ಬೀದರ್: 1 ಎಕರೆಯಲ್ಲಿ ಭರಪೂರ ಬೆಳೆ; ತರಕಾರಿ ಬೆಳೆದು ನಷ್ಟ ಅನುಭವಿಸಿದ ರೈತನ ಕೈ ಹಿಡಿಯಿತು ಡ್ರ್ಯಾಗನ್ ಫ್ರೂಟ್

ಡ್ರ್ಯಾಗನ್‌ ಫ್ರೂಟ್‌ ಬೆಳೆ ಬೆಳೆಯಲು ಖರ್ಚು ಕಡಿಮೆ, ನಿರ್ವಹಣೆಯೂ ಸುಲಭವಾಗಿದೆ ಎಂಥಹ ಭೂಮಿಯಲ್ಲಿಯೂ ಕೂಡಾ ಇದು ಬೆಳೆಯಬಲ್ಲದ್ದಾಗಿದ್ದು, ಕಡಿಮೆ ನೀರಿದ್ದರು ಸಾಕು ಡ್ರ್ಯಾಗನ್‌ ಫ್ರೂಟ್‌ ಗಿಡವನ್ನು 25 ವರ್ಷಗಳ ಕಾಲ ಬೆಳೆಯಬಹುದು ಎಂದು ಡ್ರ್ಯಾಗನ್‌ ಫ್ರೂಟ್‌ ಬೆಳೆಗಾರ ಮಲ್ಲಿಕಾರ್ಜುನ್ ಹೇಳಿದ್ದಾರೆ.

ಬೀದರ್: 1 ಎಕರೆಯಲ್ಲಿ ಭರಪೂರ ಬೆಳೆ; ತರಕಾರಿ ಬೆಳೆದು ನಷ್ಟ ಅನುಭವಿಸಿದ ರೈತನ ಕೈ ಹಿಡಿಯಿತು ಡ್ರ್ಯಾಗನ್ ಫ್ರೂಟ್
ಡ್ರ್ಯಾಗನ್ ಫ್ರೂಟ್
Follow us
TV9 Web
| Updated By: preethi shettigar

Updated on: Oct 13, 2021 | 3:38 PM

ಬೀದರ್: ಜಿಲ್ಲೆಯ ರೈತರು ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕುತ್ತಲೆ ಇರುತ್ತಾರೆ. ಸದಾ ಸಂಕಷ್ಟದಲ್ಲಿ ಬದುಕು ಸಾಗಿಸುವ ಇಲ್ಲಿನ ರೈತರ ಗೋಳು ಹೇಳತೀರದು. ಆದರೆ ಇಲ್ಲೋರ್ವ ರೈತ ಇಂತಹ ಹತ್ತಾರು ಸಮಸ್ಯೆಗಳ ನಡುವೆ ಡ್ರ್ಯಾಗನ್ ಫ್ರೂಟ್ ಬೆಳೆಯುವುದರ ಮೂಲಕ ಸೈ ಎನಿಸಿಕೊಂಡಿದ್ದು, ತಿಂಗಳಿಗೆ ಸಾವಿರಾರು ರೂಪಾಯಿ ದುಡಿಯುತ್ತಿದ್ದಾರೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹುಡುಗಿ ಗ್ರಾಮದ ಪ್ರಗತಿಪರ ರೈತ ಮಲ್ಲಿಕಾರ್ಜುನ್ ತಮ್ಮ ಒಂದು ಎಕರೆಯ ಜಮೀನಿನಲ್ಲಿ ವಿದೇಶಿ ತಳಿಯ ಡ್ರ್ಯಾಗನ್‌ ಫ್ರೂಟ್‌ ಬೆಳೆದು ಅದರಿಂದ ಬಂದ ಹಣದಿಂದ ಸುಂದರ ಜೀವನ ಸಾಗಿಸುತ್ತಿದ್ದಾರೆ. ಮೂಲತಃ ಜಪಾನ್‌ ದೇಶದ ದೇಶಿ ತಳಿ ಗಡೀ ಜಿಲ್ಲೆ ಬೀದರ್ ನ ಬರಡು ಭೂಮಿಯ ವಾತಾವರಣದಲ್ಲಿ, ಸಾವಯವ ಪದ್ಧತಿಯ ನೆರಳಿನಲ್ಲಿ ಹುಲುಸಾಗಿ ಬೆಳೆದು, ಫ‌ಲ ನೀಡುತ್ತಿದೆ.

