ಡ್ರಗ್​ ಕೇಸ್​ನಲ್ಲಿ ಖ್ಯಾತ ನಟನ ಗರ್ಲ್​ ಫ್ರೆಂಡ್​ ಸಹೋದರ ಅರೆಸ್ಟ್​

ಬಾಲಿವುಡ್​ ಡ್ರಗ್​ ಪ್ರಕರಣದಲ್ಲಿ ಈ ಮೊದಲು ಕೂಡ ಅಗಿಸಿಲಾವೋ ಹೆಸರು ಕೇಳಿ ಬಂದಿತ್ತು. ಈಗ ಮಾದಕ ದ್ರವ್ಯ ನಿಯಂತ್ರಣ ಮಂಡಳಿ ಅವರನ್ನು ಗೋವಾದಲ್ಲಿ ಅರೆಸ್ಟ್​ ಮಾಡಿದೆ. ಇ

ಡ್ರಗ್​ ಕೇಸ್​ನಲ್ಲಿ ಖ್ಯಾತ ನಟನ ಗರ್ಲ್​ ಫ್ರೆಂಡ್​ ಸಹೋದರ ಅರೆಸ್ಟ್​
ಅರ್ಜುನ್​ ರಾಮ್​ಪಾಲ್​ ಹಾಗೂ ಅವರ ಗರ್ಲ್​ಫ್ರೆಂಡ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Sep 26, 2021 | 6:31 PM

ಡ್ರಗ್​ ಕೇಸ್​ ಪ್ರಕರಣದಲ್ಲಿ ನಿತ್ಯ ಒಬ್ಬೊಬ್ಬ ಖ್ಯಾತ ವ್ಯಕ್ತಿಗಳು ಬಂಧನಕ್ಕೆ ಒಳಗಾಗುತ್ತಲೇ ಇದ್ದಾರೆ. ಈ ಪ್ರಕರಣದಲ್ಲಿ ಬಗೆದಷ್ಟು ಹೊಸಹೊಸ ವಿಚಾರಗಳು ಹೊರಗೆ ಬರುತ್ತಿವೆ. ಅನೇಕರನ್ನು ಈಗಾಗಲೇ ಬಂಧಿಸಿ ವಿಚಾರಣೆ ಮಾಡಲಾಗಿದೆ. ಈಗ ಬಾಲಿವುಡ್​ ನಟನ ಗರ್ಲ್​​ಫ್ರೆಂಡ್​ ಕುಟುಂಬದ ಸದಸ್ಯನ ಬಂಧನವಾಗಿದೆ. ಅರ್ಜುನ್​ ರಾಮ್​ಪಾಲ್​ ಹಾಗೂ ಗೇಬ್ರಿಯೆಲ್ಲಾ ಡಿಮೆಟ್ರೈಡ್ಸ್ ಪರಸ್ಪರ ಪ್ರೀತಿಸುತ್ತಿದ್ದಾರೆ. ಇವರು ಸಾಕಷ್ಟು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಕೂಡ. ಈಗ ಗೇಬ್ರಿಯಾಲ್ ಸಹೋದರ ಅಗಿಸಿಲಾವೋ ಅವರನ್ನು ಪೊಲೀಸರು ಡ್ರಗ್​ ಕೇಸ್​ನಲ್ಲಿ ಅರೆಸ್ಟ್​ ಮಾಡಿದ್ದಾರೆ. ಸದ್ಯ, ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.  

ಬಾಲಿವುಡ್​ ಡ್ರಗ್​ ಪ್ರಕರಣದಲ್ಲಿ ಈ ಮೊದಲು ಕೂಡ ಅಗಿಸಿಲಾವೋ ಹೆಸರು ಕೇಳಿ ಬಂದಿತ್ತು. ಈಗ ಮಾದಕ ದ್ರವ್ಯ ನಿಯಂತ್ರಣ ಮಂಡಳಿ ಅವರನ್ನು ಗೋವಾದಲ್ಲಿ ಅರೆಸ್ಟ್​ ಮಾಡಿದೆ. ಇವರ ಬಳಿ ಡ್ರಗ್ಸ್​  ಸಿಕ್ಕಿದೆ ಎನ್ನಲಾಗಿದೆ. ಡ್ರಗ್​ ಪೆಡ್ಲರ್​ಗಳನ್ನು ಅರೆಸ್ಟ್​ ಮಾಡುವ ಉದ್ದೇಶದಿಂದ ಎನ್​ಸಿಬಿ ಅಧಿಕಾರಿಗಳು ಶನಿವಾರ ಕಾರ್ಯಚರಣೆ ನಡೆಸಿದ್ದರು. ಈ ವೇಳೆ ಅಗಿಸಿಲಾವೋ ಬಂಧನವಾಗಿದೆ. ಅವರು ಡ್ರಗ್ಸ್​ ಸಮೇತ ಸಿಕ್ಕಿ ಬಿದ್ದಿರುವುದರಿಂದ ಜೈಲಿನಿಂದ ಹೊರ ಬರುವುದು ಕಷ್ಟ ಎನ್ನಲಾಗುತ್ತಿದೆ.

ಅಗಿಸಿಲಾವೋ ವಿರುದ್ಧ ದಾಖಲಾಗುತ್ತಿರುವ ಮೂರನೇ ಪ್ರಕರಣ ಇದಾಗಿದೆ. ಈ ಮೊದಲು ಕೂಡ ಕೆಲ ಪ್ರಕರಣಗಳು ಅಗಿಸಿಲಾವೋ ವಿರುದ್ಧ ದಾಖಲಾಗಿದೆ. ಈಗ ಅವರನ್ನು ಕೋರ್ಟ್​ ಮುಂದೆ ಹಾಜರು ಪಡಿಸಲಾಗಿದ್ದು, ಎರಡು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೆ ವಿಧಿಸಿ ಕೋರ್ಟ್​ ಆದೇಶ ಹೊರಡಿಸಿದೆ.

ಹಲವು ಡ್ರಗ್​ ಪೆಡ್ಲರ್​ಗಳು ಈಗಾಗಲೇ ಸಿಕ್ಕಿ ಬಿದ್ದಿದ್ದಾರೆ. ಇವರಿಂದಾಗಿ ಬಾಲಿವುಡ್​ನ ಸಾಕಷ್ಟು ನಟ-ನಟಿಯರ ಹೆಸರು ಮುನ್ನೆಲೆಗೆ ಬಂದಿದೆ. ಈಗಾಗಲೇ ಹಲವರು ವಿಚಾರಣೆಗೆ ಒಳಪಟ್ಟಿದ್ದಾರೆ. ಸ್ಯಾಂಡಲ್​ವುಡ್​ನ ಕೆಲವು ನಟಿಯರು ಬಂಧನಕ್ಕೂ ಒಳಗಾಗಿದ್ದಾರೆ.

ಇದನ್ನೂ ಓದಿ: ‘ಡ್ರಗ್ಸ್​ ಎಂಬುದು ಸಿನಿಮಾರಂಗಕ್ಕೆ ಸೀಮಿತ ಅಲ್ಲ, ಇದು ಟಿಆರ್​ಪಿ ವಿಷಯವಲ್ಲ’: ನಟ ಚೇತನ್​

Published On - 6:30 pm, Sun, 26 September 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್