AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yash: ದುಬೈನಲ್ಲಿ ಮಿಂಚುತ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್ ದಂಪತಿ; ಏನು ವಿಶೇಷ?

Radhika Pandith: ಸ್ಯಾಂಡಲ್​ವುಡ್ ತಾರಾ ಜೋಡಿ ರಾಕಿಂಗ್ ಸ್ಟಾರ್ ಯಶ್ ದಂಪತಿ ದುಬೈ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿ ಕೊವಿಡ್ ನಿಯಮಗಳು ಅಚ್ಚುಕಟ್ಟಾಗಿದ್ದು, ಸುರಕ್ಷಿತ ವಾತಾವರಣವಿರುವ ಕಾರಣ ತಾರಾ ಜೋಡಿಗಳು ಅಲ್ಲಿಗೆ ಪ್ರವಾಸ ಹೋಗುತ್ತಾರೆ. ಯಶ್ ಹಾಗೂ ರಾಧಿಕಾ ಅಲ್ಲಿ ತೆರಳಿರುವ ಕೆಲವು ಚಿತ್ರಗಳು ಇಲ್ಲಿವೆ.

TV9 Web
| Updated By: shivaprasad.hs|

Updated on: Oct 13, 2021 | 12:41 PM

Share
ಪ್ರಸ್ತುತ ತಾರೆಯರು ಪ್ರವಾಸ ಕೈಗೊಳ್ಳಲು ಸಾಕಷ್ಟು ಕೊವಿಡ್ ಮುನ್ನೆಚ್ಚರಿಕೆ ಇರುವ ಸ್ಥಳಗಳನ್ನು ಆಯ್ದುಕೊಳ್ಳುತ್ತಾರೆ. ಆ ಪೈಕಿ ಮಾಲ್ಡೀವ್ಸ್ ಹಾಗೂ ದುಬೈ ಸದ್ಯ ಮುಂಚೂಣಿಯಲ್ಲಿವೆ.

1 / 6
ಸ್ಯಾಂಡಲ್​ವುಡ್ ತಾರಾ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಕೆಲ ಸಮಯದ ಹಿಂದೆ ಮಾಲ್ಡೀವ್ಸ್​ಗೆ ತೆರಳಿದ್ದರು. ಪ್ರಸ್ತುತ ಈ ಜೋಡಿ ದುಬೈಗೆ ತೆರಳಿದೆ. ಈ ಚಿತ್ರದಲ್ಲಿ ಯಶ್ ಹಾಗೂ ರಾಧಿಕಾ ದುಬೈನಲ್ಲಿ ಚಿತ್ರ ತೆಗೆಸಿಕೊಂಡಿರುವುದನ್ನು ಕಾಣಬಹುದು.

2 / 6
ದುಬೈನಲ್ಲಿ ಈ ತಾರಾ ಜೋಡಿ ಅಭಿಮಾನಿಗಳೊಂದಿಗೆ ಫೋಟೋಗಳಿಗೆ ಪೋಸ್ ನೀಡಿದ್ದು, ಫ್ಯಾನ್ಸ್ ಮನಗೆದ್ದಿದೆ.

3 / 6
ನಟಿ ರಾಧಿಕಾ ಪಂಡಿತ್ ಕೂಡ ಸಾಮಾಜಿಕ ಜಾಲತಾಣಗಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

4 / 6
ನಟ ಯಶ್ ಕೂಡ ದುಬೈನಲ್ಲಿರುವ ಪುಟಾಣಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಕಳೆದ ಕೆಲ ಸಮಯದ ಹಿಂದೆ ನಟ ಸುದೀಪ್ ದಂಪತಿ ಕೂಡ ದುಬೈಗೆ ತೆರಳಿದ್ದನ್ನು ಇಲ್ಲಿ ಸ್ಮರಿಸಬಹುದು.

5 / 6
ಇತ್ತೀಚೆಗಷ್ಟೇ ನಟ ಯಶ್ ತಮ್ಮ ಹೊಸ ಹೇರ್ ಸ್ಟೈಲ್​ನಲ್ಲಿ ಗಮನ ಸೆಳೆದಿದ್ದರು. ಅಭಿಮಾನಿಗಳು ಯಶ್ ಅವರ ‘ಕೆಜಿಎಫ್ 2’ ಚಿತ್ರದ ಬಿಡುಗಡೆಗೆ ಕಾದುಕುಳಿತಿದ್ದಾರೆ. ಚಿತ್ರವು ಮುಂದಿನ ವರ್ಷ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ.

6 / 6