ರಾಜಮೌಳಿ ಅಬ್ಬರಕ್ಕೆ ಹೆದರಿದ ಟಾಲಿವುಡ್? ಈ ಸ್ಟಾರ್ ನಟರ ಸಿನಿಮಾ ರಿಲೀಸ್ ಡೇಟ್ ಮುಂದೂಡಿಕೆ
ರಾಜಮೌಳಿ ಎಲ್ಲಾ ನಿರ್ಮಾಪಕರ ಜತೆ ಮಾತುಕತೆ ನಡೆಸಿದ್ದಾರೆ. ಮಹೇಶ್ ಬಾಬು ಸಿನಿಮಾವನ್ನು ಬೇಸಿಗೆ ರಜೆಗೆ ರಿಲೀಸ್ ಮಾಡುವಂತೆ ಅವರು ಕೋರಿದ್ದಾರೆ.
ಎಸ್.ಎಸ್. ರಾಜಮೌಳಿ ನಿರ್ದೇಶನದ ಸಿನಿಮಾ ತೆರೆಗೆ ಬರುತ್ತದೆ ಎಂದರೆ ಅದರ ಸಮೀಪ ಯಾವುದೇ ಸಿನಿಮಾಗಳು ರಿಲೀಸ್ ಆಗುವುದಿಲ್ಲ. ರಾಜಮೌಳಿ ಸಿನಿಮಾಗಳ ಅದ್ದೂರಿತನ, ಅವರು ಸಿನಿಮಾ ಕಟ್ಟಿಕೊಡುವ ರೀತಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆ. ಹೀಗಾಗಿ ಈ ಸಂದರ್ಭದಲ್ಲಿ ಬೇರೆ ಸಿನಿಮಾ ರಿಲೀಸ್ ಆದರೆ ಕೈಸುಟ್ಟಿಕೊಳ್ಳುವುದು ಪಕ್ಕಾ ಅನ್ನೋದು ಬಹುತೇಕರಿಗೆ ಅರಿವಾಗಿದೆ. ಆದರೆ, ಈಗ ರಾಜಮೌಳಿ ಬೇರೆ ಸ್ಟಾರ್ ಸಿನಿಮಾಗಳ ಜತೆ ತಾವೇ ಕಾಂಪಿಟೇಷನ್ಗೆ ಇಳಿದಿದ್ದಾರೆ. ಇದರಿಂದ ಸಿನಿಮಾ ರಿಲೀಸ್ ಡೇಟ್ ಮುಂದೂಡುವು ಅನಿವಾರ್ಯತೆ ನಿರ್ಮಾಪಕರಿಗೆ ಬಂದಿದೆ.
ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾ ರಿಲೀಸ್ ಡೇಟ್ ಈಗಾಗಲೇ ಘೋಷಣೆ ಆಗಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಸಿನಿಮಾ ಜನವರಿ 13ರಂದು ತೆರೆಗೆ ಬರುತ್ತಿದೆ. ಬಿಗ್ ಬಜೆಟ್ ಸಿನಿಮಾ ಇದಾಗಿದ್ದು, ಈ ಬಗ್ಗೆ ಪ್ರೇಕ್ಷಕರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅಂದರೆ ಜನವರಿ 14ರಂದು ‘ರಾಧೆ ಶ್ಯಾಮ್’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಪ್ರಭಾಸ್ ನಟನೆಯ ಈ ಸಿನಿಮಾ ಕೂಡ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದೆ. ಪವನ್ ಕಲ್ಯಾಣ್ ಹಾಗೂ ರಾಣಾ ದಗ್ಗುಬಾಟಿ ಅಭಿನಯದ ‘ಭೀಮ್ಲಾ ನಾಯಕ್’ ಸಿನಿಮಾ ಜನವರಿ 12ರಂದು ರಿಲೀಸ್ ಆಗುತ್ತಿದೆ. ಆರ್ಆರ್ಆರ್ ಸಿನಿಮಾ ಜನವರಿ 7ರಂದು ತೆರೆಗೆ ಬರುತ್ತಿದೆ. ಇದರಿಂದ ಅತಿ ದೊಡ್ಡ ಬಾಕ್ಸ್ ಆಫೀಸ್ ಕ್ಲ್ಯಾಶ್ ಆಗುವ ಸಾಧ್ಯತೆ ಇದೆ ಎನ್ನಲಾಗಿತ್ತು.
ಆದರೆ, ರಾಜಮೌಳಿ ಎಲ್ಲಾ ನಿರ್ಮಾಪಕರ ಜತೆ ಮಾತುಕತೆ ನಡೆಸಿದ್ದಾರೆ. ಮಹೇಶ್ ಬಾಬು ಸಿನಿಮಾವನ್ನು ಬೇಸಿಗೆ ರಜೆಗೆ ರಿಲೀಸ್ ಮಾಡುವಂತೆ ಅವರು ಕೋರಿದ್ದಾರೆ. ಅದೇ ರೀತಿ ಪವನ್ ಕಲ್ಯಾಣ್ ಜತೆಗೂ ಮಾತುಕತೆ ನಡೆದಿದೆ. ಹೀಗಾಗಿ, ಪವನ್ ತಮ್ಮ ಸಿನಿಮಾವನ್ನು ಫೆಬ್ರವರಿ 24ರಂದು ತೆರೆಗೆ ತರಲು ನಿರ್ಧರಿಸಿದ್ದಾರಂತೆ. ಆದರೆ, ಪ್ರಭಾಸ್ ಸಿನಿಮಾ ತಂಡ ಮಾತ್ರ ಈ ಬೇಡಿಕೆಗೆ ಒಪ್ಪಿಗೆ ನೀಡಿಲ್ಲ. ಹೀಗಾಗಿ, ಈ ಸಿನಿಮಾ ರಿಲೀಸ್ ಜನವರಿಯಲ್ಲೇ ರಿಲೀಸ್ ಆಗೋದು ಪಕ್ಕಾ ಆಗಿದೆ. ಹೀಗಾಗಿ, ಪ್ರಭಾಸ್ ಮತ್ತು ರಾಜಮೌಳಿ ಸಿನಿಮಾ ನಡುವೆ ಫೈಟ್ ಏರ್ಪಡಲಿದೆ.
ಇದನ್ನೂ ಓದಿ:ರಾಮ್ ಚರಣ್, ಜ್ಯೂ. ಎನ್ಟಿಆರ್ ಮನವಿಗೂ ಬಗ್ಗದ ರಾಜಮೌಳಿ; ಬಿಗ್ ಬಾಸ್ ವೇದಿಕೆಯಲ್ಲಿ ಸತ್ಯ ಬಯಲು
ರಾಜಮೌಳಿ ಜನ್ಮದಿನ: ಅಪರೂಪದ ಫೋಟೋಗಳ ಮೂಲಕ ಸಿನಿಮಾ ಮಾಂತ್ರಿಕನಿಗೆ ‘ಆರ್ಆರ್ಆರ್’ ತಂಡದ ವಿಶ್