ಫ್ರೀಡಾ ಪಿಂಟೋ ತಮ್ಮ ಪ್ರಿಯಕರನನ್ನು ಮದುವೆಯಾಗಿದ್ದು ಅವರು ಗರ್ಭಣಿಯಾದ ಬಳಿಕ ಜನರಿಗೆ ಗೊತ್ತಾಗಿದೆ!

ಕೊವಿಡ್-19 ಲಾಕ್ ಡೌನ್ ಜಾರಿಯಲ್ಲಿದ್ದಾಗ ಫ್ರೀಡಾ ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ ತಮ್ಮ ಪ್ರಿಯಕರ ಕೊರಿ ಟ್ರ್ಯಾನ್ ಅವರನ್ನು ಮದುವೆಯಾಗಿದ್ದಾರಂತೆ. ಬುಧವಾರದಂದು ‘ದಿ ಕೆಲ್ಲಿ ಕ್ಲಾರ್ಕ್ಸನ್’ ಶೋನಲ್ಲಿ ಭಾಗಿಯಾಗಿದ್ದ ಫ್ರೀಡಾ ಪಿಂಟೋ ಲಗ್ನವಾಗಿರುವುದನ್ನು ಬಯಲು ಮಾಡಿದರು

ಫ್ರೀಡಾ ಪಿಂಟೋ ಹೆಸರು ನೀವು ಮರೆತಿದ್ದರೂ ಆಶ್ಚರ್ಯವಿಲ್ಲ. 2008 ರಲ್ಲಿ ಬಿಡುಗಡೆಯಾದ ‘ಸ್ಲಂ ಡಾಗ್ ಮಿಲಿಯನೇರ್’ ಚಿತ್ರದಲ್ಲಿ ಕಾಣಿಸಿಕೊಂಡ ಬಳಿಕ ಅವರು ಭಾರತದಲ್ಲಿ ಕಂಡಿದ್ದೇ ಕಮ್ಮಿ. ಲಂಡನ್, ಲಾಸ್ ಏಂಜೆಲ್ಸ್ ಅಂತ ಓಡಾಡಿಕೊಂಡು ತಮ್ಮ ನಟನಾ ವೃತ್ತಿಬದುಕನ್ನು ಬ್ರಿಟಿಷ್ ಮತ್ತು ಹಾಲಿವುಡ್ ಚಿತ್ರಗಳಿಗೆ ಮೀಸಲಾಗಿಟ್ಟರು. ಆದರೆ ಫ್ರೀಡಾ ಅಪ್ಪಟ ಪ್ರತಿಭಾವಂತೆ ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ, ತಮಾಷೆಯ ವಿಷಯವೆಂದರೆ, ಅವರು ಮದುವೆಯಾಗಿರುವ ಸಂಗತಿ, ಗರ್ಭಿಣಿಯಾದ ಬಳಿಕ ಗೊತ್ತಾಗಿದೆ. ಜೂನ್ ನಲ್ಲಿ ಅವರು ತಾನು ಗರ್ಭಿಣಿಯಾಗಿರುವುದನ್ನು ಬಹಿರಂಗಪಡಿಸಿದ್ದೇನೋ ನಿಜ ಅದರೆ, ಮದುವೆಯಾಗಿದ್ದು ಯಾರನ್ನು, ಯಾವಾಗ ಅನ್ನೋದನ್ನು ಮುಚ್ಟಿಟ್ಟಿದ್ದರು. ಈ ಸಂಗತಿಯನ್ನು ಅವರು ಬುಧವಾರ ಬಹಿರಂಗ ಪಡಿಸಿದ್ದಾರೆ.