ವಿದೇಶಿ ತಳಿಯಾದರೂ ಅನ್ನದಾತರ ಬದುಕಿಗೆ ಆರ್ಥಿಕತೆಯ ಬಲ ನೀಡಬಲ್ಲುದು ಎಂಬುವುದನ್ನು ಕೃಷಿಕ ಮಲ್ಲಿಕಾರ್ಜುನ್ ಸಾಬೀತುಪಡಿಸುತ್ತಿದ್ದಾರೆ. ಮಂಬೈ-ಪುಣೆ ರಾಷ್ಟ್ರೀಯ ಹೆದ್ದಾರಿಯ ಹೊಂದಿಕೊಂಡಿರುವ ಹುಡುಗಿ ಗ್ರಾಮದ ಕೂದಲಳತೆ ದೂರದಲ್ಲಿ ರೈತ ಮಲ್ಲಿಕಾರ್ಜುನ್ ಅವರ ಜಮೀನಿದೆ. ಅವರು ಡ್ರ್ಯಾಗನ್‌ ಫ್ರೂಟ್‌ ಬೆಳೆಯನ್ನು ತೆಗೆದಿರುವುದು ಇಲ್ಲೇ. ವಿದೇಶಿ ಬೆಳೆಯನ್ನು ಸಾವಯವ ಪದ್ಧತಿ ಬಳಸಿ 1 ಎಕರೆ ಪೂರ್ತಿ ಬೆಳೆದು ಈ ಭಾಗದ ರೈತರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಕಂಬದ ಮ್ಯಾಲೆ ಡ್ರ್ಯಾಗನ್‌ ಬೆಳೆದಿದ್ದು, ಕಂಬದಿಂದ ಕಂಬಕ್ಕೆ 7 ಅಡಿ ಅಂತರ, ಸಾಲಿನಿಂದ ಸಾಲಿಗೆ 10 ಅಡಿ ಅಂತರದಲ್ಲಿ ಸಿಮೆಂಟ್‌ ಕಂಬಗಳನ್ನು ನೆಟ್ಟಿದ್ದಾರೆ. ಒಂದು ಸಿಮೆಂಟ್‌ ಕಂಬದ ನಾಲ್ಕು ದಿಕ್ಕಿನಲ್ಲಿ ನಾಲ್ಕು ಡ್ರ್ಯಾಗನ್‌ ಸಸಿಗಳನ್ನು ನೆಟ್ಟಿದ್ದಾರೆ. ಒಂದು ಎಕರೆಗೆ 511 ಸಿಮೆಂಟ್‌ ಕಂಬಗಳನ್ನು ನೆಟ್ಟಿದ್ದು, 2200 ಡ್ರ್ಯಾಗನ್‌ ಫ್ರೂಟ್‌ ಸಸಿಗಳನ್ನು ನೆಟ್ಟಿದ್ದಾರೆ. ಅವುಗಳಿಗೆ ಹನಿ ನೀರಾವರಿ ಮೂಲಕ ನೀರು ಸರಬರಾಜು ಮಾಡಿದ್ದು, ಸಂಪೂರ್ಣ ಸಾವಯವದಿಂದಲೇ ಡ್ರ್ಯಾಗನ್‌ ಫ್ರೂಟ್‌ ಬೆಳೆಸಿದ್ದು ಉತ್ತಮ ಇಳುವರಿ ಬಂದಿದೆ.

