Bengaluru: ಬಿಎಂಟಿಸಿ ಬಸ್​ನ ಬ್ರೇಕ್ ಫೇಲ್ ಆಗಿ ಅಪಘಾತ

Bengaluru: ಬಿಎಂಟಿಸಿ ಬಸ್​ನ ಬ್ರೇಕ್ ಫೇಲ್ ಆಗಿ ಅಪಘಾತ
ಬ್ರೇಕ್ ಫೇಲ್ ಆಗಿ ಅಪಘಾತ

BMTC Bus Accident: ಗೊರಗುಂಟೆ ಪಾಳ್ಯದಿಂದ ಹೆಬ್ಬಾಳಕ್ಕೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಬ್ರೇಕ್ ಫೈಲ್ ಆಗಿ ಅಪಘಾತಕ್ಕೆ ತುತ್ತಾಗಿದೆ. ಬ್ರೇಕ್ ಫೇಲ್ ಆದರೂ, ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಬಿಇಎಲ್ ಸರ್ಕಲ್ ಘಟನೆ ನಡೆದಿದೆ.

TV9kannada Web Team

| Edited By: ganapathi bhat

Oct 20, 2021 | 8:48 PM


ಬೆಂಗಳೂರು: ಬಿಎಂಟಿಸಿ ಬಸ್​ನ ಬ್ರೇಕ್ ಫೇಲ್ ಆಗಿ ಅಪಘಾತ ಸಂಭವಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಡಿವೈಡರ್ ಮೇಲಿದ್ದ ಮರಕ್ಕೆ ಬಸ್ ಗುದ್ದಿದೆ. ಬಸ್ ನಲ್ಲಿ ಇದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗೊರಗುಂಟೆ ಪಾಳ್ಯದಿಂದ ಹೆಬ್ಬಾಳಕ್ಕೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಬ್ರೇಕ್ ಫೈಲ್ ಆಗಿ ಅಪಘಾತಕ್ಕೆ ತುತ್ತಾಗಿದೆ. ಬ್ರೇಕ್ ಫೇಲ್ ಆದರೂ, ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಬಿಇಎಲ್ ಸರ್ಕಲ್ ಘಟನೆ ನಡೆದಿದೆ.

ಧಾರವಾಡ: ಬೈಕ್​ಗೆ ಡಿಕ್ಕಿ ತಪ್ಪಿಸಲು ಹೋಗಿ ಸರ್ಕಾರಿ ಬಸ್ ಪಲ್ಟಿ
ಜಿಲ್ಲೆಯ ಅಣ್ಣಿಗೇರಿ ಬಳಿ ಸರ್ಕಾರಿ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ 6 ಪ್ರಯಾಣಿಕರಿಗೆ ಗಾಯ ಆಗಿದ್ದು, ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನವಲಗುಂದದಿಂದ ಗದಗಕ್ಕೆ ಹೊರಟಿದ್ದ ಸರ್ಕಾರಿ ಬಸ್ ಪಲ್ಟಿಯಾಗಿದೆ. ಎದುರಿಗೆ ಬಂದ ಬೈಕ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ಬಸ್ ಪಲ್ಟಿ ಆಗಿದೆ ಎಂದು ಹೇಳಲಾಗಿದೆ. ಬಸ್ ನಲ್ಲಿ 40 ಜನರ ಪ್ರಯಾಣ ಮಾಡುತ್ತಿದ್ದರು. ಉಳಿದ ಪ್ರಯಾಣಿಕರೆಲ್ಲ ಸುರಕ್ಷಿತವಾಗಿ ಇದ್ದಾರೆ ಎಂದು ತಿಳಿದುಬಂದಿದೆ. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಧಾರವಾಡ: ಬೈಕ್​ಗೆ ಡಿಕ್ಕಿ ತಪ್ಪಿಸಲು ಹೋಗಿ ಸರ್ಕಾರಿ ಬಸ್ ಪಲ್ಟಿ

ಇದನ್ನೂ ಓದಿ: ವಿಜಯಪುರದಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಕಾರು ಡಿಕ್ಕಿ! ಭೀಕರ ಅಪಘಾತದಲ್ಲಿ ನಾಲ್ವರು ಮೃತ

Follow us on

Related Stories

Most Read Stories

Click on your DTH Provider to Add TV9 Kannada