AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಹ ತೂಕ ಹೆಚ್ಚಿಸಿಕೊಂಡು ಇಕ್ಕಟ್ಟಿಗೆ ಸಿಲುಕಿದ ಕಂಗನಾ; ಸಮಸ್ಯೆಯ ಇಂಚಿಂಚು ಮಾಹಿತಿ ಬಿಚ್ಚಿಟ್ಟ ನಟಿ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಜೀವನ ಆಧರಿಸಿ ಸಿದ್ಧಗೊಂಡಿರುವ ‘ತಲೈವಿ’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸೋತಿದೆ. ಇದಕ್ಕೆ ಕಾರಣಗಳು ಹಲವು.

ದೇಹ ತೂಕ ಹೆಚ್ಚಿಸಿಕೊಂಡು ಇಕ್ಕಟ್ಟಿಗೆ ಸಿಲುಕಿದ ಕಂಗನಾ; ಸಮಸ್ಯೆಯ ಇಂಚಿಂಚು ಮಾಹಿತಿ ಬಿಚ್ಚಿಟ್ಟ ನಟಿ
ಕಂಗನಾ ರಣಾವತ್
TV9 Web
| Edited By: |

Updated on: Sep 27, 2021 | 5:51 PM

Share

ಕಂಗನಾ ರಣಾವತ್​ ಅವರು ‘ತಲೈವಿ’ ಚಿತ್ರಕ್ಕಾಗಿ ಬರೋಬ್ಬರಿ 20 ಕೆಜಿ ದೇಹದ ತೂಕ ಹೆಚ್ಚಿಸಿಕೊಂಡಿದ್ದರು. ಅದು ಕೇವಲ ಆರು ತಿಂಗಳ ಅವಧಿಯಲ್ಲಿ. ನಂತರ ಮುಂದಿನ ಆರು ತಿಂಗಳ ಅವಧಿಯಲ್ಲಿ ಮತ್ತೆ ದೇಹದ ತೂಕ ಇಳಿಸಿಕೊಂಡಿದ್ದರು. ಇದರಿಂದ ಕಂಗನಾ ರಣಾವತ್​ ಸಾಕಷ್ಟು ತೊಂದರೆ ಎದುರಿಸಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಜೀವನ ಆಧರಿಸಿ ಸಿದ್ಧಗೊಂಡಿರುವ ‘ತಲೈವಿ’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸೋತಿದೆ. ಇದಕ್ಕೆ ಕಾರಣಗಳು ಹಲವು. ಆದರೆ, ಕಂಗನಾ ರಣಾವತ್​ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಸಿನಿಮಾ ಮೇಕಿಂಗ್​ ಬಗ್ಗೆಯೂ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಕಂಗನಾ ಈ ಸಿನಿಮಾಗಾಗಿ ತೂಕ ಹೆಚ್ಚಿಸಿಕೊಂಡಿದ್ದರು. ಆದರೆ, ಇದರಿಂದ ಅವರು ಇಕ್ಕಟ್ಟಿಗೆ ಸಿಲುಕಿದ್ದಾರೆ.

‘6 ತಿಂಗಳಲ್ಲಿ 20 ಕೆಜಿ ತೂಕ ಹೆಚ್ಚಿಸಿಕೊಂಡೆ ಮತ್ತೆ 6 ತಿಂಗಳಲ್ಲಿ ಮೊದಲಿನ ಸ್ಥಿತಿಗೆ ಬಂದೆ. ನನ್ನ ದೇಹದಲ್ಲಿ ಅನೇಕ ವಿಷಯಗಳನ್ನು ಇದು ಕೆಡಿಸಿದೆ. ನನ್ನ ದೇಹದ ಮೇಲೆ ಶಾಶ್ವತ ಸ್ಟ್ರೆಚ್​ ಮಾರ್ಕ್​ಗಳು ಮೂಡಿವೆ. ಆದರೆ, ಕಲಾವಿದೆಯಾಗಿ ನನಗೆ ಕಲೆ ಮುಖ್ಯ’ ಎಂದು ಅವರು ಬರೆದುಕೊಂಡಿದ್ದಾರೆ.

‘ತಲೈವಿ’ ಸಿನಿಮಾ ಸಂಪೂರ್ಣವಾಗಿ ಜಯಲಲಿತಾ ಜೀವನ ಕಥೆ ಆಧರಿಸಿ ಇದೆ. ಜಯಲಲಿತಾ ಚಿತ್ರರಂಗಕ್ಕೆ ಬಂದಿದ್ದು ಹೇಗೆ? ಅವರು ನಂತರ ಹೇಗೆ ರಾಜಕೀಯಕ್ಕೆ ಬಂದರು? ಹೇಗೆ ಸಿಎಂ ಆದರು? ಎನ್ನುವುದನ್ನು ಈ ಬಯೋಪಿಕ್​ನಲ್ಲಿ ಹೇಳಲಾಗಿತ್ತು. ಜಯಲಲಿತಾ ಮುಖ್ಯಮಂತ್ರಿ ಆದ ನಂತರ ಸಿನಿಮಾ ಪೂರ್ಣಗೊಂಡಿತ್ತು. ಇದು ಅನೇಕರಿಗೆ ಬೇಸರ ತರಿಸಿತ್ತು. ‘ತಲೈವಿ’ ಸಿನಿಮಾದಲ್ಲಿ ಜಯಲಲಿತಾ ಬಣ್ಣದ ಬದುಕಿನ ಬಗ್ಗೆ ಹೆಚ್ಚು ತೋರಿಸಲಾಗಿದೆ. ರಾಜಕೀಯ ಬದುಕನ್ನು ಹೆಚ್ಚು ಹೈಲೈಟ್​ ಮಾಡಿಲ್ಲ ಎನ್ನುವ ಮಾತುಗಳು ಕೇಳಿ ಬಂದಿತ್ತು. ಇದಕ್ಕೆ ನಿರ್ದೇಶಕರು ‘ತಲೈವಿ 2’ ಮೂಲಕ ಪ್ರೇಕ್ಷಕರ ಎದುರು ಬರೋಕೆ ರೆಡಿ ಆಗಿದ್ದಾರೆ. ಇದಕ್ಕಾಗಿ ಕಂಗನಾ ಮತ್ತೆ ತೂಕ ಹೆಚ್ಚಿಸಿಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ಓಟಿಟಿಗೆ ಬಂತು ‘ತಲೈವಿ’; ಚಿತ್ರಮಂದಿರದಲ್ಲಿ ಸೋತ ಕಂಗನಾ ಸಿನಿಮಾಗೆ ನೆಟ್​ಫ್ಲಿಕ್ಸ್​ನಲ್ಲಿ ಸಿಗುತ್ತಾ ಜಯ?

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್