ವಿಜಯಪುರದಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಕಾರು ಡಿಕ್ಕಿ! ಭೀಕರ ಅಪಘಾತದಲ್ಲಿ ನಾಲ್ವರು ಮೃತ

ಕಾರಿನಲ್ಲಿದ್ದ ವಿಜಯಪುರ ನಗರ ಮೂಲದ ವ್ಯಕ್ತಿ, ಮಹಿಳೆ ಮತ್ತು ಒಂದು ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಇನ್ನು ಮೂವರಿಗೆ ಗಾಯಗಳಾಗಿವೆ.

ವಿಜಯಪುರದಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಕಾರು ಡಿಕ್ಕಿ! ಭೀಕರ ಅಪಘಾತದಲ್ಲಿ ನಾಲ್ವರು ಮೃತ
ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ

ವಿಜಯಪುರ: ಕೆಟ್ಟು ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಮೃತರು ಕಾರಲ್ಲಿದ್ದ ಮೂವರು, ಲಾರಿ ಚಾಲಕ ಎಂದು ತಿಳಿದುಬಂದಿದೆ. ಕಾರಿನಲ್ಲಿದ್ದ ವಿಜಯಪುರ ನಗರ ಮೂಲದ ವ್ಯಕ್ತಿ, ಮಹಿಳೆ ಮತ್ತು ಒಂದು ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಇನ್ನು ಮೂವರಿಗೆ ಗಾಯಗಳಾಗಿವೆ.

ಲಾರಿ ಕೆಟ್ಟು ನಿಂತಿತ್ತು. ಕೆಟ್ಟು ನಿಂತಿದ್ದ ಲಾರಿ ದುರಸ್ಥಿಯಲ್ಲಿ ಚಾಲಕ ನಿರತನಾಗಿದ್ದ. ಈ ವೇಳೆ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಹಾಗೂ ಲಾರಿ ಚಾಲಕ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಮೃತರ ಹೆಸರು ಇನ್ನೂ ತಿಳಿದು ಬಂದಿಲ್ಲ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದರಾರೆ.

ಮೃತಪಟ್ಟವರ ಗುರುತು ಪತ್ತೆ
ಕಾರಿನಲ್ಲಿ ಮೃತಪಟ್ಟವರು ಮಂಜುನಾಥ ಮುಂಡೆವಾಡಿ(42) ಪತ್ನಿ ಸಾವಿತ್ರಿ(37), ಆರಾಧ್ಯ (8) ಎಂದು ತಿಳಿದುಬಂದಿದೆ. ಮಂಜುನಾಥ ಮುಂಡೆವಾಡಿ ನಗರದ ಪಿಡಿಜೆ ಶಾಲೆಯ ಶಿಕ್ಷಕ. ಇವರು ನಗರದ ಸಾಯಿ ಪಾರ್ಕ್ ನಿವಾಸಿಗಳು. ಗೋವಾದಿಂದ ವಾಪಾಸ್ ವಿಜಯಪುರಕ್ಕೆ ಆಗಮಿಸುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.

ವ್ಯಕ್ತಿಗೆ ನಾಲ್ವರಿಂದ ಥಳಿತ
ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಬೇಕರಿಯಲ್ಲಿ ಕೆಲಸ ಮಾಡುವ ವ್ಯಕ್ತಿಗೆ ನಾಲ್ವರು ಥಳಿಸಿದ್ದಾರೆ. ಹಲ್ಲೆಯ ದೃಶ್ಯ ಬೇಕರಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅ.18 ರಂದು ಘಟನೆ ನಡೆದಿದ್ದು. ತಡವಾಗಿ ಬೆಳಕಿಗೆ ಬಂದಿದೆ. ಸದ್ದಾಂ ಹಲ್ಲೆಗೊಳಗಾದ ವ್ಯಕ್ತಿ ಎಂದು ತಿಳಿದುಬಂದಿದೆ.

ಇದನ್ನೂ ಓದಿ

ನೆಲಮಂಗಲದಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಟೋಲ್ ಸೆಕ್ಯುರಿಟಿ ಗಾರ್ಡ್ ಮೇಲೆ ಹರಿದ ಲಾರಿ! ಸ್ಥಳದಲ್ಲೇ ಸಾವು

Coronavirus cases in India: ಭಾರತದಲ್ಲಿ 14,623 ಹೊಸ ಕೊವಿಡ್ ಪ್ರಕರಣ ಪತ್ತೆ, 197 ಮಂದಿ ಸಾವು

Click on your DTH Provider to Add TV9 Kannada