ವೈಯಕ್ತಿಕ ಟೀಕೆಗಳಿಂದ ಲಾಭ ಸಿಗುತ್ತೆ ಎಂದು ತಿಳಿದಿದ್ದಾರೆ; ಅವರಿಗೆ ಬುದ್ಧಿ ಹೇಳುವ ಶಕ್ತಿ ಇಲ್ಲ: ಹೆಚ್ಡಿ ದೇವೇಗೌಡ
ಅವರು ಬೇಕಾದಷ್ಟು ಟ್ವೀಟ್ ಮಾಡಿಕೊಳ್ಳಲಿ ಎಂದು ದೇವೇಗೌಡ ಹೇಳಿದ್ದಾರೆ. ವೈಯಕ್ತಿಕ ಟೀಕೆಗಳಿಂದ ಲಾಭ ಸಿಗುತ್ತೆ ಎಂದು ತಿಳಿದಿದ್ದಾರೆ. ಅವರಿಗೆ ಬುದ್ಧಿ ಹೇಳುವ ಶಕ್ತಿ ಇಲ್ಲ. ಎರಡು ಪಕ್ಷಗಳಿಗೆ ಹಣಕಾಸಿನ ಶಕ್ತಿ ಇದೆ ಎಂದು ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಜಯಪುರ: ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಎಂಬುದು ಬಿಜೆಪಿ, ಕಾಂಗ್ರೆಸ್ ಪಕ್ಷದ ನಡುವಿನ ಸ್ಪರ್ಧೆಯಾಗಿದೆ. ನಮಗೆ ಅವರ ಬಗ್ಗೆ ಟೀಕೆ ಮಾಡುವಷ್ಟು ಶಕ್ತಿ ಇಲ್ಲ ಎಂದು ವಿಜಯಪುರ ಜಿಲ್ಲೆ ಸಿಂದಗಿ ಕ್ಷೇತ್ರದ ರಾಮಪುರ ಗ್ರಾಮದಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಎಂಬ ಹೇಳಿಕೆ ವಿಚಾರವಾಗಿ ಬಹಳಷ್ಟು ಚರ್ಚೆಗಳಾಗುತ್ತಿದೆ. ಈ ಬಗ್ಗೆ ಇಂದು (ಅಕ್ಟೋಬರ್ 20) ಹೆಚ್.ಡಿ. ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.
ಇಲ್ಲಿ ಉಪಚುನಾವಣೆಗಿಂತ ಹೆಚ್ಚಾಗಿ ಕಾಂಗ್ರೆಸ್, ಬಿಜೆಪಿ ಮುಖಂಡರ ಮಧ್ಯೆ ಸ್ಪರ್ಧೆ ಇದೆ. ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ‘ಬೈಗಮಿ’ ಟ್ವೀಟ್ಗಳಿಂದ ಚುನಾವಣೆಗಳು ಗೆಲ್ಲುವುದಕ್ಕೆ ಆಗಲ್ಲ. ಅದರಿಂದ ಲಾಭ ಸಿಗುವುದಾದ್ರೆ ಟ್ವೀಟ್ ಮಾಡಿಕೊಳ್ಳಲಿ. ಅವರು ಬೇಕಾದಷ್ಟು ಟ್ವೀಟ್ ಮಾಡಿಕೊಳ್ಳಲಿ ಎಂದು ದೇವೇಗೌಡ ಹೇಳಿದ್ದಾರೆ. ವೈಯಕ್ತಿಕ ಟೀಕೆಗಳಿಂದ ಲಾಭ ಸಿಗುತ್ತೆ ಎಂದು ತಿಳಿದಿದ್ದಾರೆ. ಅವರಿಗೆ ಬುದ್ಧಿ ಹೇಳುವ ಶಕ್ತಿ ಇಲ್ಲ. ಎರಡು ಪಕ್ಷಗಳಿಗೆ ಹಣಕಾಸಿನ ಶಕ್ತಿ ಇದೆ ಎಂದು ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇವರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿ ವ್ಯಕ್ತಿಗತ ನಿಂದನ ಮಾಡುವ ಹವ್ಯಾಸ ಹಚ್ಚಿಕೊಂಡಿದ್ದಾರೆ. ಟ್ವೀಟ್ ಮತ್ತು ಮರುಟ್ವೀಟ್ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತುಂಬಾ ನಡೆಯುತ್ತಿದೆ. ಟ್ವೀಟ್ನಿಂದ ರಾಜಕೀಯ ಗೆಲ್ಲಲು ಆಗಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ, ಟ್ವೀಟ್ ವಾರ್ ಕುರಿತಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಧಾರವಾಡ: ಮೌಲ್ಯಾಧಾರಿತ ರಾಜಕಾರಣ ಮಾಡಬೇಕು ರಾಜಕಾರಣಿಗಳ ಮಧ್ಯೆ ಟೀಕೆ ಇರಬೇಕು. ಆದರೆ ಕೀಳುಮಟ್ಟದ ಹೇಳಿಕೆಗಳನ್ನು ನೀಡಬಾರದು. ಯಾರೂ ವೈಯಕ್ತಿಕ ವಿಚಾರಗಳಿಗೆ ಹೋಗಬಾರದು. ಮೌಲ್ಯಾಧಾರಿತ ರಾಜಕಾರಣವನ್ನು ಮಾಡಬೇಕು ಎಂದು ಧಾರವಾಡದಲ್ಲಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯ ತಿಳಿಸಿದ್ದಾರೆ.
ತೈಲ ಬೆಲೆ ಏರಿಕೆಗೆ ಕೊರೊನಾ ಕಾರಣ ಎಂಬ ಉಮೇಶ್ ಕತ್ತಿ ಹೇಳಿಕೆಗೆ ಬಸವರಾಜ ಹೊರಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಆ ರೀತಿ ಹೇಳಬಾರದು. ಓರ್ವ ಸಚಿವನ ಮಾತು ಸರ್ಕಾರದ್ದೇ ಮಾತು ಇದ್ದಂತೆ. ಯಾವುದೇ ಸಚಿವ ಜವಾಬ್ದಾರಿಯಿಂದ ಮಾತನಾಡಬೇಕು. ಮಂತ್ರಿ ಮಾತಿಗೂ, ಜನರ ಮಾತಿಗೂ ವ್ಯತ್ಯಾಸವಿದೆ ಎಂದು ಧಾರವಾಡದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಇನ್ನೂ ಎಷ್ಟು ದಿನ ಬದುಕಿರುತ್ತೇನೋ, ನಾನು ಸತ್ತರೂ ಪ್ರಾದೇಶಿಕ ಪಕ್ಷ ಉಳಿಯಬೇಕು: ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ
ಇದನ್ನೂ ಓದಿ: ಡಿಕೆ ಶಿವಕುಮಾರ್, ಕೆಪಿಸಿಸಿ ಐಟಿ ಸೆಲ್ ಮುಖ್ಯಸ್ಥರ ವಿರುದ್ಧ ಬಿಜೆಪಿ ದೂರು; ಪೊಲೀಸ್ ಠಾಣೆ ಮೆಟ್ಟಿಲೇರಿದ ಟ್ವೀಟ್ ವಾರ್
Published On - 2:37 pm, Wed, 20 October 21