ಪ್ಯಾನ್ ಇಂಡಿಯಾ ಚಿತ್ರಗಳಿಂದ ಏರುತ್ತಲೇ ಇದೆ ಟಾಲಿವುಡ್ ನಟರ ಸಂಭಾವನೆ; ಪ್ರಭಾಸ್, ರಾಮ್ ಚರಣ್ ಪಡೆಯೋದು ಇಷ್ಟೊಂದಾ?

Prabhas | Ram Charan: ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಟಾಲಿವುಡ್ ನಟರಿಗೆ ಬೇಡಿಕೆ ಹೆಚ್ಚಾದಂತೆ ಸಂಭಾವನೆಯಲ್ಲೂ ವಿಪರೀತ ಏರಿಕೆಯಾಗಿದೆ. ಪ್ರಭಾಸ್ ಅಂತೂ ಪ್ರತೀ ಚಿತ್ರಕ್ಕೆ ₹ 100 ಕೋಟಿ ಪಡೆಯುತ್ತಿದ್ದು, ಮುಂದೆ ಒಪ್ಪಿಕೊಳ್ಳುವ ಚಿತ್ರಗಳಿಗೆ ಮತ್ತೆ ₹ 50 ಕೋಟಿ ಸಂಭಾವನೆ ಹೆಚ್ಚಿಸಲಿದ್ದಾರೆ ಎಂಬ ಮಾಹಿತಿ ಇದೆ. ನಟ ರಾಮ್ ಚರಣ್ ಬೇಡಿಕೆಯೂ ಹೆಚ್ಚಾಗಿದ್ದು, ಅವರೂ ಪ್ರಭಾಸ್ ಸಾಲಿನಲ್ಲಿದ್ದಾರೆ.

ಪ್ಯಾನ್ ಇಂಡಿಯಾ ಚಿತ್ರಗಳಿಂದ ಏರುತ್ತಲೇ ಇದೆ ಟಾಲಿವುಡ್ ನಟರ ಸಂಭಾವನೆ; ಪ್ರಭಾಸ್, ರಾಮ್ ಚರಣ್ ಪಡೆಯೋದು ಇಷ್ಟೊಂದಾ?
ಪ್ರಭಾಸ್, ರಾಮ್ ಚರಣ್

ಟಾಲಿವುಡ್ ನಟರ ಸಂಭಾವನೆಯ ವಿಚಾರ ಇತ್ತೀಚೆಗೆ ಸಾಕಷ್ಟು ಸುದ್ದಿಯಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹುದೊಡ್ಡ ಹಿಟ್ ಚಿತ್ರಗಳನ್ನು ನೀಡಿದ ಪ್ರಭಾಸ್ ಸದ್ಯ ಭಾರತದಲ್ಲಿಯೇ ಮುಂಚೂಣಿಯಲ್ಲಿರುವ ನಟರಲ್ಲಿ ಒಬ್ಬರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದ್ದರಿಂದಲೇ ತೆಲುಗಿನಲ್ಲಿ ನಿಸ್ಸಂಶಯವಾಗಿ ಸಂಭಾವನೆಯ ವಿಚಾರದಲ್ಲಿ ಅವರೇ ಮೊದಲ ಸ್ಥಾನದಲ್ಲಿದ್ದಾರೆ. ಟಾಲಿವುಡ್ ಅಂಗಳದಿಂದ ಇತ್ತೀಚೆಗೆ ಕೇಳಿಬಂದ ಮಾಹಿತಿಗಳ ಪ್ರಕಾರ, ನಟ ರಾಮ್​ ಚರಣ್ ಕೂಡ ತಮ್ಮ ಸಂಭಾವನೆಯನ್ನು ಏರಿಸಿಕೊಂಡಿದ್ದಾರಂತೆ. ಈಗಾಗಲೇ ಪ್ಯಾನ್ ಇಂಡಿಯಾ ಚಿತ್ರವಾದ ‘ಆರ್​ಆರ್​ಆರ್’ ನಲ್ಲಿ ಕಾಣಿಸಿಕೊಂಡಿರುವ ರಾಮ್​ ಚರಣ್ ಮುಂದಿನ ಚಿತ್ರಗಳೂ ಅದೇ ಮಟ್ಟದಲ್ಲಿ ತಯಾರಾಗಲಿವೆ. ಆದ್ದರಿಂದಲೇ ಅವರ ಮಾರುಕಟ್ಟೆ ಮೌಲ್ಯ ಕುದುರಿದೆ ಎನ್ನುತ್ತವೆ ಮೂಲಗಳು.