ಕೊವಿಡ್-19 ಲಾಕ್ ಡೌನ್ ಜಾರಿಯಲ್ಲಿದ್ದಾಗ ಫ್ರೀಡಾ ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ ತಮ್ಮ ಪ್ರಿಯಕರ ಕೊರಿ ಟ್ರ್ಯಾನ್ ಅವರನ್ನು ಮದುವೆಯಾಗಿದ್ದಾರಂತೆ ಮಾರಾಯ್ರೇ. ಬುಧವಾರದಂದು ‘ದಿ ಕೆಲ್ಲಿ ಕ್ಲಾರ್ಕ್ಸನ್’ ಶೋನಲ್ಲಿ ಭಾಗಿಯಾಗಿದ್ದ ಫ್ರೀಡಾ ಪಿಂಟೋ ಲಗ್ನವಾಗಿರುವುದನ್ನು ಬಯಲು ಮಾಡಿದರು.

‘ಅಸಲಿಗೆ, ನನಗೆ ಭಾರತದಲ್ಲಿ ನಡೆಯುವ ಐಷಾರಾಮಿ, ದುಂದುವೆಚ್ಚದ ಮದುವೆ ಬೇಕಿರಲಿಲ್ಲ. ಮದುಸೆ ಸರಳ ಮತ್ತು ಸುಂದರವಾಗಿರಬೇಕೆನ್ನುವುದು ನನ್ನ ಬಯಕೆಯಾಗಿತ್ತು. ಅದೇ ಸಮಯಕ್ಕೆ ಕೋವಿಡ್ ತಲೆದೋರಿತು ಮತ್ತು ಈಗಲೂ ಅದು ಪೂರ್ತಿಯಾಗಿ ನಾಶವಾಗಿಲ್ಲ. ಮದುವೆ ಬಗ್ಗೆ ಪ್ಲ್ಯಾನ್ ಮಾಡ್ತಾ ಕೂತರೆ ಬದುಕೆಲ್ಲ ಅದರಲ್ಲೇ ಹೋಗಿಬಿಡುತ್ತೆ ಅನ್ನುವುದನ್ನು ಮನವರಿಕೆ ಮಾಡಿಕೊಂಡ ನಾವು ಸರಳವಾಗಿ ಮದುವೆಯಾದೆವು’

‘ಮದುವೆಯ ಪ್ಲ್ಯಾನಿಂಗ್ ನೀವು ಮಾಡಿದ್ದೇಯಾದರೆ ನಿಮಗಿದು ಗೊತ್ತಿರುತ್ತದೆ. ಪ್ಲ್ಯಾನಿಂಗ್ ಮಾಡುತ್ತಾ ಹೊಟ್ಟೆಯಲ್ಲಿ ಹುಣ್ಣು ಮಾಡಿಕೊಳ್ಳುವುದು ನನಗೆ ಬೇಕಿರಲಿಲ್ಲ. ನಮ್ಮ ಮದುವೆ ಪರ್ಫೆಕ್ಟ್ ಆಗಿತ್ತು. ನಾವು ಮದುವೆ ಮಾಡಿಕೊಂಡ ನಂತರ ಮಧ್ಯಾಹ್ನ ಮನೆಗೆ ಹೋಗಿ ನಿದ್ರೆ ಮಾಡಿದೆವು,’ ಎಂದು ಫ್ರೀಡಾ ಹೇಳಿದ್ದಾರೆ.

ಈಗ ತುಂಬು ಗರ್ಭಿಣಿಯಾಗಿರುವ ಅವರು ಬೇಬಿ ಶಾವರ್ ಮತ್ತು ಬೇಬಿ ಬಂಪ್ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಬಾಲಿವುಡ್ನ ಹಲವಾರು ಕಲಾವಿದರು ಅವರಿಗೆ ಶುಭ ಹಾರೈಸುತ್ತಾ ಫೋಟೋಗಳನ್ನು ಮೆಚ್ಚಿ ಕೊಂಡಾಡಿದ್ದಾರೆ.

ಇದನ್ನೂ ಓದಿ:   ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಿಸುವಂತೆ ಸಿಎಂ ಬೊಮ್ಮಾಯಿಗೆ ಬಾಲಕಿ ಮನವಿ; ವಿಡಿಯೋ ವೈರಲ್

Click on your DTH Provider to Add TV9 Kannada