ಕೊರೊನಾ ಬಹುತೇಕ ಶೂನ್ಯ, ಮಾಸ್ಕ್ ಹಾಕದಿದ್ದರೆ ಇನ್ನು ಮುಂದೆ ಬಿಬಿಎಂಪಿ ದಂಡ ವಸೂಲಿ ಮಾಡುವುದಿಲ್ಲ!

BBMP mask: ಮಾಸ್ಕ್ ಹಾಕದವರಿಂದ ಕಟ್ಟುನಿಟ್ಟಾಗಿ ದಂಡ ವಸೂಲಿ ಮಾಡದಂತೆ ಸೂಚಿಸಿರುವ ಬಿಬಿಎಂಪಿ, ಭಾಗಶಃ ಜನರು ಮಾಸ್ಕ್ ಧರಿಸುತ್ತಿದ್ದು, ಸೋಂಕಿನ ಪ್ರಮಾಣ ತಗ್ಗಿದೆ. ಅಂದಹಾಗೆ ಬಿಬಿಎಂಪಿ ಮೇ 2020 ರಿಂದ ಮಾಸ್ಕ್ ಹಾಕದವರಿಂದ ದಂಡ ವಸೂಲಿ ಮಾಡುತ್ತಿತ್ತು. ಮೇ 2020 ರಿಂದ ಇದೂವರೆಗೂ 14,03,09,197 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಕೊರೊನಾ ಬಹುತೇಕ ಶೂನ್ಯ, ಮಾಸ್ಕ್ ಹಾಕದಿದ್ದರೆ ಇನ್ನು ಮುಂದೆ ಬಿಬಿಎಂಪಿ ದಂಡ ವಸೂಲಿ ಮಾಡುವುದಿಲ್ಲ!
ಕೊರೊನಾ ಬಹುತೇಕ ಶೂನ್ಯ, ಮಾಸ್ಕ್ ಹಾಕದವರಿಂದ ಇನ್ನು ಮುಂದೆ ಬಿಬಿಎಂಪಿ ದಂಡ ವಸೂಲಿ ಮಾಡುವುದಿಲ್ಲ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Oct 20, 2021 | 10:36 AM

ಬೆಂಗಳೂರು: ಒಂದೆರಡು ವರ್ಷಗಳಿಂದ ಕೊರೊನಾ ಮಹಾಮಾರಿತಿಂದ ಕಂಗೆಟ್ಟಿದ್ದ ಜನಕ್ಕೆ ಮಾಸ್ಕ್​ ಎಂಬುದು ಅನಿವಾರ್ಯವಾಗಿತ್ತು. ಮತ್ತು ಅದನ್ನು ಕಡ್ಡಾಯಗೊಳಿಸಲಾಗಿತ್ತು. ಇಲ್ಲದಿದ್ದರೆ ದಂಡ ಕಟ್ಟಿಟ್ಟಬುತ್ತಿ ಎಂಬಂತಾಗಿತ್ತು. ಇದರಿಂದ ದಂಡ ಕಟ್ಟುವ ಪರಿಸ್ಥಿತಿ ಎದುರಾದಾಗ ಕೊರೊನಾ ಕಾಡಿದಷ್ಟೇ ಕಾಟವನ್ನು ಅನುಭವಿಸಿದ್ದರು ಜನ. ಆದರೆ ಪರಿಸ್ಥಿತಿ ಈಗ ತಿಳಿಯಾಗುತ್ತಿದೆ. ಈ ಸಂದರ್ಭದಲ್ಲಿ ಮಾಸ್ಕ್ ಹಾಕದವರಿಂದ ದಂಡ ವಸೂಲಿಗೆ ತಾತ್ಕಾಲಿಕ ಬ್ರೇಕ್ ನೀಡುವ ಸಾಧ್ಯತೆಗಳು ಗೋಚರವಾಗಿವೆ.

ಕೊರೊನಾ ಕಾಟವೂ ತಪ್ಪಿತು; ಮಾಸ್ಕ್​ ಕಾಟವೂ ತಪ್ಪಿತು? ಇಷ್ಟು ದಿನ ಭೀಕರ ಕೊರೊನಾ ಭೀತಿಯ ಹಿನ್ನೆಲೆ ಬಿಬಿಎಂಪಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿತ್ತು. ಮಾರ್ಷೆಲ್ ಗಳಿಂದ ಮಾಸ್ಕ್ ಹಾಕದವರಿಂದ ನೂರಾರು ರೂಪಾಯಿ ವಸೂಲಿ ಮಾಡಿಸುತ್ತಿತ್ತು. ಆದರೆ ಈಗ ಬದಲಾದ ಪರಿಸ್ಥಿತಿಯಲ್ಲಿ ಕೊರೊನಾ ಸೋಂಕು ಬಹುತೇಕ ಶೂನ್ಯ ಪ್ರಮಾಣಕ್ಕೆ ಕುಸಿದಿರುವಾಗ ಕಟ್ಟುನಿಟ್ಟಾಗಿ ದಂಡ ವಸೂಲಿ ಮಾಡದಂತೆ ಮಾರ್ಷೆಲ್ ಗಳಿಗೆ ಬಿಬಿಎಂಪಿ ಮೌಖಿಕ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಮಾಸ್ಕ್ ಹಾಕದವರಿಂದ ಕಟ್ಟುನಿಟ್ಟಾಗಿ ದಂಡ ವಸೂಲಿ ಮಾಡದಂತೆ ಸೂಚಿಸಿರುವ ಬಿಬಿಎಂಪಿ, ಭಾಗಶಃ ಜನರು ಮಾಸ್ಕ್ ಧರಿಸುತ್ತಿದ್ದು, ಸೋಂಕಿನ ಪ್ರಮಾಣ ತಗ್ಗಿದೆ. ಹೀಗಾಗಿ ಮಾಸ್ಕ್ ಹಾಕದವರಿಗೆ ದಂಡ ಹಾಕದಂತೆ ಮಾರ್ಷೆಲ್ ಗಳಿಗೆ ಸೂಚನೆ‌ ನೀಡಲಾಗಿದೆ. ಅಂದಹಾಗೆ ಬಿಬಿಎಂಪಿ ಮೇ 2020 ರಿಂದ ಮಾಸ್ಕ್ ಹಾಕದವರಿಂದ ದಂಡ ವಸೂಲಿ ಮಾಡುತ್ತಿತ್ತು. ಮೇ 2020 ರಿಂದ ಇದೂವರೆಗೂ 14,03,09,197 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಇದೀಗ ಮಾಸ್ಕ್ ದಂಡ ಪ್ರಯೋಗಕ್ಕೆ ಬಿಬಿಎಂಪಿ ತಾತ್ಕಾಲಿಕ ವಿರಾಮ ನೀಡಿದೆ.

ಇದನ್ನೂ ಓದಿ: Bad Breath Problem: ನಿಮ್ಮ ಮಾಸ್ಕ್ ಒಳಗೆ ದುರ್ವಾಸನೆಯೇ? ಕೆಟ್ಟ ಉಸಿರಾಟ ಸಮಸ್ಯೆಗೆ ಪರಿಹಾರ ಕ್ರಮಗಳೇನು ಯೋಚಿಸಿದ್ದೀರಾ?

ಪೊಲೀಸರ ತಪಾಸಣೆ ವೇಳೆ ಕಾರು ನಿಲ್ಲಿಸದೆ ಪರಾರಿಗೆ ಯತ್ನಿಸಿದವ್ರು ಅರೆಸ್ಟ್| GanjaSeeze |Tv9kannada

(BBMP not to fine maskless people strictly orders marshals not to fine people without masks)

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