ಚಳಿಗಾಲದಲ್ಲಿ ನಿರಂತರ ಆಯಾಸ, ಆಲಸ್ಯವಾಗುವುದಕ್ಕೆ ಈ ವಿಟಮಿನ್ ಕೊರತೆಯೇ ಕಾರಣ!
ವಿಟಮಿನ್ ಡಿ ಕೊರತೆಯು ಹಲವು ಕಾರಣಗಳಿಂದ ಉಂಟಾಗಬಹುದು. ಅವುಗಳಲ್ಲಿ ಸಾಮಾನ್ಯವಾದದ್ದು ಸೂರ್ಯನ ಬೆಳಕಿನ ಕೊರತೆ. ಹೆಚ್ಚುವರಿಯಾಗಿ, ಚಳಿಗಾಲದಲ್ಲಿ ಮನೆಯೊಳಗೆ ಹೆಚ್ಚು ಸಮಯ ಕಳೆಯುವುದು, ಮಾಲಿನ್ಯ, ಬೊಜ್ಜು, ವಯಸ್ಸಾಗುವುದು ಮತ್ತು ಪೌಷ್ಟಿಕಾಂಶದ ಕೊರತೆಗಳು ಸಹ ವಿಟಮಿನ್ ಡಿ ಮಟ್ಟವನ್ನು ಕಡಿಮೆ ಮಾಡಬಹುದು. ಇದರಿಂದ ನಿರಂತರ ಆಯಾಸ, ಸ್ನಾಯು ನೋವು, ಆಲಸ್ಯಕ್ಕೆ ಕಾರಣವಾಗಬಹುದು. ಹಾಗಾದರೆ ಇದನ್ನು ತಡೆಯುವುದು ಹೇಗೆ? ಯಾಕೆ ಈ ರೀತಿಯಾಗುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಚಳಿಗಾಲದಲ್ಲಿ (Winter) ಅನೇಕರಿಗೆ ಬೇರೆ ದಿನಗಳಿಗಿಂತ ಹೆಚ್ಚು ಆಯಾಸವಾಗುತ್ತದೆ. ಇದಕ್ಕೆ ಒಂದು ಪ್ರಮುಖ ಕಾರಣ ವಿಟಮಿನ್ ಡಿ ಕೊರತೆ. ಮೂಳೆಗಳು ಗಟ್ಟಿಯಾಗಿರಲು, ರೋಗನಿರೋಧಕ ಶಕ್ತಿ ಹೆಚ್ಚಾಗಲು ವಿಟಮಿನ್ ಡಿ ಬಹಳ ಮುಖ್ಯವಾಗುತ್ತದೆ. ಇದು ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ದೇಹ ಮತ್ತು ಮನಸ್ಸು ಎರಡನ್ನೂ ಆರೋಗ್ಯವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಇದರ ಕೊರತೆ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಸೂರ್ಯನ ಬೆಳಕು ಸರಿಯಾಗಿ ಸಿಗದಿರುವುದು, ಹೆಚ್ಚುವರಿಯಾಗಿ ಚಳಿಗಾಲದಲ್ಲಿ ಮನೆಯೊಳಗೆ ಹೆಚ್ಚು ಸಮಯ ಕಳೆಯುವುದು, ಮಾಲಿನ್ಯ, ಬೊಜ್ಜು, ವಯಸ್ಸಾಗುವುದು ಮತ್ತು ಪೌಷ್ಟಿಕಾಂಶದ ಕೊರತೆಗಳು ವಿಟಮಿನ್ ಡಿ (Vitamin D) ಮಟ್ಟವನ್ನು ಕಡಿಮೆ ಮಾಡಬಹುದು. ಇದರಿಂದ ನಿರಂತರ ಆಯಾಸ, ಸ್ನಾಯು ನೋವು, ಆಲಸ್ಯ, ದುರ್ಬಲ ಮೂಳೆಗಳು, ಆಗಾಗ ಶೀತವಾಗುವುದು, ಕೂದಲು ಉದುರುವಿಕೆ ಮತ್ತು ಮನಸ್ಥಿತಿಯಲ್ಲಿ ಬದಲಾವಣೆಗಲಾಗುತ್ತವೆ. ಹಾಗಾದರೆ ಚಳಿಗಾಲದ ಸಮಯದಲ್ಲಿ ಹೆಚ್ಚಾಗಿ ಈ ರೀತಿಯ ಸಮಸ್ಯೆ ಕಂಡುಬರುವುದಕ್ಕೆ ಕಾರಣವೇನು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಚಳಿಗಾಲದಲ್ಲಿ ವಿಟಮಿನ್ ಡಿ ಕೊರತೆ ಏಕೆ ಉಂಟಾಗುತ್ತದೆ?
