುವ ಮಟ್ಟಕ್ಕೆ ರಾಕೇಶ್​ ಬಾಪಟ್​ ಮತ್ತು ಶಮಿತಾ ಶೆಟ್ಟಿ ನಡುವೆ ಆಪ್ತತೆ ಬೆಳೆದಿತ್ತು. ಅಚ್ಚರಿ ಎಂದರೆ ಬಿಗ್​ ಬಾಸ್​ನಿಂದ ಹೊರಬಂದ ಬಳಿಕವೂ ಅವರು ತಮ್ಮ ಲವ್ವಿ-ಡವ್ವಿ ಮುಂದುವರಿಸಿದ್ದಾರೆ.

ಒಂದೇ ಒಂದು ಫೋಟೋದಿಂದ ಶಮಿತಾ ಶೆಟ್ಟಿ-ರಾಕೇಶ್​ ಬಾಪಟ್​ ಪ್ರೇಮ್​​ ಕಹಾನಿ ಬಯಲು; ಇಬ್ಬರ ಕಥೆ ಮುಂದೇನು?
ಶಮಿತಾ ಶೆಟ್ಟಿ, ರಾಕೇಶ್ ಬಾಪಟ್
Follow us
TV9 Web
| Updated By: ಮದನ್​ ಕುಮಾರ್​

Updated on: Sep 26, 2021 | 8:37 AM

ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಬಿಗ್​ ಬಾಸ್​ ಓಟಿಟಿ ಶೋಗೆ ಕಾಲಿಟ್ಟ ದಿನದಿಂದಲೂ ಅವರ ಬಗ್ಗೆ ಹತ್ತು ಹಲವು ಸುದ್ದಿಗಳು ಹರಿದಾಡುತ್ತಲೇ ಇವೆ. ಸಿನಿಮಾದಲ್ಲಿ ಸಾಧನೆ ಮಾಡಲು ಸಾಧ್ಯವಾಗದ ಅವರು ಈ ರಿಯಾಲಿಟಿ ಶೋ ಮೂಲಕ ಭರ್ಜರಿ ಜನಪ್ರಿಯತೆ ಗಳಿಸಿಕೊಂಡರು. ಅಲ್ಲದೇ ಅವರಿಗೆ ಬಾಯ್​ಫ್ರೆಂಡ್​ ಸಿಕ್ಕಿರುವುದು ಕೂಡ ಇದೇ ಬಿಗ್​ ಬಾಸ್​ ಓಟಿಟಿ ಮೂಲಕ! ಹೌದು, ಬಿಗ್​ ಬಾಸ್​ ಓಟಿಟಿಯಲ್ಲಿ ತಮ್ಮ ಜೊತೆ ಸ್ಪರ್ಧಿಸಿದ್ದ ರಾಕೇಶ್​ ಬಾಪಟ್​ ಮೇಲೆ ಶಮಿತಾಗೆ ಪ್ರೀತಿ ಚಿಗುರಿದೆ. ಅದಕ್ಕೀಗ ಖಡಕ್​ ಸಾಕ್ಷಿ ಕೂಡ ಸಿಕ್ಕಿದೆ.

