AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಕಿನೇನಿ ನಾಗಾರ್ಜುನಗೆ ಕಿಸ್ ಮಾಡೋಕೆ ದೊಡ್ಡ ಮೊತ್ತದ ಬೇಡಿಕೆ ಇಟ್ಟ ಅಮಲಾ ಪೌಲ್​

ಕಾಜಲ್​ ಗರ್ಭಿಣಿ ಎನ್ನುವ ಮಾತಿದೆ. ಈ ಕಾರಣಕ್ಕೆ ಅವರು ಒಂದಾದಮೇಲೆ ಒಂದು ಸಿನಿಮಾದಿಂದ ಹಿಂದೆ ಸರಿಯುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ‘ಗೋಸ್ಟ್​’ ಸಿನಿಮಾಗೆ ಗುಡ್​ಬೈ ಹೇಳಿದ್ದರು.

ಅಕ್ಕಿನೇನಿ ನಾಗಾರ್ಜುನಗೆ ಕಿಸ್ ಮಾಡೋಕೆ ದೊಡ್ಡ ಮೊತ್ತದ ಬೇಡಿಕೆ ಇಟ್ಟ ಅಮಲಾ ಪೌಲ್​
ಅಕ್ಕಿನೇನಿ ನಾಗಾರ್ಜುನ-ಅಮಲಾ
TV9 Web
| Edited By: |

Updated on: Oct 22, 2021 | 1:50 PM

Share

ಅಕ್ಕಿನೇನಿ ನಾಗಾರ್ಜುನ ವಯಸ್ಸು 60 ದಾಟಿದೆ. ಆದರೆ, ಇನ್ನೂ ಅವರು ಯಂಗ್​ ಆಗಿದ್ದಾರೆ. ತೆರೆಮೇಲೆ ಯುವ ಕಲಾವಿದರನ್ನೂ ನಾಚಿಸುವಂತೆ ನಟಿಸುತ್ತಾರೆ. ಅವರ ಸಿನಿಮಾದಲ್ಲಿ ಹೀರೋಯಿನ್​ ಆಯ್ಕೆಗೂ ಮಹತ್ವ ನೀಡಲಾಗುತ್ತದೆ. ಈಗ ‘ಗೋಸ್ಟ್​’​  ಸಿನಿಮಾದಿಂದ ಕಾಜಲ್​ ಅಗರ್​ವಾಲ್​ ಹಿಂದೆ ಸರಿದಿದ್ದಾರೆ. ಇದಕ್ಕೆ ಈಗ ಅಮಲಾ ಪೌಲ್​ ಎಂಟ್ರಿ ಆಗಿದೆ. ಈ ಸಿನಿಮಾದಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳೋಕೆ ಅವರು ದೊಡ್ಡ ಮೊತ್ತದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಕಾಜಲ್​ ಗರ್ಭಿಣಿ ಎನ್ನುವ ಮಾತಿದೆ. ಈ ಕಾರಣಕ್ಕೆ ಅವರು ಒಂದಾದಮೇಲೆ ಒಂದು ಸಿನಿಮಾದಿಂದ ಹಿಂದೆ ಸರಿಯುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ‘ಗೋಸ್ಟ್​’ ಸಿನಿಮಾಗೆ ಗುಡ್​ಬೈ ಹೇಳಿದ್ದರು. ಈ ಕಾರಣಕ್ಕೆ ಹೊಸ ನಟಿಯ ಆಯ್ಕೆ ಚಿತ್ರತಂಡಕ್ಕೆ ಅನಿವಾರ್ಯವಾಗಿತ್ತು. ಈ ವೇಳೆ ನಿರ್ದೇಶಕ ಪ್ರವೀಣ್​ ಅವರು ಅಮಾಲಾಗೆ ಆಫರ್​ ನೀಡಿದ್ದಾರೆ.

ಗುಡ್ಡಗಾಡು ಪ್ರದೇಶದಲ್ಲಿ ನಾಯಕ-ನಾಯಕಿ ಉಳಿದುಕೊಳ್ಳುವ ಪರಿಸ್ಥಿತಿ ಬಂದೊದಗುತ್ತದೆ. ಈ ವೇಳೆ ಇಬ್ಬರ ನಡುವೆ ಪ್ರೀತಿ ಮೂಡುತ್ತದೆ. ಇದನ್ನು ಹಾಡಿನ ಮೂಲಕ ತೋರಿಸೋಕೆ ನಿರ್ದೇಶಕರು ನಿರ್ಧರಿಸಿದ್ದಾರೆ. ಲಿಪ್​ ಲಾಕ್​ ಸೇರಿ ಕೆಲ ಇಂಟಿಮೇಟ್​ ದೃಶ್ಯಗಳು ಇದರಲ್ಲಿ ಇರಲಿದೆ. ಸಿನಿಮಾ ಸಂಭಾವನೆಯ ಜತೆಗೆ ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಳ್ಳೋಕೆ ಅಮಲಾ ಹೆಚ್ಚಿನ ಹಣ ಕೇಳಿದ್ದಾರೆ ಎನ್ನುವ ಸುದ್ದಿ ಇದೆ. ಆದರೆ, ಚಿತ್ರತಂಡ ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಈಗಾಗಲೇ ‘ಗೋಸ್ಟ್​’ ಸಿನಿಮಾದ ಶೂಟಿಂಗ್​ ಪ್ರಾರಂಭಗೊಂಡಿದೆ. ಅಕ್ಕಿನೇನಿ ನಾಗಾರ್ಜುನ ಅವರು ಬಿಗ್​ ಬಾಸ್​ ಸೀಸನ್​ 5ರ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಇದರ ಮಧ್ಯೆ ಅವರು ಹೈದರಾಬಾದ್​ನಲ್ಲಿ ಈ ಚಿತ್ರದ ಶೂಟಿಂಗ್​ನಲ್ಲಿಯೂ ಪಾಲ್ಗೊಳ್ಳುತ್ತಿದ್ದಾರೆ. ಹೀರೋಯಿನ್​ ಬದಲಾದ ಕಾರಣಕ್ಕೆ ಸಿನಿಮಾದ ಶೂಟಿಂಗ್​ ವಿಳಂಬವಾಗಿದೆ. ಮುಂದಿನ ಎರಡು ತಿಂಗಳಲ್ಲಿ ಸಂಪೂರ್ಣವಾಗಿ ಸಿನಿಮಾ ಶೂಟಿಂಗ್​ ಮುಗಿಸುವ ಆಲೋಚನೆ ಚಿತ್ರತಂಡಕ್ಕೆ ಇದೆ. ಅದಕ್ಕೆ ತಕ್ಕಂತೆಯೇ ಶೆಡ್ಯೂಲ್​ ಫಿಕ್ಸ್​ ಮಾಡಲಾಗಿದೆ.

ಇದನ್ನೂ ಓದಿ: ಮದುವೆ ನಂತರ ಬಿಕಿನಿ ತೊಟ್ಟ ಕಾಜಲ್​ ಅಗರ್​ವಾಲ್​; ಆದರೆ, ಇದರ ಬಗ್ಗೆ ಅಭಿಮಾನಿಗಳು ಮಾತನಾಡುವಂತಿಲ್ಲ

ಪ್ರೆಗಾ ನ್ಯೂಸ್​ ಹಿಡಿದು ಪೋಸ್​ ನೀಡಿದ ಕಾಜಲ್​; ಏನಿದು ಹೊಸ ಸುದ್ದಿ?

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?