AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೊಮೇಟೊ ತಿಂದ್ರೆ ಕಿಡ್ನಿ ಸ್ಟೋನ್ ಆಗುತ್ತದೆಯೇ… ಸತ್ಯ ತಿಳಿದರೆ ಶಾಕ್ ಆಗ್ತೀರಾ!

ಟೊಮೇಟೊ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಅಥವಾ ಆಹಾರದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಬಳಕೆ ಮಾಡುವುದರಿಂದ ಮೂತ್ರಪಿಂಡದ ಕಲ್ಲುಗಳು ಅಂದರೆ ಕಿಡ್ನಿ ಸ್ಟೋನ್ ಉಂಟಾಗುತ್ತವೆ ಎಂಬುದು ಹಲವರ ನಂಬಿಕೆ. ಇದು ಕೆಲವರಿಗೆ ಆಶ್ಚರ್ಯ ಮೂಡಿಸಬಹುದು. ಆದರೆ ಈ ಬಗ್ಗೆ ಪ್ರತಿಯೊಬ್ಬರು ಕೂಡ ತಿಳಿದುಕೊಳ್ಳಲೇಬೇಕು. ಕೆಲವರು ಈ ರೀತಿಯ ಗೊಂದಲಗಳಿಂದ ಟೊಮೇಟೊ ಸೇವನೆ ಮಾಡುವುದನ್ನೇ ಬಿಟ್ಟು ಬಿಡುತ್ತಾರೆ. ಹಾಗಾದರೆ ಇದು ನಿಜವೇ, ಈ ಬಗ್ಗೆ ಆರೋಗ್ಯ ತಜ್ಞರ ಅಭಿಪ್ರಾಯವೇನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಟೊಮೇಟೊ ತಿಂದ್ರೆ ಕಿಡ್ನಿ ಸ್ಟೋನ್ ಆಗುತ್ತದೆಯೇ... ಸತ್ಯ ತಿಳಿದರೆ ಶಾಕ್ ಆಗ್ತೀರಾ!
ಟೊಮೇಟೊ ಮತ್ತು ಕಿಡ್ನಿ ಸ್ಟೋನ್ ಗೆ ಸಂಬಂಧ
ಪ್ರೀತಿ ಭಟ್​, ಗುಣವಂತೆ
|

Updated on: Dec 05, 2025 | 5:20 PM

Share

ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ (Kidney Stone) ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಅದರಲ್ಲಿಯೂ ಈ ಬಗ್ಗೆ ಹಲವು ರೀತಿಯ ಅನುಮಾನಗಳು ಜನರನ್ನು ಕಾಡುತ್ತಿದೆ. ಹೌದು, ಅನೇಕರು ಟೊಮೇಟೊ (Tomatoes) ಸೇವನೆ ಮಾಡುವುದನ್ನು ತಪ್ಪಿಸುತ್ತಾರೆ. ಏಕೆಂದರೆ ಟೊಮೇಟೊ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಅಥವಾ ಆಹಾರದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಬಳಕೆ ಮಾಡುವುದರಿಂದ ಮೂತ್ರಪಿಂಡದ ಕಲ್ಲುಗಳು ಅಂದರೆ ಕಿಡ್ನಿ ಸ್ಟೋನ್ ಉಂಟಾಗುತ್ತವೆ ಎಂಬುದು ಹಲವರ ನಂಬಿಕೆ ಹಾಗಾಗಿ ಕೆಲವರು ಒಮ್ಮೆ ಕಿಡ್ನಿ ಸ್ಟೋನ್ ಕಂಡುಬಂದರೆ ಟೊಮೇಟೊ ಸೇವನೆ ಮಾಡುವುದನ್ನೇ ನಿಲ್ಲಿಸಿಬಿಡುತ್ತಾರೆ. ಹಾಗಾದರೆ ಇದು ನಿಜವೇ, ಈ ಬಗ್ಗೆ ಆರೋಗ್ಯ ತಜ್ಞರ ಅಭಿಪ್ರಾಯವೇನು ತಿಳಿದುಕೊಳ್ಳಿ.