ಬಿಗ್​ ಬಾಸ್​ ಮನೆಯಲ್ಲಿ ರಾಕೇಶ್​ ಬಾಪಟ್​ ಮತ್ತು ಶಮಿತಾ ಶೆಟ್ಟಿ ತುಂಬ ಆಪ್ತವಾಗಿದ್ದರು. ಪರಸ್ಪರ ಕಿಸ್​ ಮಾಡಿಕೊಳ್ಳುವ ಮಟ್ಟಕ್ಕೆ ಅವರ ನಡುವೆ ಆಪ್ತತೆ ಬೆಳೆದಿತ್ತು. ಅಚ್ಚರಿ ಎಂದರೆ ಬಿಗ್​ ಬಾಸ್​ ಶೋ ಮುಗಿದ ಬಳಿಕವೂ ಅವರು ತಮ್ಮ ಲವ್ವಿ-ಡವ್ವಿ ಮುಂದುವರಿಸಿದ್ದಾರೆ. ಇತ್ತೀಚೆಗೆ ರಾಕೇಶ್​ ಮತ್ತು ಶಮಿತಾ ಜೊತೆಯಾಗಿ ಸುತ್ತಾಡಿದ್ದಾರೆ. ಹಾಗಂತ ಇದು ಗಾಸಿಪ್​ ಅಲ್ಲ. ಸ್ವತಃ ರಾಕೇಶ್​ ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಮುಂಬೈನ ಒಂದು ರೆಸ್ಟೋರೆಂಟ್​ನಲ್ಲಿ ಶಮಿತಾ ಮತ್ತು ರಾಕೇಶ್​ ಜೊತೆಯಾಗಿ ಊಟ ಮಾಡಿದ್ದಾರೆ. ಡಿನ್ನರ್​ ಡೇಟ್​ ಮಾಡಿದ ರಾಕೇಶ್ ಅವರು ಒಂದು ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದು ತುಂಬ ರೊಮ್ಯಾಂಟಿಕ್​ ಆಗಿದೆ. ಶಮಿತಾರ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿರುವ ರಾಕೇಶ್​, ಈ ಫೋಟೋಗೆ ‘ನೀನು-ನಾನು’ ಎಂದು ಕ್ಯಾಪ್ಷನ್​ ನೀಡಿದ್ದಾರೆ. ಜೊತೆಗೆ ಹಾರ್ಟ್​ ಸಿಂಬಲ್​ ಇಟ್ಟು ತಮ್ಮ ಪ್ರೀತಿಯನ್ನು ಜಗಜ್ಜಾಹೀರು ಮಾಡಿದ್ದಾರೆ.

ಇದೇ ವೇಳೆ ಮಾಧ್ಯಮದ ಕ್ಯಾಮರಾ ಕಣ್ಣಿಗೂ ಅವರಿಬ್ಬರು ಕಾಣಿಸಿಕೊಂಡರು. ಆದರೆ ಏನನ್ನೂ ಮಾತನಾಡದೇ, ಬರೀ ನಾಚುತ್ತ ಮುಂದೆ ಸಾಗಿದರು. ಶಮಿತಾ ಶೆಟ್ಟಿ ಅವರು ‘ಬಿಗ್​ ಬಾಸ್​ ಹಿಂದಿ ಸೀಸನ್​ 15’ರಲ್ಲೂ ಸ್ಪರ್ಧಿಸುತ್ತಾರೆ ಎಂಬ ಮಾಹಿತಿ ಕೇಳಿಬಂದಿದೆ. ಅ.2ರಂದು ಆ ಶೋ ಆರಂಭ ಆಗಲಿದೆ. ಒಮ್ಮೆ ಬಿಗ್​ ಬಾಸ್​ ಮನೆ ಪ್ರವೇಶಿಸಿದರೆ ಮತ್ತೆ ಹೊರಬರುವುದು ಯಾವಾಗ ಎಂಬ ಬಗ್ಗೆ ಖಚಿತತೆ ಇರುವುದಿಲ್ಲ. ಹಾಗಾಗಿ ಅವರು ದೊಡ್ಮನೆಗೆ ತೆರಳುವುದಕ್ಕೂ ಮುನ್ನ ರಾಕೇಶ್​ ಜೊತೆ ಆಪ್ತವಾಗಿ ಸಮಯ ಕಳೆದಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:

ಶಮಿತಾ ಶೆಟ್ಟಿ-ರಾಕೇಶ್​ ಬಾಪಟ್​​ ಸಂಬಂಧಕ್ಕೆ ಮನೆಯವರ ಒಪ್ಪಿಗೆ? ಶಿಲ್ಪಾ ಶೆಟ್ಟಿ ತಾಯಿಯಿಂದ ಹೊಗಳಿಕೆ​

ಶಮಿತಾ ಶೆಟ್ಟಿ ಬಿಗ್​ ಬಾಸ್​ ಆಟ ಇನ್ನೂ ನಿಂತಿಲ್ಲ; ದೊಡ್ಮನೆಯಲ್ಲಿ ಮತ್ತೆ ಸೌಂಡು ಮಾಡಲಿರುವ ಶಿಲ್ಪಾ ತಂಗಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