ಸಾಮಾನ್ಯವಾಗಿ ಚಳಿಗಾಲದಲ್ಲಿ ಸೂರ್ಯೋದಯ ತಡವಾಗಿ ಆಗುವುದು ಮತ್ತು ಅದರ ತೀವ್ರತೆ ಕಡಿಮೆ ಇರುವುದರಿಂದ ಹೆಚ್ಚಿನವರು ಶೀತ ವಾತಾವರಣದಿಂದ ಬೆಚ್ಚಗಿರಲು ಮನೆಯೊಳಗೆ ಇರುತ್ತಾರೆ, ಇದು ದೇಹಕ್ಕೆ ಸಾಕಷ್ಟು ಸೂರ್ಯನ ಬೆಳಕು ಸಿಗುವುದನ್ನು ತಡೆಯುತ್ತದೆ. ಹೆಚ್ಚುವರಿಯಾಗಿ, ದಪ್ಪ ಬಟ್ಟೆಗಳನ್ನು ಧರಿಸುವುದು, ಮಾಲಿನ್ಯ ಮತ್ತು ಮೋಡಗಳು, ಸೂರ್ಯನ ಬೆಳಕು ಚರ್ಮವನ್ನು ತಲುಪುವುದನ್ನು ತಡೆಯುತ್ತವೆ. ಕ್ರಮೇಣ ದೇಹದಲ್ಲಿ ಈ ವಿಟಮಿನ್ ಕಡಿಮೆಯಾದಾಗ, ಸ್ನಾಯುಗಳು ದುರ್ಬಲಗೊಳ್ಳುತ್ತವೆ ಮತ್ತು ಆಲಸ್ಯಕ್ಕೆ ಎಡೆಮಾಡಿಕೊಡುತ್ತದೆ.
ಇದನ್ನೂ ಓದಿ: ವಿಟಮಿನ್ ಡಿ ಕೊರತೆಯಾದರೆ ನಿರ್ಲಕ್ಷ್ಯ ಮಾಡಬೇಡಿ; ಈ ಸಮಯದಲ್ಲಿ ಕೆಲವು ನಿಮಿಷ ಬಿಸಿಲಿನಲ್ಲಿ ನಿಂತುಕೊಳ್ಳಿ ಸಾಕು!
ಚಳಿಗಾಲದ ಆಲಸ್ಯವನ್ನು ತಡೆಯುವುದು ಹೇಗೆ?
- ಬೆಳಿಗ್ಗೆ 15 ರಿಂದ 20 ನಿಮಿಷ ಸೂರ್ಯನ ಬೆಳಕಿನಲ್ಲಿ ಕುಳಿತುಕೊಳ್ಳಿ.
- ನಿಮ್ಮ ಆಹಾರದಲ್ಲಿ ಹಾಲು, ಮೊಸರು, ಅಣಬೆ ಇತ್ಯಾದಿ, ಬಲವರ್ಧಿತ ಆಹಾರಗಳನ್ನು ಸೇರಿಸಿಕೊಳ್ಳಿ.
- ಅಗತ್ಯವಿದ್ದರೆ ವೈದ್ಯರ ಸಲಹೆಯ ಪ್ರಕಾರ ವಿಟಮಿನ್ ಡಿ ಪೂರಕಗಳನ್ನು ತೆಗೆದುಕೊಳ್ಳಿ.
- ನಿಯಮಿತ ಲಘು ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ.
- ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಿ.
- ಮಕ್ಕಳು ಮತ್ತು ವೃದ್ಧರು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರ ಬಗ್ಗೆ ವಿಶೇಷ ಗಮನ ಕೊಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




