AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀ ಸಂಸ್ಥೆಯ ಮೇಲೆ ಭಾರಿ ದಂಡ ಮತ್ತು ನಿಷೇಧ ಹೇರಿದ ವಿಧಿಸಿದ ಸೆಬಿ

Zee entertainment: ಜೀ ಸಂಸ್ಥೆ ಭಾರತದ ಬಲು ಜನಪ್ರಿಯ ಮತ್ತು ಬಹು ದೊಡ್ಡ ಎಂಟರ್ಟೈನ್​​ಮೆಂಟ್ ಸಂಸ್ಥೆ. ಹಲವಾರು ಭಾಷೆಗಳಲ್ಲಿ ಜನಪ್ರಿಯ ಟಿವಿ ಚಾನೆಲ್ಗಳು, ಸಿನಿಮಾ ನಿರ್ಮಾಣ ಸಂಸ್ಥೆ, ಒಟಿಟಿ, ಮಾಧ್ಯಮ ಸಂಸ್ಥೆ, ಮ್ಯೂಸಿಕ್ ಸಂಸ್ಥೆ ಇನ್ನೂ ಹಲವನ್ನು ಜೀ ಹೊಂದಿದೆ. ಆದರೆ ಇದೀಗ ಜೀ ಎಂಟರ್ಟೈನ್​​ಮೆಂಟ್ ಮೇಲೆ ಸೆಬಿಯು ಭಾರಿ ದೊಡ್ಡ ದಂಡವನ್ನು ಹಾಕಿರವುದು ಮಾತ್ರವಲ್ಲದೆ ಜೀ ಸಂಸ್ಥೆಗೆ ನಿಷೇಧವನ್ನು ಸಹ ಹೇರಿದೆ.

ಜೀ ಸಂಸ್ಥೆಯ ಮೇಲೆ ಭಾರಿ ದಂಡ ಮತ್ತು ನಿಷೇಧ ಹೇರಿದ ವಿಧಿಸಿದ ಸೆಬಿ
Zeel
ಮಂಜುನಾಥ ಸಿ.
|

Updated on:Aug 02, 2026 | 4:31 PM

Share

ಮುಖ್ಯಾಂಶಗಳು

  • ಜೀ ಎಂಟರ್ಟೈಟ್​​ಮೆಂಟ್ ಸಂಸ್ಥೆ ಇಕ್ಕಟ್ಟಿಗೆ ಸಿಲುಕಿದೆ.
  • ದೊಡ್ಡ ಮನೊರಂಜನಾ ಸಂಸ್ಥೆಯ ಮೇಲೆ ಭಾರಿ ದಂಡ ಮತ್ತು ನಿಷೇಧ ಹೇರಲಾಗಿದೆ.
  • ಜೀ ಸಂಸ್ಥೆಯ ವಿರುದ್ಧ ಸೆಬಿ ದೊಡ್ಡ ಮೊತ್ತದ ದಂಡ ಹೇರಿದೆ.

ಜೀ ಸಂಸ್ಥೆ (ZEEL) ಭಾರತದ ಬಲು ಜನಪ್ರಿಯ ಮತ್ತು ಬಹು ದೊಡ್ಡ ಎಂಟರ್ಟೈನ್​​ಮೆಂಟ್ ಸಂಸ್ಥೆ. ಹಲವಾರು ಭಾಷೆಗಳಲ್ಲಿ ಜನಪ್ರಿಯ ಟಿವಿ ಚಾನೆಲ್ಗಳು, ಸಿನಿಮಾ ನಿರ್ಮಾಣ ಸಂಸ್ಥೆ, ಒಟಿಟಿ, ಮಾಧ್ಯಮ ಸಂಸ್ಥೆ, ಮ್ಯೂಸಿಕ್ ಸಂಸ್ಥೆ ಇನ್ನೂ ಹಲವನ್ನು ಜೀ ಹೊಂದಿದೆ. ಆದರೆ ಇದೀಗ ಜೀ ಎಂಟರ್ಟೈನ್​​ಮೆಂಟ್ ಮೇಲೆ ಸೆಬಿಯು ಭಾರಿ ದೊಡ್ಡ ದಂಡವನ್ನು ಹಾಕಿರವುದು ಮಾತ್ರವಲ್ಲದೆ ಜೀ ಸಂಸ್ಥೆಗೆ ನಿಷೇಧವನ್ನು ಸಹ ಹೇರಿದೆ.

ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI), ಭದ್ರತಾ ಕಾನೂನುಗಳ ಉಲ್ಲಂಘನೆ ಮತ್ತು ಅಧಿಕೃತ ಅನುಮತಿಯಿಲ್ಲದೆ ಕಂಪನಿಯ ಆಸ್ತಿಯನ್ನು ಅಡಮಾನವಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 1.48 ಕೋಟಿ ರೂಪಾಯಿಗಳ (14.8 ಮಿಲಿಯನ್ ರೂಪಾಯಿ) ಭಾರಿ ದಂಡವನ್ನು ‘ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್’ ಗೆ ವಿಧಿಸಿದೆ. ಅಲ್ಲದೆ ಕಂಪೆನಿ ಮತ್ತು ಅದರ ಕೆಲವು ಪ್ರಮುಖರ ಮೇಲೆ ನಿಷೇಧವನ್ನು ಹೇರಿದೆ.

