2020-2021ನೇ ಸಾಲಿನ ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ ಬೊಮ್ಮಾಯಿ

ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ್ದು, 2020 ಹಾಗೂ 2021 ನೇ ಸಾಲಿನ ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

2020-2021ನೇ ಸಾಲಿನ ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ


ಬೆಂಗಳೂರು: ಇಂದು (ಅಕ್ಟೋಬರ್ 20) ಮಹರ್ಷಿ ವಾಲ್ಮೀಕಿ ಜಯಂತಿಯನ್ನು ನಾಡಿನಾದ್ಯಂತ ಆಚರಿಸಲಾಗುತ್ತಿದೆ. ಈ ದಿನದ ಅಂಗವಾಗಿ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ್ದು, 2020 ಹಾಗೂ 2021 ನೇ ಸಾಲಿನ ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

2021ನೇ ಸಾಲಿನಲ್ಲಿ ಡಾ.ಕೆ.ಆರ್. ಪಾಟೀಲ್, ಡಾ.ಬಿ. ಎಲ್.ವೇಣು, ಗೌರಿ ಕೊರಗ, ಮಾರಪ್ಪ ನಾಯಕ, ಸಿರಿಗೆರೆ ತಿಪ್ಪೇಶ್​ಗೆ ಸನ್ಮಾನಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

2021ನೇ ಸಾಲಿಗೆ ಕೆ.ಸಿ.ನಾಗರಾಜು, ಲಕ್ಷ್ಮಿ ಗಣಪತಿ ಸಿದ್ದಿ, ಪ್ರೊ.ಎಸ್.ಆರ್.ನಿರಂಜನ, ಭಟ್ರಹಳ್ಳಿ ಗೂಳಪ್ಪ, ಅಶ್ವತ್ಥ ರಾಮಯ್ಯ, ಜಂಭಯ್ಯ ನಾಯಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ವಿಶ್ವದ ಶ್ರೇಷ್ಠ 10 ಕಾವ್ಯಗಳಲ್ಲಿ ಪ್ರಮುಖವಾದದ್ದು ರಾಮಾಯಣ. ರಾಮಾಯಣ ರಚಿಸಿದ ಏಕಮೇವ ಕವಿ ಮಹರ್ಷಿ ವಾಲ್ಮೀಕಿ. ಭರತವರ್ಷಕ್ಕೆ ಶ್ರೇಷ್ಠ ಸಂಸ್ಕೃತಿ ಕೊಟ್ಟ ಏಕಮೇವ ಕವಿ ಮಹರ್ಷಿ ವಾಲ್ಮೀಕಿ ಎಂದು ಹೇಳಿದ್ದಾರೆ.

ವಾಲ್ಮೀಕಿ ಪೀಠದ ಸ್ವಾಮೀಜಿಗಳ ಜೊತೆಗೂ ಕೂಡ ಹಲವು ಚರ್ಚೆ ಮಾಡಿದ್ದೇವೆ. ಸಚಿವಾಲಯ ಆಗಬೇಕು ಎಂದು ವಾಲ್ಮೀಕಿ ಸ್ವಾಮೀಜಿ ಹೇಳಿದ್ದರು. ನಾನು ಸಿಎಂ ಆದ ತಕ್ಷಣವೇ ಎಸ್‌ಟಿ ಜನಾಂಗಕ್ಕೆ ಕಲ್ಯಾಣ ಸಚಿವಾಲಯ ಪ್ರಾರಂಭ ಮಾಡಿದ್ದೇನೆ. 7500 ಕೋಟಿ ಅನುದಾನ ಸಮುದಾಯಕ್ಕೆ ನೀಡಲಾಗುತ್ತಿದೆ. ಭೂ ಒಡೆತನ ಅಭಿಯಾನ ಮಾಡಿದ್ದೇವೆ. ಈಗಾಗಲೇ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಜಮೀನು ನೀಡಲಾಗುತ್ತಿದೆ. ಇದನ್ನು ಎರಡು ಪಟ್ಟು ಹೆಚ್ಚಳ ಮಾಡಬೇಕು ಅಂತ ತೀರ್ಮಾನ ಮಾಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಎಸ್‌ಸಿ, ಎಸ್​ಟಿ ಸಮುದಾಯದ ಹೆಣ್ಣುಮಕ್ಕಳ ಸ್ವಯಂ ಉದ್ಯೋಗಕ್ಕೆ ನೆರವು ನೀಡಲು ನಬಾರ್ಡ್ ಜೊತೆ ಮಾತುಕತೆ ಮಾಡಿದ್ದೇನೆ ಎಸ್‌ಸಿ, ಎಸ್​ಟಿ ಸಮುದಾಯದ ಹೆಣ್ಣುಮಕ್ಕಳು ಆರ್ಥಿಕವಾಗಿ ಸ್ವಾವಲಂಬನೆ ಆಗಬೇಕು ಶಿಕ್ಷಣ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎನ್ನುವುದು ಸ್ವಾಮೀಜಿ ಹಾಗೂ ಜನಾಂಗದ ಅಭಿಪ್ರಾಯ. ಶೇ 50 ಒಳಗೆಯೇ ನಾವು ಎಲ್ಲ ಮೀಸಲಾತಿ ನೀಡಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಎಲ್ಲ ಸಮುದಾಯಗಳ ಬೇಡಿಕೆ ಈಡೇರಿಸಲು ಚರ್ಚೆ ನಡೆಯುತ್ತಿದೆ. ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತಿದ್ದೇವೆ. ಸಾಮಾಜಿಕ ಸಮಾನತೆ ತರಲು ನಾನು ತಯಾರಿದ್ದೇನೆ. ಆದರೆ ಇದು ಸುಲಭದ ಕೆಲಸ ಅಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.

ಇದನ್ನೂ ಓದಿ:
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಸೂಪರ್ ಕೊರೊನಾ ವಾರಿಯರ್ ಪ್ರಶಸ್ತಿ ಪ್ರದಾನ

ವಾಲ್ಮೀಕಿ ದಿನಾಚರಣೆ: ವಿವಿಧ ಕ್ಷೇತ್ರಗಳ ಆರು ಮಂದಿ ಸಾಧಕರು ಪ್ರಶಸ್ತಿಗೆ ಆಯ್ಕೆ- ಶ್ರೀರಾಮುಲು

Click on your DTH Provider to Add TV9 Kannada