ಮೂಲಗಳ ಪ್ರಕಾರ 41 ವರ್ಷದ ನಟ ಪ್ರಭಾಸ್ ತಮ್ಮ ಚಿತ್ರಗಳಿಗೆ ಸುಮಾರು ₹ 100 ಕೋಟಿ ಪಡೆಯುತ್ತಾರಂತೆ. ಈಗಾಗಲೇ ಅವರು ‘ರಾಧೆ ಶ್ಯಾಮ್’ ಚಿತ್ರದಲ್ಲಿ ನಟಿಸಿದ್ದು, ಬಿಡುಗಡೆಗೆ ತಯಾರಾಗಿದೆ. ಅದಲ್ಲದೇ, ‘ಸಲಾರ್’, ‘ಆದಿಪುರುಷ್’, ‘ಪ್ರಾಜೆಕ್ಟ್ ಕೆ’ ಮೊದಲಾದ ಚಿತ್ರಗಳಲ್ಲಿ ಅವರ ಬತ್ತಳಿಕೆಯಲ್ಲಿವೆ. ಇದಲ್ಲದೇ ಈ ವರ್ಷ ಪ್ರಭಾಸ್ ಮತ್ತೆರಡು ಚಿತ್ರಗಳನ್ನು ಅನೌನ್ಸ್ ಮಾಡಲಿದ್ದಾರೆ ಎಂಬ ಮಾಹಿತಿ ಇದೆ. ಅವುಗಳಲ್ಲಿ ‘ಅರ್ಜುನ್ ರೆಡ್ಡಿ’ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಒಂದು ಚಿತ್ರವೂ ಸೇರಿದೆ. ಆ ಚಿತ್ರಕ್ಕೆ ಪ್ರಭಾಸ್ ₹ 150 ಕೋಟಿ ಡಿಮ್ಯಾಂಡ್ ಮಾಡಿದ್ಧಾರಂತೆ. ಅಷ್ಟು ಮೊತ್ತವನ್ನು ನೀಡಲು ನಿರ್ಮಾಪಕರೂ ಕೂಡ ಮರುಮಾತಿಲ್ಲದೇ ಒಪ್ಪಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.

ಸದ್ಯಕ್ಕೆ ಕೇಳಿಬರುತ್ತಿರುವ ಮತ್ತೊಂದು ಅಚ್ಚರಿಯ ಮಾಹಿತಿ ನಟ ರಾಮ್ ಚರಣ್ ಸಂಭಾವನೆಯ ಕುರಿತು. ಟಾಲಿವುಡ್ ನಟರಲ್ಲಿ ಪ್ರಭಾಸ್ ಹೊರತುಪಡಿಸಿದರೆ ನಂತರದಲ್ಲಿ ರಾಮ್ ಚರಣ್ ಇದ್ದಾರೆ ಎಂಬ ಮಾಹಿತಿ ಇದೆ. ರಾಮ್ ಚರಣ್ ತಮ್ಮ ಮುಂದಿನ ಚಿತ್ರ ‘ಆರ್​ಸಿ 15’ಗೆ ₹ 80 ಕೋಟಿ ಡಿಮ್ಯಾಂಡ್ ಮಾಡಿದ್ದಾರಂತೆ. ಆ ಚಿತ್ರವನ್ನು ದಿಲ್​ರಾಜು ನಿರ್ಮಾಣ ಮಾಡುತ್ತಿದ್ದು, ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರ ಕೂಡ ಪ್ಯಾನ್ ಇಂಡಿಯಾ ಮಾದರಿಯಲ್ಲಿರಲಿದೆ. ಒಟ್ಟಿನಲ್ಲಿ ಚಿತ್ರಗಳಿಗೆ ಪ್ಯಾನ್ ಇಂಡಿಯಾ ಮಾದರಿ ಪರಿಚಯವಾದ ಮೇಲೆ, ನಟರು ಅಂತಹ ಚಿತ್ರಗಳತ್ತ ಹೆಚ್ಚು ಒಲವು ತೋರುತ್ತಿದ್ದು, ಅದಕ್ಕೆ ತಕ್ಕಂತೆ ದೊಡ್ಡ ಮೊತ್ತದ ಸಂಭಾವನೆಯನ್ನೂ ಪಡೆಯುತ್ತಿದ್ದಾರೆ.

ಇದನ್ನೂ ಓದಿ:

ವಿಕ್ರಾಂತ್ ರೋಣದ ಹಿಂದಿ ಡಬ್ಬಿಂಗ್ ಮುಗಿಸಿ ಸಂತಸ ಹಂಚಿಕೊಂಡ ನೀತಾ ಅಶೋಕ್; ಆದರೆ ಫ್ಯಾನ್ಸ್​​ಗೆ ಅಚ್ಚರಿ ನೀಡಿದ ವಿಷಯವೇ ಬೇರೆ!

ಪ್ರಭಾಸ್​ ಬಗ್ಗೆ ಹಬ್ಬಿದೆ 150 ಕೋಟಿ ರೂ. ಗಾಸಿಪ್​; ಸಂಬಳದ ವಿಷಯ ಕೇಳಿ ಹುಬ್ಬೇರಿಸಿದ ಫ್ಯಾನ್ಸ್​

Read Full Article

Click on your DTH Provider to Add TV9 Kannada