ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಿಸುವಂತೆ ಸಿಎಂ ಬೊಮ್ಮಾಯಿಗೆ ಬಾಲಕಿ ಮನವಿ; ವಿಡಿಯೋ ವೈರಲ್

TV9 Web
| Updated By: ganapathi bhat

Updated on: Oct 20, 2021 | 4:26 PM

Bengaluru Road: ಬೆಂಗಳೂರಿನ ಹೆಗ್ಗನಹಳ್ಳಿಯ ಸರ್ಕಾರಿ‌ ಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿರೋ ಧವನಿ ಸಿಎಂಗೆ ಗುಂಡಿಗಳನ್ನು ಬೇಗ ಮುಚ್ಚಿಸಿ ಸಿಎಂ ತಾತ ಎಂದು ಕೈ ಮುಗಿದು ಮನವಿ ಮಾಡಿದ್ದಾಳೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರು: ನಗರದಲ್ಲಿ ತಗ್ಗು ಗುಂಡಿಗಳನ್ನು ಮುಚ್ಚುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬಾಲಕಿ ಒಬ್ಬಳು ವೀಡಿಯೋ ಮೂಲಕ ಮನವಿ ಮಾಡಿದ್ದಾಳೆ. ಬೆಂಗಳೂರಿನ ಹೆಗ್ಗನಹಳ್ಳಿಯ ಸರ್ಕಾರಿ‌ ಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿರೋ ಧವನಿ ಸಿಎಂಗೆ ಗುಂಡಿಗಳನ್ನು ಬೇಗ ಮುಚ್ಚಿಸಿ ಸಿಎಂ ತಾತ ಎಂದು ಕೈ ಮುಗಿದು ಮನವಿ ಮಾಡಿದ್ದಾಳೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಗ್ಗುಗುಂಡಿಗಳನ್ನ ಮುಚ್ಚಿಸಿ, ಜನರನ್ನ ಬದುಕಿಸಿ. ತಗ್ಗು ಗುಂಡಿಗಳಿಂದ ಸುಮಾರು ಜನ ಸಾಯ್ತಿದ್ದಾರೆ. ಅವ್ರ ಸಾವಿನಿಂದ ಅವ್ರ ಕುಟುಂಬದವ್ರು ಹೇಗೆ ಜೀವನ ನಡೆಸ್ತಾರೆ. ನೀವೇ ಹೇಳಿ ತಾತ ಎಂದು ಬಾಲಕಿ ಸಿಎಂಗೆ ಪ್ರಶ್ನೆ ಮಾಡಿದ್ದಾಳೆ. ನನ್ನಂತ ಮಕ್ಕಳು, ನಮ್ ಅಪ್ಪ ಯಾವಾಗ ಬರ್ತಾರೋ, ಹೇಗೆ ಬರ್ತಾರೋ ಅಂತ ಕಾಯ್ತಾ ಇರ್ತಾರೆ ಅಲ್ವಾ. ನಾನು ಕೂಡ ನಮ್ ಅಪ್ಪ ಯಾವಾಗ ಬರ್ತಾರೋ ಅಂತ ಭಯದಿಂದ ಕಾಯ್ತಾ ಇರ್ತೇನೆ. ನಮ್ ಅಪ್ಪ-ಅಮ್ಮ‌, ನನಗೆ ಚಾಕ್ಲೇಟ್​ಗೆ ಕೊಟ್ಟಿರೋ ದುಡ್ಡನ್ನ ಕೊಡ್ತೇನೆ. ಪ್ಲೀಸ್ ಗುಂಡಿ ಮುಚ್ಚಿಸಿ ಸಿಎಂ ತಾತ ಎಂದು ಮನವಿ ಮಾಡಿದ್ದಾಳೆ.

ಇದನ್ನೂ ಓದಿ: Bengaluru: ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ರಸ್ತೆ ದುರಸ್ತಿ ಕೆಲಸ; ನಟ್ಟಿಗರಿಂದ ವಿವಿಧ ಪ್ರತಿಕ್ರಿಯೆ

ಇದನ್ನೂ ಓದಿ: Bengaluru: ಬಿಎಂಟಿಸಿ ಬಸ್​ನ ಬ್ರೇಕ್ ಫೇಲ್ ಆಗಿ ಅಪಘಾತ