ನನ್ನ ಮದುವೆ ಆಗಿಹೋಗಿದೆ ಅಂತ ಎಲ್ಲರೂ ಹೇಳ್ತಾ ಇದಾರೆ ಎಂದ ಅರವಿಂದ್​ ಕೆಪಿ; ದಿವ್ಯಾ ರಿಯಾಕ್ಷನ್​ ಹೇಗಿತ್ತು?

TV9kannada Web Team

TV9kannada Web Team | Edited By: Rajesh Duggumane

Updated on: Oct 10, 2021 | 2:03 PM

ಸೆಲೆಬ್ರಿಟಿ ಪಟ್ಟ ಸಿಕ್ಕ ನಂತರದಲ್ಲಿ ಅದರ ಜೊತೆಜೊತೆಗೆ ವದಂತಿಗಳು ಹಾಗೂ ಸುಳ್ಳುಸುದ್ದಿಗಳೂ ಅಂಟಿಕೊಳ್ಳುತ್ತವೆ. ಮದುವೆ ವಿಚಾರ, ಪ್ರೀತಿ ವಿಚಾರ, ಕೌಟುಂಬಿಕ ವಿಚಾರದಲ್ಲಿ ಒಂದಷ್ಟು ಸುದ್ದಿಗಳು ಹುಟ್ಟಿಕೊಳ್ಳುತ್ತವೆ. ನ

ನನ್ನ ಮದುವೆ ಆಗಿಹೋಗಿದೆ ಅಂತ ಎಲ್ಲರೂ ಹೇಳ್ತಾ ಇದಾರೆ ಎಂದ ಅರವಿಂದ್​ ಕೆಪಿ; ದಿವ್ಯಾ ರಿಯಾಕ್ಷನ್​ ಹೇಗಿತ್ತು?
ಅರವಿಂದ್​ ಕೆಪಿ-ದಿವ್ಯಾ

ಅರವಿಂದ್​ ಕೆ.ಪಿ. ಹಾಗೂ ದಿವ್ಯಾ ಉರುಡುಗ ಬಿಗ್​ ಬಾಸ್ ಕನ್ನಡ ಸೀಸನ್​ 8ರಲ್ಲಿ ತುಂಬಾನೇ ಕ್ಲೋಸ್​ ಆದರು. ಅರವಿಂದ್​ ಅವರ ಕಾರ್ಯಕ್ಷೇತ್ರವೇ ಬೇರೆ, ದಿವ್ಯಾ ಅವರ ಕಾರ್ಯಕ್ಷೇತ್ರವೇ ಬೇರೆ. ಆದರೂ ಇಬ್ಬರೂ ಒಂದು ಕಡೆ ಸೇರೋಕೆ ವೇದಿಕೆ ಮಾಡಿಕೊಟ್ಟಿದ್ದು ಬಿಗ್​ ಬಾಸ್​. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಬೆಳೆದು ನಂತರ ಪ್ರೀತಿ ಹುಟ್ಟಿತ್ತು. ಇದನ್ನು ಇಬ್ಬರೂ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಮದುವೆ ವಿವಾರದಲ್ಲಿ ಮಾತ್ರ ಇವರು ಮೌನ ತಾಳಿದ್ದಾರೆ. ಎಲ್ಲಿಯೂ ಅವರು ಗುಟ್ಟುಬಿಟ್ಟುಕೊಟ್ಟಿಲ್ಲ. ಆದರೆ, ಇವರ ಮದುವೆ ಆಗಿಯೇ ಹೋಗಿದೆ ಎನ್ನುವ ಗಾಸಿಪ್​ ಹರಿದಾಡುತ್ತಿದೆಯಂತೆ. ಈ ಬಗ್ಗೆ ಅರವಿಂದ್​ ಹೇಳಿಕೊಂಡಿದ್ದಾರೆ.