ಟೊಮೇಟೊ ಸೇವನೆ ಕಿಡ್ನಿ ಸ್ಟೋನ್ ಸಮಸ್ಯೆಗೆ ಕಾರಣವಾಗುತ್ತದೆ ಎಂಬುದನ್ನು ಆರೋಗ್ಯ ತಜ್ಞರು ತಳ್ಳಿಹಾಕುತ್ತಾರೆ. ಸಾಮಾನ್ಯವಾಗಿ ಟೊಮೇಟೊಗಳಲ್ಲಿರುವ ಆಕ್ಸಲೇಟ್ ಅಂಶ ಮೂತ್ರಪಿಂಡದಲ್ಲಿ ಕಲ್ಲುಗಳಿಗೆ ಕಾರಣವಾಗುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಆದರೆ ಈ ತರಕಾರಿಯಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ಆಕ್ಸಲೇಟ್ ಇರುತ್ತದೆ. ಅಂದರೆ 100 ಗ್ರಾಂ ಟೊಮೇಟೊದಲ್ಲಿ ಕೇವಲ 5 ಮಿಲಿಗ್ರಾಂ ಆಕ್ಸಲೇಟ್ ಇರುತ್ತದೆ. ಕಿಡ್ನಿಯಲ್ಲಿ ಸ್ಟೋನ್ ಉಂಟಾಗಲು ಇಷ್ಟು ಕಡಿಮೆ ಪ್ರಮಾಣ ಸಾಕಾಗುವುದಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಕಿಡ್ನಿ ಸ್ಟೋನ್ ಗೆ ಕಾರಣವಾಗುವ ಅಂಶಗಳು:

  • ಸಾಮಾನ್ಯವಾಗಿ ಕಿಡ್ನಿ ಸ್ಟೋನ್ ಗೆ ಮುಖ್ಯ ಕಾರಣ ನಿರ್ಜಲೀಕರಣ. ಯಾವುದೇ ರೀತಿಯ ಕೆಲಸ ಮಾಡುವವರಾಗಲಿ ಪ್ರತಿದಿನ ಕನಿಷ್ಠ 2.5 ರಿಂದ 3 ಲೀಟರ್ ನೀರನ್ನು ಕುಡಿಯುವುದು ಅತ್ಯಗತ್ಯ. ಏಕೆಂದರೆ ಮೂತ್ರಪಿಂಡದ ಕಲ್ಲುಗಳು, ಕೆಲವು ಕಿಣ್ವಗಳಲ್ಲಿನ ಕೊರತೆ ಅಥವಾ ಚಯಾಪಚಯ ಸಮಸ್ಯೆಗಳಿಂದ ಕೂಡ ಉಂಟಾಗಬಹುದು.
  • ಆಕ್ಸಲೋಸಿಸ್ ಎಂಬ ಅಪರೂಪದ ಚಯಾಪಚಯ ಅಸ್ವಸ್ಥತೆಯಿಂದಾಗಿ, ಮೂತ್ರಪಿಂಡಗಳು ದೇಹದಿಂದ ಕ್ಯಾಲ್ಸಿಯಂ ಆಕ್ಸಲೇಟ್ ಹರಳುಗಳನ್ನು ಮೂತ್ರದ ಮೂಲಕ ಹೊರಹಾಕುವುದನ್ನು ನಿಲ್ಲಿಸುತ್ತವೆ. ಇದು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು.
  • ಕೆಲವೊಮ್ಮೆ ಕ್ಯಾಲ್ಸಿಯಂ ಆಕ್ಸಲೇಟ್ ಜೊತೆಗೆ, ಯೂರಿಕ್ ಆಮ್ಲ, ಸ್ಟ್ರುವೈಟ್ ಕಲ್ಲುಗಳು ಮತ್ತು ಸಿಸ್ಟೈನ್ ಕಲ್ಲುಗಳಂತಹ ಇತರ ರೀತಿಯ ಹರಳುಗಳಿಂದಲೂ ಕಲ್ಲುಗಳು ರೂಪುಗೊಳ್ಳಬಹುದು. ಕೆಲವು ಮಾಂಸಾಹಾರಿ ಆಹಾರಗಳ ಸೇವನೆಯಿಂದಲೂ ಕಿಡ್ನಿ ಸ್ಟೋನ್ ಅಪಾಯ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ಆದರೆ ಇದು ಸತ್ಯವಲ್ಲ.

ಇದನ್ನೂ ಓದಿ: ಅಬ್ಬಬ್ಬಾ… ಟೊಮೇಟೊ ತಿನ್ನೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಮೂತ್ರಪಿಂಡ ಸಂಬಂಧಿ ಸಮಸ್ಯೆಗಳು, ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ಪ್ರೋಟೀನ್ ಕಡಿಮೆ ಇರುವಂತಹ ಆಹಾರವನ್ನು ಸೇವಿಸುವುದು ಉತ್ತಮ. ಆದರೆ ಈ ವಿಷಯದಲ್ಲಿ, ವೈದ್ಯರ ಸಲಹೆ ಮತ್ತು ಔಷಧಿಗಳು ಆಹಾರಕ್ಕಿಂತಲೂ ಮುಖ್ಯವಾದದ್ದು ಹಾಗಾಗಿ, ವೈದ್ಯಕೀಯ ಸಲಹೆಯನ್ನು ಪಡೆಯುವುದು ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