ಮುಸ್ಲಿಂ ಹೆಣ್ಣುಮಗಳನ್ನು ನಾವು ಜೂಜಿಗಾಗಿ ಸ್ಪರ್ಧೆ ಮಾಡಲು ಟಿಕೆಟ್ ನೀಡಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಗೆ ತಿರುಗೇಟು ನೀಡಿದರು. ನಾನು ಬಿಜೆಪಿ ಏಜೆಂಟ್ ಆಗಿ ಹೆಣ್ಣು ಮಗಳನ್ನು ಬಲಿ ಕೊಡಲು ಬಂದಿಲ್ಲ. ಹಾಗಂತ ಹೇಳುವವರಿಗೆ ದೈವವೇ ಉತ್ತರಿಸುತ್ತದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಗೆ ಕುಟುಕಿದರು. ತನ್ಮೂಲಕ ಕಾಂಗ್ರೆಸ್ ಸೋಲಿಸಲು ಜೆಡಿಎಸ್ ಅಲ್ಪಸಂಖ್ಯಾತ ಸಮಾಜದ ಮಹಿಳೆಗೆ ಟಿಕೆಟ್ ನೀಡಲಾಗಿದೆ ಎಂದು ಜರಿದಿರುವ ಕಾಂಗ್ರೆಸ್ಸಿಗರಿಗೆ ದೇವೇಗೌಡ ಟಾಂಗ್ ಕೊಟ್ಟರು.
ಅಭ್ಯರ್ಥಿ ನಾಜಿಯಾ ಪರ ಗೆಲುವಿಗಾಗಿ ಮತದಾರರಿಗೆ ಕೈಮುಗಿದು ಮನವಿ ಮಾಡಿಕೊಂಡರು. ರಾಜಕೀಯ ಸಂಪೂರ್ಣ ಹಾಳಾಗಿ ಹೋಗಿದೆ. ಕೇವಲ ಗೆದ್ದು ಬಂದು ದುಡ್ಡು ಮಾಡೋದಷ್ಟೇ ಆಗಿದೆ ಎಂದು ನಿನ್ನೆ ರಾತ್ರಿ ನಡೆದ ಸಭೆಯಲ್ಲಿ ದೇವೇಗೌಡ ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಸದ್ಯಕ್ಕೆ ಓರ್ವ ಶಾಸಕ ಮಾತ್ರ ಜೆಡಿಎಸ್ ಪಕ್ಷದವರಿದ್ದಾರೆ. ನಾಗಠಾಣ ಶಾಸಕ ದೇವಾನಂದ ಚೌವ್ಹಾಣ ಅವರು ನಮ್ಮ ಶಾಸಕರು. 2013 ರಲ್ಲಿ ರಾಜೂಗೌಡ ಹಾಗೂ ಇತರರು ಕಡಿಮೆ ಅಂತರದಲ್ಲಿ ಸೋತಿದ್ದಾರೆ. 2023 ರ ಚುನಾವಣೆಯಲ್ಲಿ ಹೆಚ್ಚಿನ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ದೇವೇಗೌಡ ನಾನು ಎಲ್ಲಿಂದ ಬಂದಿದ್ದೇನೋ ಅಲ್ಲಿಗೆ ಹೋಗೋ ಮುಂಚೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಉಳಿಯುತ್ತದೆ ಎಂಬ ನಂಬಿಕೆಯಿದೆ ಎಂದು ತಮ್ಮ ಪ್ರಾದೇಶಿಕ ಪಕ್ಷದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
Kerala floods: House collapses into river in Kottayam’s Mundakayam after heavy rainfall
(vijayapura sindagi by election jds supremo hd devegowda intensifies canvas for jds candidate najiya angadi)