ಮಹಾರಾಷ್ಟ್ರದಿಂದ ಕೆಂಪು, ಬಿಳಿ ಬಣ್ಣದ ಹಣ್ಣುಗಳ ಎರಡು ತಳಿಗಳ ಡ್ರ್ಯಾಗನ್‌ ಫ್ರೂಟ್‌ ಸಸಿಗಳನ್ನು ತಂದು ನೆಡಲಾಗಿದ್ದು, ಡ್ರ್ಯಾಗನ್‌ ಫ್ರೂಟ್‌ ಸಸಿ 5 ರಿಂದ 6 ತಿಂಗಳಲ್ಲಿ 6 ಅಡಿ ಎತ್ತರದ ಸಿಮೆಂಟ್‌ ಕಂಬದ ವರೆಗೂ ಬೆಳೆದು ಗಿಡವಾಗುತ್ತದೆ. ಅನಂತರ 22 ತಿಂಗಳಲ್ಲಿ ಪ್ಲೇಟ್‌ನಿಂದ ಕಾರಂಜಿಯಾಕಾರದಲ್ಲಿ ವೃತ್ತಾಕಾರವಾಗಿ ಇಳಿಜಾರಾಗಿ ಬೆಳೆದ ಕಾಂಡದಲ್ಲಿ ಮೊದಲಿಗೆ ಹೂವು ಬಿಟ್ಟ ಬಳಿಕ, ನಂತರ ಡ್ರ್ಯಾಗನ್‌ ಫ್ರೂಟ್‌ ಹಣ್ಣಿನ ಇಳುವರಿ ಬರುತ್ತದೆ. ಇನ್ನೂ ಡ್ರ್ಯಾಗನ್‌ ಫ್ರೂಟ್‌ ಬೆಳೆ ಬೆಳೆಯಲು ಖರ್ಚು ಕಡಿಮೆ, ನಿರ್ವಹಣೆಯೂ ಸುಲಭವಾಗಿದೆ ಎಂಥಹ ಭೂಮಿಯಲ್ಲಿಯೂ ಕೂಡಾ ಇದು ಬೆಳೆಯಬಲ್ಲದ್ದಾಗಿದ್ದು, ಕಡಿಮೆ ನೀರಿದ್ದರು ಸಾಕು ಡ್ರ್ಯಾಗನ್‌ ಫ್ರೂಟ್‌ ಗಿಡವನ್ನು 25 ವರ್ಷಗಳ ಕಾಲ ಬೆಳೆಯಬಹುದು ಎಂದು ಡ್ರ್ಯಾಗನ್‌ ಫ್ರೂಟ್‌ ಬೆಳೆಗಾರ ಮಲ್ಲಿಕಾರ್ಜುನ್ ಹೇಳಿದ್ದಾರೆ.

ಮಳೆಗಾಲದಲ್ಲಿ ನೀರು ಹೆಚ್ಚಾದರೆ ಕೊಳೆ ರೋಗ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೊಂಚಮಟ್ಟಿಗೆ ನಿಗಾ ವಹಿಸಿದರೆ ಸಾಕು ಉತ್ತಮ ಇಳುವರಿ ಪಡೆಯಲು ಸಾಧ್ಯ. ಇನ್ನೂ ಮಲ್ಲಿಕಾರ್ಜುನ್ ಈಗ ಮೂರನೇ ಸಲ ಡ್ರ್ಯಾಗನ್‌ ಫ್ರೂಟ್‌ ಕಟಾವು ಮಾಡಿದ್ದಾರೆ. ಇವರ ಬಳಿಯೇ ಬಂದು ಚಿಕ್ಕಪುಟ್ಟ ವ್ಯಾಪಾರಿಗಳು ಕೆಜಿಗೆ 150 ರೂಪಾಯಿ ಕೊಟ್ಟು ಖರೀದಿ ಮಾಡಿಕೊಂಡು ಹೋಗುತ್ತಿದ್ದಾರೆ. ಕಳೆದ ಎರಡೇ ವರ್ಷದಲ್ಲಿ ಡ್ರ್ಯಾಗನ್‌ ಫ್ರೂಟ್‌ ನಾಟಿ ಮಾಡಲು ಖರ್ಚುಮಾಡಿದ ಹಣ ಬಂದಿದೆ. ಇನ್ನೂ ಬರುವ ಆದಾಯವೆಲ್ಲ ಲಾಭವೇ ಎನ್ನುತ್ತಿದ್ದಾರೆ ರೈತ ಮಲ್ಲಿಕಾರ್ಜುನ್.