ಸೆಲೆಬ್ರಿಟಿ ಪಟ್ಟ ಸಿಕ್ಕ ನಂತರದಲ್ಲಿ ಅದರ ಜೊತೆಜೊತೆಗೆ ವದಂತಿಗಳು ಹಾಗೂ ಸುಳ್ಳುಸುದ್ದಿಗಳೂ ಅಂಟಿಕೊಳ್ಳುತ್ತವೆ. ಮದುವೆ ವಿಚಾರ, ಪ್ರೀತಿ ವಿಚಾರ, ಕೌಟುಂಬಿಕ ವಿಚಾರದಲ್ಲಿ ಒಂದಷ್ಟು ಸುದ್ದಿಗಳು ಹುಟ್ಟಿಕೊಳ್ಳುತ್ತವೆ. ನಟ-ನಟಿಯರಿಗೆ ಅದನ್ನು ನಿಭಾಯಿಸಿಕೊಂಡು ಹೋಗೋದು ಅನಿವಾರ್ಯ. ಈಗ ಅರವಿಂದ್​ ಅವರಿಗೂ ಅದೇ ರೀತಿ ಆಗಿದೆ.

ತಾಜಾ ಸುದ್ದಿ

ಅರವಿಂದ್​ ಅವರು ಕಲರ್ಸ್​ ಕನ್ನಡದ ಕಲರ್​​ಫುಲ್​ ವೇದಿಕೆ ಅನುಬಂಧಕ್ಕೆ ಆಗಮಿಸಿದ್ದಾರೆ. ದಿವ್ಯಾ ಉರುಡುಗ ಕೂಡ ಇವರಿಗೆ ಜೊತೆಯಾಗಿದ್ದಾರೆ. ಮೂರು ದಿನಗಳ ಕಾಲ ನಡೆದ ಈ ಕಾರ್ಯಕ್ರಮದ ಶೂಟಿಂಗ್​​ ಈಗಾಲೇ ಪೂರ್ಣಗೊಂಡಿದ್ದು, ಮುಂದಿನ ವಾರಾಂತ್ಯದಲ್ಲಿ ಪ್ರಸಾರವಾಗಲಿದೆ. ಈ ಪ್ರೋಮೋಗಳನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಳ್ಳುತ್ತಿದೆ.

ಅರವಿಂದ್ ಕೆ.ಪಿ. ಹಾಗೂ ದಿವ್ಯಾ ಉರುಡುಗ ಅವರು ಅನುಬಂಧ ಅವಾರ್ಡ್ಸ್​​ನಲ್ಲಿ ಆಯೋಜಿಸಿದ್ದ ಕೆಂಪು ಹಾಸಿನ ಮೇಲೆ ನಡೆದಿದ್ದಾರೆ. ಈ ವೇಳೆ ಅವರಿಗೆ ಪ್ರಶ್ನೆ ಒಂದು ಎದುರಾಯಿತು. ಅರವಿಂದ್​ ಅವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಇದೆ ಹೌದಾ ಎಂದು ನಿರೂಪಕಿ ಕೇಳಿದರು. ಹಾಗೇ ಹೇಳೋದಾದ್ರೆ ನನ್ನ ಮದುವೆ ಕೂಡ ಆಗಿದೆ ಎಂದು ಎಲ್ಲರೂ ಹೇಳ್ತಾ ಇದಾರೆ ಎಂದರು ಅರವಿಂದ್​.  ಈ ಮೂಲಕ ಈ ಸುದ್ದಿ ಫೇಕ್​ ಎಂದರು. ಅರವಿಂದ್ ಹೀಗೆ ಹೇಳುತ್ತಿದ್ದಂತೆ ದಿವ್ಯಾ ನಕ್ಕರು.

ಇದನ್ನೂ ಓದಿ: ‘ಮದುವೆ ಯಾವಾಗ’ ಎನ್ನುವ ಪ್ರಶ್ನೆಗೆ ದಿವ್ಯಾ ಉರುಡುಗ ಪಕ್ಕದಲ್ಲೇ ನಿಂತು ಉತ್ತರಿಸಿದ ಅರವಿಂದ್​ ಕೆಪಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada