‘ಮಿಲನಾ ಫೇಸ್​​ಬುಕ್ ಲೈವ್ ಬಂದು ನಿಜ ಬಯಲು ಮಾಡ್ತೀನಿ ಅಂದ್ರು’; ಡಾರ್ಲಿಂಗ್​ ಕೃಷ್ಣ

‘ಲವ್​ ಮಾಕ್ಟೇಲ್​’ ಸಿನಿಮಾಗೆ ಸಂಭಾವನೆ ರೂಪದಲ್ಲಿ ಕೇವಲ 12 ಲಕ್ಷ ರೂಪಾಯಿ ನೀಡಲಾಗಿದೆ ಎಂದು ರಘು ದೀಕ್ಷಿತ್​ ಹೇಳಿದ್ದರು. ಇದರ ಜತೆಗೆ ಅವರಿಗೆ ಉಚಿತವಾಗಿ ಆಡಿಯೋ ಹಕ್ಕುಗಳನ್ನು ಕೂಡ ನೀಡಲಾಗಿತ್ತು ಎಂಬ ವಿಚಾರವನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ.

ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ನಾಗರಾಜ್​ ನಟನೆಯ ‘ಲವ್​​ ಮಾಕ್ಟೇಲ್​’ ಸಿನಿಮಾ ಹಿಟ್​ ಆಗಿತ್ತು. ಈ ಚಿತ್ರದಿಂದ ಡಾರ್ಲಿಂಗ್​ ಕೃಷ್ಣ ಖ್ಯಾತಿ ಹೆಚ್ಚಿತು. ಈಗ ಅವರು ‘ಲವ್​ ಮಾಕ್ಟೇಲ್​ 2’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಆದರೆ, ಈ ಚಿತ್ರಕ್ಕೆ ರಘು ದೀಕ್ಷಿತ್​ ಸಂಗೀತ ಸಂಯೋಜನೆ ಮಾಡುತ್ತಿಲ್ಲ. ಇದಕ್ಕೆ ಕಾರಣವೇನು ಎನ್ನುವುದನ್ನು ಡಾರ್ಲಿಂಗ್​ ಕೃಷ್ಣ ವಿವರಿಸಿದ್ದಾರೆ.

‘ಲವ್​ ಮಾಕ್ಟೇಲ್​’ ಸಿನಿಮಾಗೆ ಸಂಭಾವನೆ ರೂಪದಲ್ಲಿ ಕೇವಲ 12 ಲಕ್ಷ ರೂಪಾಯಿ ನೀಡಲಾಗಿದೆ ಎಂದು ರಘು ದೀಕ್ಷಿತ್​ ಹೇಳಿದ್ದರು. ಇದರ ಜತೆಗೆ ಅವರಿಗೆ ಉಚಿತವಾಗಿ ಆಡಿಯೋ ಹಕ್ಕುಗಳನ್ನು ಕೂಡ ನೀಡಲಾಗಿತ್ತು ಎಂಬ ವಿಚಾರವನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಈ ಬಗ್ಗೆ ಮಿಲನಾ ನಾಗರಾಜ್​ ಲೈವ್​ ಬರೋಕೆ ನಿರ್ಧರಿಸಿದ್ದರಂತೆ. ಆ ವಿಚಾರದ ಬಗ್ಗೆ ಡಾರ್ಲಿಂಗ್​ ಕೃಷ್ಣ ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ರಘು ದೀಕ್ಷಿತ್ ಅಸಮಾಧಾನದ​ ಮಾತುಗಳಿಗೆ ಡಾರ್ಲಿಂಗ್​ ಕೃಷ್ಣ ಸ್ಪಷ್ಟನೆ

‘ಲವ್​ ಮಾಕ್ಟೇಲ್’​ ನೋಡುವಂತೆ ರವಿ ಡಿ. ಚನ್ನಣ್ಣನವರ್​ಗೆ​ ಪತ್ನಿಯ ಒತ್ತಾಯ; ದಕ್ಷ ಅಧಿಕಾರಿಗೆ ಸಿನಿಮಾ ಇಷ್ಟ ಆಯ್ತಾ?

Click on your DTH Provider to Add TV9 Kannada