ಬೀದರ್ ಜಿಲ್ಲೆಯಲ್ಲಿ ಹುಮ್ನಾಬಾದ್ ಹಾಗೂ ಭಾಲ್ಕಿ ತಾಲೂಕಿನ ಕೆಲವೇ ಕೆಲವು ರೈತರು ಸದ್ಯ ಡ್ರ್ಯಾಗನ್‌ ಫ್ರೂಟ್‌ ಬೆಳೇಯುತ್ತಿದ್ದಾರೆ ಅವರಿಗೆ ತೋಟಗಾರಿಕೆ ಇಲಾಖೆಯಿಂದ ಏನೇನು ಸೌಲಭ್ಯಗಳು ಬೇಕು ಅವೆಲ್ಲವನ್ನು ಕೊಡಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿ ವಿಶ್ವನಾಥ್ ಹೇಳಿದ್ದಾರೆ.

ಮೊದಲ ಇಳುವರಿಯಾಗಿ ಸಿಕ್ಕ ಡ್ರ್ಯಾಗನ್‌ ಹಣ್ಣು ಸುಮಾರು 44 ಕೆಜಿಯಷ್ಟು. ಕೆಜಿಗೆ 150 ರೂಪಾಯಿಗಳಂತೆ 44 ಕೆಜಿ ಹಣ್ಣುಗಳನ್ನು ಮಾರಾಟ ಮಾಡಿದ್ದು, ವಾರ್ಷಿಕ ಒಂದು ಎಕರೆಗೆ 4-5 ಟನ್‌ ಡ್ರ್ಯಾಗನ್‌ ಫ್ರೂಟ್‌ ಇಳುವರಿ ಪಡೆಯಬಹುದು. ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ಡ್ರ್ಯಾಗನ್‌ ಹಣ್ಣಿನ ಬೆಲೆ 100 ರಿಂದ 150 ರೂಪಾಯಿ ನಷ್ಟಿದೆ. ಹೀಗಾಗಿ ಟನ್‌ಗಟ್ಟಲೆ ಬೆಳೆದರೆ ರೈತರಿಗೆ ಲಾಭ ಕಟ್ಟಿಟ್ಟ ಬುತ್ತಿ. ಅಲ್ಲದೆ, ವರ್ಷಗಳು ಕಳೆದಂತೆ ಡ್ರ್ಯಾಗನ್‌ ಫ್ರೂಟಿನ ಇಳುವರಿಯೂ ಹೆಚ್ಚುತ್ತಾ ಸಾಗುತ್ತದೆ ಎಂದು ರೈತ ಮಲ್ಲಿಕಾರ್ಜುನ್ ಹೇಳಿದ್ದಾರೆ.

ಒಟ್ಟಾರೆ ಸದಾ ಕಬ್ಬು ಬೆಳೆದು ಕೈಸುಟ್ಟುಕೊಳ್ಳುವ ಗಡಿ ಜಿಲ್ಲೆಯ ರೈತರಿಗೆ ಮಲ್ಲಕಾರ್ಜುನ್​ ಮಾದರಿಯಾಗಿದ್ದಾರೆ. ಕೆಲಸ ಯಾವುದಾದರೇನು ಶ್ರದ್ಧೆಯಿಂದ ಮಾಡಿದ್ದರೆ ಇನ್ನೋಬ್ಬರಿಗೆ ಮಾದರಿಯಾಗುವುದರಲ್ಲಿ ಅನುಮಾನವಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ.

ವರದಿ: ಸುರೇಶ್ ನಾಯಕ್

ಇದನ್ನೂ ಓದಿ:

ಬರಡು ಭೂಮಿಯಲ್ಲಿ ಮಿಶ್ರ ಬೆಳೆ ಬೆಳೆದ ಸಾಹಸಿ ರೈತ; ಮಳೆ ನೀರನ್ನೇ ಆಧಾರವಾಗಿಸಿ ವರ್ಷಕ್ಕೆ 10 ಲಕ್ಷ ರೂ. ಆದಾಯ

ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ; ಒಂದು ಎಕರೆ ಜಮೀನಿನಲ್ಲಿ ಕ್ಯಾಬೇಜ್ ಬೆಳೆದು ಬಂಪರ್ ಆದಾಯ ಪಡೆದ ಹಾವೇರಿ ಯುವಕ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