ರಂಗೀಲಾದ ರಂಭೆ ಊರ್ಮಿಳಾ ಮಾತೊಂಡ್ಕರ್ ಚೆಲುವಿನ್ನೂ ಮಾಸಿಲ್ಲ, ಮಾಸುವ ಲಕ್ಷಣಗಳೂ ಇಲ್ಲ ಬಿಡಿ!

ಖ್ಯಾತ ನಿರ್ದೇಶಕ ರಾಮ್ ಗೋಪಾಲ ವರ್ಮ ಜೊತೆ ಊರ್ಮಿಳಾ ಅವರ ಸ್ನೇಹ ಬಹಳ ಸಮಯದವರೆಗೆ ಗಾಸಿಪ್ ಕಾಲಮ್ ಗಳಿಗೆ ಗ್ರಾಸವಾಗಿತ್ತು. ಅವರಿಬ್ಬರು ಮದುವೆಯೂ ಆಗಿದ್ದಾರೆಂಬ ಗುಲ್ಲೆದ್ದಿತ್ತು. ಆದರೆ ಊರ್ಮಿಳಾ ಆ ವದಂತಿಗಳನ್ನು ತಳ್ಳಿಹಾಕಿದ್ದರು.

ರಂಗೀಲಾ ಚಿತ್ರ ರಿಲೀಸ್ ಆಗಿದ್ದು 1995ರಲ್ಲಿ. ಅಂದರೆ ಸುಮಾರು 26 ವರ್ಷಗಳ ಹಿಂದೆ. ಅದರಲ್ಲಿ ನಾಯಕಿಯಾಗಿ ನಟಿಸಿದ್ದ ಊರ್ಮಿಳಾ ಮಾತೊಂಡ್ಕರ್ ಗೆ ಅಗ 21ರ ಹರೆಯ. ಅಂದರೆ ಈಗ ಅವರ ವಯಸ್ಸು ಎಷ್ಟು ಅಂತ ಗೊತ್ತುಮಾಡಿಕೊಳ್ಳೋದು ಸಿಂಪಲ್ ಲೆಕ್ಕಾಚಾರ ಮಾರಾಯ್ರೇ. ಹೌದು, ವಯಸ್ಸು 47 ಆದರೂ ಊರ್ಮಿಳಾ ಸೌಂದರ್ಯ ಒಂದಿಷ್ಟೂ ಮಾಸಿಲ್ಲ. ಈ ವಿಡಿಯೋನಲ್ಲಿ ಅವರು ಬಗೆಬಗೆಯ ಸೀರೆಗಳಲ್ಲಿ ಕಂಗೊಳಿಸುತ್ತಿದ್ದಾರೆ. ನುರಿತ ಶಿಲ್ಪಿಯೊಬ್ಬ ಅತ್ಯಂತ ಆಸ್ಥೆಯಿಂದ ಕಟೆದ ಶಿಲಾಬಾಲಿಕೆಯಂಥ ಮೈಮಾಟ ಹೊಂದಿರುವ ಊರ್ಮಿಳಾ ಸೀರೆಯಲ್ಲಿ ಬಹಳ ಸುಂದರವಾಗಿ ಕಾಣುತ್ತಾರೆ.

ಬಾಲಿವುಡ್ ಅವರನ್ನು ಮರೆತಿರಬಹುದು. ಅದರೆ, ಬಾಲಿವುಡ್ ಅಲ್ಲದೆ, ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿದ ಉರ್ಮಿಳಾ ತಮ್ಮ ಅಭಿಮಾನಿಗಳ ಹೃದಯಗಳಲ್ಲಿ ಭದ್ರವಾಗಿ ಕುಳಿತಿದ್ದಾರೆ. ಹಾಗಾಗಿ ಖೂಬ್ಸೂರತ್ ಚಿತ್ರದ ಮುಗ್ಧ ಸುಂದರಿ ಊರ್ಮಿಳಾರನ್ನು ಅವರು ಮರೆಯಲಾರರು.

ಹಾಗೆ ನೋಡಿದರೆ, 1977 ರಲ್ಲೇ ಊರ್ಮಿಳಾ ಚಿತ್ರರಂಗಕ್ಕೆ ಕಾಲಿಟ್ಟರೆನ್ನುವುದು ನಿಮಗೆ ಗೊತ್ತಿದೆಯಾ? ಅವರು ಬಾಲಕಲಾವಿದೆಯಾಗಿ 7-8 ಚಿತ್ರಗಳಲ್ಲಿ ನಟಿಸಿದ್ದಾರೆ. ಪೂರ್ಣಪ್ರಮಾಣ ನಾಯಕಿಯಾಗಿ ಅವರು ಕಾಣಿಸಿಕೊಂಡ ಮೊದಲ ಚಿತ್ರವೆಂದರೆ 1991ರಲ್ಲಿ ಬಿಡುಗಡೆಯಾದ ನರಸಿಂಹ ಚಿತ್ರ. ಇದರಲ್ಲಿ ಸನ್ನಿ ಡಿಯೋಲ್ ಹೀರೋ ಆಗಿ ನಟಿಸಿದ್ದರು.

ಖ್ಯಾತ ನಿರ್ದೇಶಕ ರಾಮ್ ಗೋಪಾಲ್​ ವರ್ಮಾ ಜೊತೆ ಊರ್ಮಿಳಾ ಅವರ ಸ್ನೇಹ ಬಹಳ ಸಮಯದವರೆಗೆ ಗಾಸಿಪ್ ಕಾಲಮ್​ಗಳಿಗೆ ಗ್ರಾಸವಾಗಿತ್ತು. ಅವರಿಬ್ಬರು ಮದುವೆಯೂ ಆಗಿದ್ದಾರೆಂಬ ಗುಲ್ಲೆದ್ದಿತ್ತು. ಆದರೆ ಊರ್ಮಿಳಾ ಆ ವದಂತಿಗಳನ್ನು ತಳ್ಳಿಹಾಕಿದ್ದರು. ಕಾಶ್ಮೀರದ ಉದ್ಯಮಿಗಳ ಕುಟುಂಬದ ಸದಸ್ಯರಾಗಿರುವ ಮೊಹ್ಸಿನ್ ಅಖ್ತರ್ ಮೀರ್ ಅವರನ್ನು ಊರ್ಮಿಳಾ ತಮ್ಮ 42ನೇ ವಯಸ್ಸಿನಲ್ಲಿ ಆಂದರೆ 2016ರಲ್ಲಿ ಮದುವೆಯಾದರು.

ಅಂದಹಾಗೆ, ಊರ್ಮಿಳಾ ಈ ವಿಡಿಯೋನಲ್ಲಿ ಮಿಂಚಿತ್ತಿರೋದು ಮಸಾಬಾ ಗುಪ್ತಾ ಅವರು ಡಿಸೈನ್ ಮಾಡಿರುವ ಸೀರೆಗಳಲ್ಲಿ. ಮಸಾಬಾ ಖ್ಯಾತ ನಟಿ ನೀನಾ ಗುಪ್ತಾ ಮತ್ತು 80ರ ದಶಕದ ಶ್ರೇಷ್ಠ ಮತ್ತು ಕ್ರಿಕೆಟ್ ಇತಿಹಾಸದ ಸರ್ವಕಾಲಿಕ ಶ್ರೇಷ್ಠ ಬ್ಯಾಟರ್ಗಳಲ್ಲಿ ಒಬ್ಬರಾಗಿರುವ ಕೆರೀಬಿಯನ್ ದೈತ್ಯ ಸರ್ ಐವಿಎ ರಿಚರ್ಡ್ಸ್ ಅವರ ಮಗಳು.

ಇದನ್ನೂ ಓದಿ:  Viral Video: ರಾನು ಮಂಡಲ್ ಕಂಠದಲ್ಲಿ ‘ಬಚ್ಪನ್​ ಕಾ ಪ್ಯಾರ್’ ಹಾಡು; ವಿಡಿಯೋ ಫುಲ್​ ವೈರಲ್​

Click on your DTH Provider to Add TV9 Kannada