Meghana Raj: ಪುತ್ರ ರಾಯನ್ ಜನ್ಮದಿನಕ್ಕೆ ಮೇಘನಾ ನೀಡಿರುವ ಸಂದೇಶವೇನು?
Raayan Raj Sarja Birthday: ಇಂದು ರಾಯನ್ ರಾಜ್ ಸರ್ಜಾ ಜನ್ಮದಿನ. ಈ ಹಿನ್ನೆಲೆಯಲ್ಲಿ ಮೇಘನಾ ರಾಜ್ ವಿಶೇಷ ಪೋಸ್ಟ್ ಮುಖಾಂತರ ರಾಯನ್ಗೆ ಶುಭಕೋರಿದ್ದಾರೆ.
ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಪುತ್ರ ರಾಯನ್ ರಾಜ್ ಸರ್ಜಾಗೆ ಇಂದು(ಅಕ್ಟೋಬರ್ 22) ಮೊದಲ ವರ್ಷದ ಸಂಭ್ರಮ. ಮಗನ ಜನ್ಮದಿನವನ್ನು ಅತ್ಯಂತ ಸಂತಸದಿಂದ ಆಚರಿಸುತ್ತಿರುವ ಮೇಘನಾ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಹಂಚಿಕೊಂಡು ಶುಭಕೋರಿದ್ದಾರೆ. ‘ನಮ್ಮ ಮಗು, ನಮ್ಮ ಪ್ರಪಂಚ, ನಮ್ಮ ಜಗತ್ತು, ನಮ್ಮ ಸರ್ವಸ್ವ! ಚಿರು.. ನಮ್ಮ ಪುಟಾಣಿ ರಾಜಕುಮಾರನಿಗೆ ಈಗ ಒಂದು ವರ್ಷ’ ಎಂಬ ಕ್ಯಾಪ್ಷನ್ನೊಂದಿಗೆ ಮಗನ ಹುಟ್ಟುಹಬ್ಬದ ಸಂದೇಶವನ್ನು ಚಿರು ಜೊತೆ ಮೇಘನಾ ಹಂಚಿಕೊಂಡಿದ್ದಾರೆ.
ಮೇಘನಾ ಹಂಚಿಕೊಂಡಿರುವ ಚಿತ್ರಕ್ಕೆ ಸ್ಯಾಂಡಲ್ವುಡ್ ತಾರೆಯರು ಕಾಮೆಂಟ್ ಮೂಲಕ ಶುಭಕೋರಿದ್ದಾರೆ. ಪನ್ನಗ ಭರಣ, ಕೃಷಿ ತಾಪಂಡ, ಅದ್ವಿತಿ ಶೆಟ್ಟಿ, ಸೋನು ಗೌಡ, ಆಶಿತಾ ಚಂದ್ರಪ್ಪ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ವಿಶ್ ಮಾಡಿದ್ದಾರೆ.
View this post on Instagram
ಅಕ್ಟೋಬರ್ 17ರಂದು ಚಿರಂಜೀವಿ ಸರ್ಜಾ ಜನ್ಮದಿನವಾಗಿತ್ತು. ಅಂದು ಮೇಘನಾ ತಮ್ಮ ಹೊಸ ಚಿತ್ರವನ್ನು ಘೋಷಿಸಿದ್ದರು. ಜೊತೆಗೆ ಹೊಸ ಫೊಟೋಶೂಟ್ನ ಚಿತ್ರವನ್ನೂ ಹಂಚಿಕೊಂಡು ಸಂಭ್ರಮಿಸಿದ್ದರು.
ರಾಯನ್ ಜನ್ಮದಿನದ ಸಂಭ್ರಮ ಹೇಗಿದೆ?; ವಿಡಿಯೋ ನೋಡಿ:
ಇದನ್ನೂ ಓದಿ:
Viral Video: ಮನಿಕೆ ಮಗೆ ಹಿತೆ ಹಾಡಿಗೆ ಮಹಿಳೆಯ ಬಿಹು ನೃತ್ಯ ಪ್ರದರ್ಶನ; ವಿಡಿಯೋ ನೋಡಿ