ಏನಿದು ಪ್ರಕರಣ?

ಹೈದರಾಬಾದ್‌ನಲ್ಲಿರುವ ಝೀ ಎಂಟರ್‌ಟೈನ್‌ಮೆಂಟ್ ಕಂಪನಿಗೆ ಸೇರಿದ ಭೂಮಿಯನ್ನು, ಎಸೆಲ್ ಗ್ರೂಪ್‌ನ (Essel Group) ಇತರೆ ಕಂಪನಿಗಳು ಪಡೆದಿದ್ದ ಸುಮಾರು 726 ಕೋಟಿ ರೂ.ಗಳ ಸಾಲಕ್ಕೆ ಯಾವುದೇ ಅಧಿಕೃತ ಅನುಮೋದನೆ ಪಡೆಯದೆ ಹೆಚ್ಚುವರಿ ಭದ್ರತೆಯಾಗಿ (ಕೊಲ್ಯಾಟರಲ್) ಅಡಮಾನವಿಡಲಾಗಿತ್ತು. ಈ ಸಂಬಂಧ ನಡೆಸಿದ ಸುದೀರ್ಘ ತನಿಖೆಯ ಬಳಿಕ ಸೆಬಿ ಶುಕ್ರವಾರ ರಾತ್ರಿ ಸುಮಾರು 150 ಪುಟಗಳ ಅಂತಿಮ ಆದೇಶವನ್ನು ಹೊರಡಿಸಿದೆ. ಆದೇಶದಂತೆ ‘ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್’ (ZEEL) ದಂಡದ ಜೊತೆಗೆ ನಿರ್ದಿಷ್ಟ ಅವಧಿಯ ವರೆಗೆ ನಿಷೇಧವನ್ನು ಸಹ ಹೇರಲಾಗಿದೆ.

ಇದನ್ನೂ ಓದಿ:ಅತಿಯಾಗಿ ಟಿವಿ ನೋಡ್ತೀರಾ?: ನಿಮ್ಮ ಮೆದುಳು ಕುಗ್ಗಬಹುದು ಹುಷಾರ್!; ಸಂಶೋಧನೆಯಲ್ಲಿ ಬೆಚ್ಚಿಬೀಳಿಸುವ ಸತ್ಯ

ಜೀ ಎಂಟರ್ಟೈನ್​​ಮೆಂಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (MD & CEO) ಪುನೀತ್ ಗೋಯೆಂಕಾ ಮತ್ತು ಸಂಸ್ಥೆಯ ಸ್ಥಾಪಕ ಹಾಗೂ ಅಧ್ಯಕ್ಷ ಎಮೆರಿಟಸ್ ಸುಭಾಷ್ ಚಂದ್ರ ಅವರಿಗೆ ಸೆಬಿ ಮಾರುಕಟ್ಟೆಯಲ್ಲಿ ವಹಿವಾಟು ನಡೆಸದಂತೆ ಒಂದು ವರ್ಷದ ಕಾಲಾವಧಿಗೆ ನಿರ್ಬಂಧ ವಿಧಿಸಿದೆ. ಕಂಪನಿಗೂ ಕೂಡ ಎರಡು ತಿಂಗಳ ಕಾಲ ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ನಿಷೇಧ ಹೇರಲಾಗಿದೆ.

ಕಂಪನಿಯ ಆಸ್ತಿಗಳನ್ನು ಹೂಡಿಕೆದಾರರ ಹಿತಾಸಕ್ತಿಗೆ ವಿರುದ್ಧವಾಗಿ, ಸರಿಯಾದ ಷೇರುದಾರರ ಅಥವಾ ಆಡಿಟ್ ಸಮಿತಿಯ ಅನುಮೋದನೆ ಪಡೆಯದೆ ಪ್ರಮೋಟರ್‌ಗಳ ಸ್ವಾರ್ಥಕ್ಕಾಗಿ ಬಳಸಿಕೊಳ್ಳಲಾಗಿದೆ ಎಂದು ಸೆಬಿ ಮಾಡಿರುವ ತನಿಖೆಯಿಂದ ತಿಳಿದುಬಂದಿದೆ. ನಿಯಮಗಳನ್ನು ಗಾಳಿಗೆ ತೂರಿ ಎಸೆಲ್ ಗ್ರೂಪ್‌ನ ಘಟಕಗಳಿಗೆ ನೆರವಾಗಲು ಕಂಪನಿಯ ಆಸ್ತಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಸೆಬಿ ತನ್ನ ಆದೇಶದಲ್ಲಿ ಕಟುವಾಗಿ ಟೀಕಿಸಿದೆ.

ಜೀ ಎಂಟರ್‌ಟೈನ್‌ಮೆಂಟ್ (ZEEL)ಗೆ 30 ಲಕ್ಷ ರೂಪಾಯಿ ದಂಡ ಮತ್ತು 2 ತಿಂಗಳು ಷೇರು ಮಾರುಕಟ್ಟೆ ನಿಷೇಧ. ಸಂಸ್ಥೆಯ ಸಂಸ್ಥಾಪಕ ಮತ್ತು ಚೇರ್​​ಮನ್ ಸುಭಾಷ್ ಚಂದ್ರ ಅವರಿಗೆ 60 ಲಕ್ಷ ರೂ. ದಂಡ ಮತ್ತು 1 ವರ್ಷ ಷೇರು ಮಾರುಕಟ್ಟೆಯಿಂದ ನಿಷೇಧ. ಸಂಸ್ಥೆಯ ವ್ಯವಸ್ಥಾಪಕ ಮತ್ತು ಸಿಇಓ ಪುನೀತ್ ಗೋಯೆಂಕಾ ಅವರಿಗೆ 58 ಲಕ್ಷ ರೂಪಾಯಿ ದಂಡ ಮತ್ತು 1 ವರ್ಷ ಷೇರು ಮಾರುಕಟ್ಟೆಗೆ ನಿಷೇಧವನ್ನು ಸೆಬಿ ಹೇರಿದೆ.

‘ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್’ ಷೇರು ದರ ಈಗ 114.8 ರೂಪಾಯಿಗಳಿದೆ. ಸೋಮವಾರ ಮಾರುಕಟ್ಟೆ ತೆರೆದ ಬಳಿಕ ಷೇರು ದರ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ಜೀ ಮೀಡಿಯಾ ಕಾರ್ಪೊರೇಷನ್ ಲಿಮಿಟೆಡ್​​ನ ಷೇರು ದರ 7.54 ರೂಪಾಯಿಗಳಿದೆ. ಕಳೆದ ಕೆಲವು ವರ್ಷಗಳಿಂದಲೂ ಈ ಷೇರು ಕಳಪೆ ಪ್ರದರ್ಶನವನ್ನೇ ತೋರುತ್ತಾ ಬಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:25 pm, Sun, 2 August 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಭೀಕರ ಜಲ ಸಂಕಷ್ಟ: ರಾಯಚೂರು, ಕಲಬುರಗಿ, ಬೀದರಲ್ಲಿ ಕುಡಿಯುವ ನೀರಿಗಾಗಿ ಪರದಾಟ
ಭೀಕರ ಜಲ ಸಂಕಷ್ಟ: ರಾಯಚೂರು, ಕಲಬುರಗಿ, ಬೀದರಲ್ಲಿ ಕುಡಿಯುವ ನೀರಿಗಾಗಿ ಪರದಾಟ
RSS ಪಥಸಂಚಲನಕ್ಕೆ ಸಿದ್ಧತೆ: ಕೆಲವೆಡೆ ಷರತ್ತುಬದ್ಧ ಅನುಮತಿ; ಕೆಲವೆಡೆ ನಕಾರ
RSS ಪಥಸಂಚಲನಕ್ಕೆ ಸಿದ್ಧತೆ: ಕೆಲವೆಡೆ ಷರತ್ತುಬದ್ಧ ಅನುಮತಿ; ಕೆಲವೆಡೆ ನಕಾರ
‘ಪ್ರೇಮದ ಊರಲಿ’ ಸಿನಿಮಾ ಸಂಗೀತ ನಿರ್ದೇಶಕರಿಗೆ ಸಿಕ್ಕ ಸಂಭಾವನೆ ಎಷ್ಟು?
‘ಪ್ರೇಮದ ಊರಲಿ’ ಸಿನಿಮಾ ಸಂಗೀತ ನಿರ್ದೇಶಕರಿಗೆ ಸಿಕ್ಕ ಸಂಭಾವನೆ ಎಷ್ಟು?
ದೊಡ್ಡಬಳ್ಳಾಪುರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಲಘು ಭೂಕಂಪನ
ದೊಡ್ಡಬಳ್ಳಾಪುರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಲಘು ಭೂಕಂಪನ
ಸುದೀಪ್ ಮಾತಿಗೆ ಕಣ್ಣೀರಿಟ್ಟ ತಾಂಡವ್, ಕುಣಿದಾಡಿದ ಸೌಂದರ್ಯಾ: ವಿಡಿಯೋ
ಸುದೀಪ್ ಮಾತಿಗೆ ಕಣ್ಣೀರಿಟ್ಟ ತಾಂಡವ್, ಕುಣಿದಾಡಿದ ಸೌಂದರ್ಯಾ: ವಿಡಿಯೋ
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